Asianet Suvarna News Asianet Suvarna News

ವೃದ್ಧಾಪ್ಯ ವೇತನ 1,200 ರೂ.ನಿಂದ 2,000 ರೂ.ಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಕ್ಕೆ ಭಾರಿ ಬೇಡಿಕೆಯಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶೀಘ್ರ ವೃದ್ಧಾಪ್ಯ ವೇತನ ಹೆಚ್ಚಳ ಮಾಡಲಾಗುವುದು.

Karnataka govt Old age pension increased from Rs 1200 to Rs 2000 CM Siddaramaiah info sat
Author
First Published Oct 1, 2023, 2:01 PM IST

ಬೆಂಗಳೂರು (ಅ.01): ರಾಜ್ಯದಲ್ಲಿ ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಕ್ಕೆ ಭಾರಿ ಬೇಡಿಕೆಯಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ 2024-25ನೇ ಸಾಲಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನವನ್ನು ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ವಿಶ್ವ ಹಿರಿಯರ ದಿನಾಚರಣೆ ಮಾಡುತ್ತಿದ್ದೆವು. ನಮ್ಮ ಸರ್ಕಾರ ಸಹಾ ಹಿರಿಯ ನಾಗರಿಕರ ದಿನಾಚರಣೆ ಮಾಡ್ತಿದೆ. ನಾಡಿನ ಎಲ್ಲಾ ಹಿರಿಯ ನಾಗರಿಕರಿಕರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಶುಭಾಶಯ ಕೊರುತ್ತೇನೆ. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ಬಜೆಟ್ ನಲ್ಲಿ ವೃದ್ಧಾಪ್ಯದ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡ್ತೀನಿ. ಎಷ್ಟು ಅಂತ ಈಗಲೇ ಹೇಳೋದಿಲ್ಲ ಈಗಿರೋದಕ್ಕಿಂತ ಹೆಚ್ಚಳ ಮಾಡ್ತೀವಿ ಎಂದರು.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ನಾಡಿನ ಎಲ್ಲ ವೃದ್ಧರೂ 100 ವರ್ಷಕ್ಕೂ ಹೆಚ್ಚು ಕಾಲ ಬಾಳಿ ಎಂದು ಆಶಿಸುತ್ತೇನೆ. ಬದುಕಿರೋತನಕ ಆರೋಗ್ಯವಾಗಿರಲಿ ಎಂದು ಆಶಿಸುತ್ತೇನೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಅಂದ್ರೆ ಹಿರಿಯರನ್ನ ಗೌರವಿಸೋದು. ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಒಂದು ಭಾಗ. ಬದಿಕಿರೋತನ ನಾವು ಸಾರ್ಥಕ ಜೀವನ ಸಾಗಬೇಕು. ಮನುಷ್ಯರಾಗಿ ಸಾಯುವುದು ಬಹಳ ಮುಖ್ಯವಾಗಿದೆ. ಕುವೆಂಪು ಹೇಳಿದಂತೆ ಎಲ್ಲರೂ ವಿಶ್ವಮಾನವರಾಗಬೇಕು. ಯಾವ ಧರ್ಮದಲ್ಲಿ ಹುಟ್ಟಿರಬಹುದು, ಆ ಧರ್ಮ ಪ್ರೀತಿಸಬೇಕು ಗೌರವಿಸಬೇಕು ಆದ್ರೆ ಇನ್ನೊಂದು ಧರ್ಮವನ್ನ ದ್ವೇಷಿಸಬಾರದು ಎಂದು ತಿಳಿಸಿದರು.

ವೇದಿಕೆಯಲ್ಲೇ ವೃದ್ಧಾಪ್ಯ ವೇತನ ಹೆಚ್ಚಿಸುವಂತೆ ಮನವಿ ಮಾಡಿದ ಸಚಿವೆ: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಕರ್ನಾಟಕದ ಸುಮಾರು 49 ಲಕ್ಷ ವೃದ್ಧರಿಗೆ ಸರ್ಕಾರದಿಂದ ಮಾಸಿಕ 1,200 ರೂ. ವೃದ್ಧಾಪ್ಯ ವೇತನವನ್ನು ನೀಡಲಾಗುತ್ತಿದೆ. ಇದನ್ನು 2,000 ರೂ.ವರೆಗೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನವಿ ಮಾಡಿದರು. ರಾಜ್ಯದಲ್ಲಿ ಹಿರಿಯರು ನಾಗರಿಕರು 5 ಗ್ಯಾರಂಟಿ ಕೊಟ್ಟಿದ್ದೀರಾ. ಹಾಗೇ ನಮ್ಗೆ ಪೆನ್ಷನ್ ಜಾಸ್ತಿ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಹೀಗಾಗಿ, ವೇದಿಕೆ ಮೇಲೆಯೇ ನೀವು ಹಿರಿಯರಿದ್ದೀರಾ. ಹಿರಿಯ ನಾಗರಿಕರ ಕಷ್ಟದ ಬಗ್ಗೆಯೂ ತಮಗೆ ಅರಿವಿರುತ್ತದೆ. ಆದ್ದರಿಂದ ವೃದ್ಧಾಪ್ಯ ವೇತನವನ್ನು 2 ಸಾವಿರ ಹೆಚ್ಚಳ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು. ಎಂದು ವೇದಿಕೆಯಲ್ಲಿ ಸಿಎಂಗೆ ಮನವಿ ಮಾಡಿದರು.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ

ಇಂದು ಕೂಡ ನನಗೆ ಅನೇಕ ಹಿರಿಯರು ಬೇಡಿಕೆ ಇಟ್ಟಿದ್ದಾರೆ. ಮಹಿಳೆಯರಿಗೆ 2 ಸಾವಿರ ಕೊಡ್ತಾ ಇದ್ದೀರಾ..? ನಮಗೆ ಪಿಂಚಣಿಯನ್ನ 2 ಕೊಡಿ ಅಂತ ಕೇಳಿದ್ದಾರೆ. ಆಗ ನಾನು ನಾನು ವೇದಿಕೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡ್ತೀನಿ ಎಂದು ಹೇಳಿದ್ದೆನು. ಈಗ 49 ಲಕ್ಷ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಮಾಸಿಕ ತಲಾ 1,200 ರೂ. ಪಿಂಚಣಿಯನ್ನು ಕೊಡಲಾಗುತ್ತಿದೆ. ಆದರೆ, ದಿನಬಳಕೆ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳ ಬೆಲೆ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಈ ಹಣ ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಆದ್ದರಿಂದ ಮಾಸಿಕ 1200 ರೂ. ಪಿಂಚಣಿಯನ್ನ 2 ಸಾವಿರಕ್ಕೆ ಏರಿಕೆ ಮಾಡಲು ಮನವಿ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವೆ ಹೆಬ್ಬಾಳ್ಕರ್‌ ತಿಳಿಸಿದರು.

Follow Us:
Download App:
  • android
  • ios