ಬೆಂಗಳೂರು(ಮೇ.03): ರಾಜ್ಯದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳುತ್ತಿರುವ ಅಂತರ್‌ ಜಿಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ವಲಸೆ ಕಾರ್ಮಿಕರು, ಪ್ರವಾಸಿಗಳು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಿಲುಕಿರುವವರಿಗೆ ಸ್ವಂತ ಊರುಗಳಿಗೆ ತೆರಳಲು ಒಂದು ಬಾರಿಗೆ ಅವಕಾಶ ನೀಡಲಾಗಿದೆ. ಇಂತಹವರನ್ನು ಆಯಾ ಜಿಲ್ಲಾಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಚೆಕ್‌ಪೋಸ್ಟ್‌ ಅಥವಾ ನಿಗದಿತ ಸ್ಥಳದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.]

ಮುಂಬೈ ಆ್ಯಂಬುಲೆನ್ಸ್‌ನಿಂದ ಮಂಡ್ಯದಲ್ಲಿ ಕೊರೋನಾತಂಕ!

ಎಲ್ಲರನ್ನೂ ಥರ್ಮಲ್‌ ಸ್ಕಾ್ಯನರ್‌ ಮೂಲಕ ತಪಾಸಣೆ ನಡೆಸಿ ದೇಹದ ತಾಪಮಾನ ಸಾಮಾನ್ಯವಿದ್ದು, ಆರೋಗ್ಯವಂತವಾಗಿದ್ದರೆ ಮಾತ್ರ ಆಯಾ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಿ ಮನೆಗಳಿಗೆ ಕಳುಹಿಸಬೇಕು. ಇನ್ನು ದೇಹದ ತಾಪಮಾನ 37.5 ಡಿಗ್ರಿಗಿಂತ ಹೆಚ್ಚಿರುವುದು, ಕೆಮ್ಮು, ನೆಗಡಿ, ಉಸಿರಾಟ ತೊಂದರೆಯಂತಹ ಸಮಸ್ಯೆ ಇದ್ದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಿ ಮುಂದಿನ ವೈದ್ಯಕೀಯ ತಪಾಸಣೆ ನಡೆಸಬೇಕು.

ವೈದ್ಯರು ಅವರಿಗೆ ಕೊರೋನಾ ಲಕ್ಷಣಗಳಿವೆ ಎಂದು ಭಾವಿಸಿದರೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಬೇಕು. ಸೋಂಕು ದೃಢಪಟ್ಟರೆ ನಿಗದಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ವರದಿ ನೆಗೆಟಿವ್‌ ಬಂದರೆ ಕೈ ಮೇಲೆ ಕ್ವಾರಂಟೈನ್‌ ಮುದ್ರೆ ಒತ್ತಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.