ಬೆಂಗಳೂರು, (ಮೇ.28): ಕೊರೋನಾ ಆತಂಕದ ಮಧ್ಯೆ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದೆ. ಇದಕ್ಕೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

,ಮತ್ತೊಂದೆಡೆ ಈ ಬ್ಲ್ಯಾಂಕ್ ಫಂಗಸ್‌ಗೆ ಲೈಸೋಮಲ್‌ ಅಂಫೋಟೆರಿಸಿನ್‌- ಬಿ ಎನ್ನುವ ಔಷಧಿ ಕೊರತೆ ಎದುರಾಗಿದೆ ಎನ್ನುವುದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾತಾಯಣ ಪ್ರತಿಕ್ರಿಯಿಸಿದ್ದು,  ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಕೊಡಲಾಗುವ ಲೈಸೋಮಲ್‌ ಅಂಫೋಟೆರಿಸಿನ್‌- ಬಿ  (Liposomal Amphotericin -B) ಔಷಧಿಯ 75,000 ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಸಿಕ್ತಿಲ್ಲ ಔಷಧಿ, ಮೆಡಿಸನ್ ಪೂರೈಕೆಗೆ ಹಿಂದೇಟು ಹಾಕ್ತಿರೋದ್ಯಾಕೆ..?

ಮುಂಬೈನ ಭಾರತ್‌ ಸೀರಂ ಕಂಪನಿಗೆ 50,000 ವಯಲ್ಸ್‌ ಹಾಗೂ ಬೆಂಗಳೂರಿನ ಮೈಲಾನ್‌ ಫಾರ್ಮಾಸ್ಯೂಟಿಕಲ್‌ ಕಂಪನಿಗೆ 25,000 ವಯಲ್ಸ್‌ ಲೈಸೋಮಲ್‌ ಅಂಫೋಟೆರಿಸಿನ್‌ ಖರೀದಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಈ ಎರಡೂ ಕಂಪನಿಗಳಿಗೆ ಗುರುವಾರವೇ (ಮೇ 27) ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿ ಆದೇಶ ನೀಡಲಾಗಿದ್ದು, ಸೀರಂ ಕಂಪನಿ ಏಳು ದಿನದಲ್ಲಿ ಹಾಗೂ ಮೈಲಾನ್‌ ಕಂಪನಿ ಮೂರು ದಿನದಲ್ಲಿ ಇಷ್ಟೂ ಔಷಧಿಯನ್ನು ಪೂರೈಕೆ ಮಾಡಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.