ರಂಜಾನ್ ಆಚರಣೆಗೆ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ: ಹಬ್ಬ ಇದರಂತೆ ಆಚರಿಸಬೇಕು

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಂಜಾನ್ ಆಚರಣೆಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

Karnataka Govt Issues Guidelines For Muslim Ramadan festival rbj

ಬೆಂಗಳೂರು, (ಏ.13):  ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಉಪವಾಸ ವ್ರತಾಚರಣೆ ಇಂದಿನಿಂದ (ಮಂಗಳವಾರ) ಆರಂಭವಾಗಿದೆ. ಇದರ ಮಧ್ಯೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ, ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ಓಪನ್ ಮಾಡಬೇಕು. ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಕೊರೋನಾ ಕಂಟ್ರೋಲ್‌ಗೆ ಮತ್ತೊಂದೆಜ್ಜೆ ಮುಂದಿಟ್ಟ ಸರ್ಕಾರ!

ಇನ್ನು ನಮಾಜ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿದಿನದ ಇಫ್ತಿಯಾರ್ ಕೂಟಕ್ಕೆ ಅವಕಾಶ ಇರುವುದಿಲ್ಲ. ಮನೆಯಲ್ಲಿಯೇ ಇಫ್ತಿಯಾರ್ ಕೂಟ ಆಯೋಜಿಸಬಹುದು. 

ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು. ಪ್ರಾರ್ಥನೆಗೆ ಸ್ವಂತ ಜಮಖಾನ ಮಾತ್ರ ಬಳಸಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ.
"

ಇನ್ನು ಕಳೆದ ವರ್ಷವೂ ಸಹ ಇದೇ ಕೊರೋನಾ ಇತ್ತು. ಆ ವೇಳೆಯಲ್ಲೂ ರಾಜ್ಯ ಸರ್ಕಾರ ಎಲ್ಲಾ ಧರ್ಮಗಳ ಹಬ್ಬಗಳನ್ನ ಸರಳವಾಗಿಯೇ ಮನಯಲ್ಲೇ ಆಚರಿಸುವಂತೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios