Asianet Suvarna News Asianet Suvarna News

ಸ್ವಂತ ಜಾಗದಲ್ಲಿ ಮೃತ ಸೋಂಕಿತರ ಅಂತ್ಯಕ್ರಿಯೆಗೆ ಅವಕಾಶ

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸ್ವಂತ ಜಮೀನಿನಲ್ಲಿ ಮಾಡಲು ಇದೀಗ ಕರ್ನಾಟಕ ಸರ್ಕಾರ ಅವಕಾಶ ನೀಡಿದೆ. ಅಗತ್ಯ ಕ್ರಮಗಳೊಂದಿಗೆ ಮಾಡಬಹುದೆಂದು ತಿಳಿಸಿದೆ. 

Karnataka govt issues new guidelines on Covid victims funeral snr
Author
Bengaluru, First Published Apr 22, 2021, 7:18 AM IST

ಬೆಂಗಳೂರು (ಏ.22):  ಕೋವಿಡ್‌ ಸೋಂಕಿತರ ಮೃತದೇಹಗಳನ್ನು ಸಂಬಂಧಪಟ್ಟಕುಟುಂಬ ಸದಸ್ಯರು ತಮ್ಮ ಸ್ವಂತ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಇಚ್ಛಿಸಿದರೆ ಇದಕ್ಕೆ ಅಗತ್ಯ ಕ್ರಮಗಳೊಂದಿಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ಬಿಬಿಎಂಪಿ ಆಯುಕ್ತರು, ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ಸೋಂಕಿನಿಂದ ಮೃತಪಟ್ಟವರ ಮೃತ ದೇಹಗಳನ್ನು ತಮ್ಮದೇ ಒಡೆತನದ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಅನೇಕ ಕುಟುಂಬದವರು ಹಾಗೂ ಸಂಬಂಧಿಕರಿಂದ ಮನವಿಗಳು ಬಂದಿವೆ. 

ಮತ್ತೆ 23 ಸಾವಿರ ಕೇಸ್.. ಬೆಂಗಳೂರಿನಲ್ಲಿ 13 ಸಾವಿರ.. ಜಿಲ್ಲೆಗಳ ಸ್ಥಿತಿ ಏನು? ...

ಇದಕ್ಕೆ ಅನುವು ಮಾಡಿಕೊಡುವುದರಿಂದ ಮೃತರ ಗೌರವಯುತ ಅಂತ್ಯಸಂಸ್ಕಾರ ಸಾಧ್ಯವಾಗಲಿದೆ. ಹೀಗಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಮೃತರ ಕುಟುಂಬದವರು ಅಥವಾ ಸಂಬಂಧಿಕರ ಭೂಮಿಯಲ್ಲಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

Follow Us:
Download App:
  • android
  • ios