ಬೆಂಗಳೂರು (ಡಿ.20):  ರಾಜ್ಯದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಕಾನೂನು ಕಾಲೇಜು ಮತ್ತು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಶಿಕ್ಷಕರು, ಗ್ರಂಥಪಾಲಕರು ಹಾಗೂ ತತ್ಸಮಾನ ಹುದ್ದೆಯ ಸಿಬ್ಬಂದಿಗಳ ಯುಜಿಸಿ ವೇತನ ಶ್ರೇಣಿಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಾನೂನು ಕಾಲೇಜು ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಗಳ ಶಿಕ್ಷಕರ ಪರಿಷ್ಕೃತ ಕನಿಷ್ಠ ಹಾಗೂ ಗರಿಷ್ಠ ವೇತನ ಕ್ರಮವಾಗಿ ಈ ರೀತಿ ಇದೆ.

ಸಹಾಯಕ ಪ್ರಾಧ್ಯಾಪಕರ ವೇತನ ಕನಿಷ್ಠ 57,000 ರು., ಗರಿಷ್ಠ 1,82,400 ರು.ಗೆ ಹೆಚ್ಚಳವಾಗಲಿದೆ, ಸಹಾಯಕ ಪ್ರಾಧ್ಯಾಪಕರು (ಸೀನಿಯರ್‌ ಸ್ಕೇಲ್‌) 68,900 ರು. (ಕನಿಷ್ಠ), 2,05,500 ರು. (ಗರಿಷ್ಠ). ಸಹಾಯಕ ಪ್ರಾಧ್ಯಾಪಕರು (ಆಯ್ಕೆ ಶ್ರೇಣಿ) 79,800 ರು.(ಕನಿಷ್ಠ ), 2,11,500 ರು.(ಗರಿಷ್ಠ). ಸಹ ಪ್ರಾಧ್ಯಾಪಕರು 1,31,400 ರು.(ಕನಿಷ್ಠ), 2,17,100 ರು., (ಗರಿಷ್ಠ). ಪ್ರಾಧ್ಯಾಪಕ (ಎಚ್‌ಎಜಿ)/ಹಿರಿಯ ಪ್ರಾಧ್ಯಾಪಕ 1,82,200 ರು. (ಕನಿಷ್ಠ), 2,24,100 ರು.(ಗರಿಷ್ಠ).

ಕಾನೂನು ವಿವಿ ಮತ್ತು ಕಾಲೇಜುಗಳ ಗ್ರಂಥಪಾಲಕರು:

ವಿ.ವಿ. ಸಹಾಯಕ ಗ್ರಂಥಪಾಲಕ/ಕಾಲೇಜು ಗ್ರಂಥಪಾಲಕ- 57,700 ರು.(ಕನಿಷ್ಠ), 1,82,400 ರು.(ಗರಿಷ್ಠ). ವಿವಿ ಸಹಾಯಕ ಗ್ರಂಥಪಾಲಕ (ಸೀನಿಯರ್‌ ಸ್ಕೇಲ್‌), ಕಾಲೇಜು ಗ್ರಂಥಪಾಲಕ (ಸೀನಿಯರ್‌ ಸ್ಕೇಲ್‌)- 68,900 ರು.(ಕನಿಷ್ಠ), 2,05,500 ರು. (ಗರಿಷ್ಠ). ಉಪ ಗ್ರಂಥಪಾಲಕ/ ವಿವಿ ಸಹಾಯಕ ಗ್ರಂಥಪಾಲಕ (ಆಯ್ಕೆ ಶ್ರೇಣಿ)/ ಕಾಲೇಜು ಗ್ರಂಥಪಾಲಕ (ಆಯ್ಕೆ ಶ್ರೇಣಿ)- 79,800 ರು. (ಕನಿಷ್ಠ), 2,11,500 ರು. (ಗರಿಷ್ಠ). ವಿವಿ ಉಪ ಗ್ರಂಥಪಾಲಕ, ಸಹಾಯಕ ಗ್ರಂಥಪಾಲಕ (ಆಯ್ಕೆ ಶ್ರೇಣಿ)/ ಕಾಲೇಜು ಗ್ರಂಥಪಾಲಕ (ಆಯ್ಕೆ ಶ್ರೇಣಿ)- 1,31,400 ರು. (ಕನಿಷ್ಠ), 2,17,100 ರು. (ಗರಿಷ್ಠ). ವಿಶ್ವವಿದ್ಯಾಲಯ ಗ್ರಂಥಪಾಲಕ- 1,44,200 ರು. (ಕನಿಷ್ಠ), 2,18,200 ರು. (ಗರಿಷ್ಠ).

ವಿವಿ ಮತ್ತು ಕಾಲೇಜುಗಳ ದೈಹಿಕ ಶಿಕ್ಷಣ ಸಿಬ್ಬಂದಿ:

ಸಹಾಯಕ ನಿರ್ದೇಶಕರು ದೈಹಿಕ ಶಿಕ್ಷಣ ಮತ್ತು ಕ್ರೀಡೆ (ವಿ.ವಿ.)/ ದೈಹಿಕ ಶಿಕ್ಷಣ ಮತ್ತು ಕ್ರೀಡೆಯ ಕಾಲೇಜು ನಿರ್ದೇಶಕರು- 57,700 ರು (ಕನಿಷ್ಠ), 1,82,400 ರು. (ಗರಿಷ್ಠ). ವಿವಿಗಳ ಸಹಾಯಕ ನಿರ್ದೇಶಕರು (ಸೀನಿಯರ್‌ ಸ್ಕೇಲ್‌)/ ಕಾಲೇಜುಗಳ ನಿರ್ದೇಶಕರು (ಸೀನಿಯರ್‌ ಸ್ಕೇಲ್‌)- 68,900 ರು (ಕನಿಷ್ಠ), 2,05,500 ರು. (ಗರಿಷ್ಠ). ಉಪ ನಿರ್ದೇಶಕರು/ ಸಹಾಯಕ ನಿರ್ದೇಶಕರು (ಆಯ್ಕೆ ಶ್ರೇಣಿ, ವಿಶ್ವವಿದ್ಯಾಲಯ)- 79,800 ರು. (ಕನಿಷ್ಠ), 2,11,500 ರು. (ಗರಿಷ್ಠ). ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು (ಆಯ್ಕೆ ಶ್ರೇಣಿ, ವಿಶ್ವವಿದ್ಯಾಲಯ)/ ಕಾಲೇಜು ನಿರ್ದೇಶಕರು- 1,44,200 ರು. (ಕನಿಷ್ಠ), 2,18,200 ರು. (ಗರಿಷ್ಠ).

ಕೆಪಿಎಸ್‌ಸಿ ನೇಮಕಾತಿ: ಗ್ರೂಪ್ ಸಿ ಹುದ್ದೆಗಳ ಭರ್ತಿ...

ಪದವಿ ಪ್ರಾಂಶುಪಾಲರ ವೇತನ ಏರಿಕೆ:  ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ ಪ್ರಾಂಶುಪಾಲರ ವೇತನ ಪರಿಷ್ಕರಿಸಲಾಗಿದ್ದು, ಸಹ ಪ್ರಾಧ್ಯಾಪಕರಿಗೆ ನಿಗದಿಪಡಿಸಿರುವ ವೇತನವನ್ನು ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಲಾಗುವುದು. ಇವರ ಪ್ರಾರಂಭಿಕ ವೇತನ 1,31,400 ರು. ಹಾಗೂ ಪ್ರತಿ ತಿಂಗಳು ಎರಡು ಸಾವಿರ ವಿಶೇಷ ಭತ್ಯ ನೀಡಲಾಗುತ್ತದೆ. ಅದೇ ರೀತಿ ಪ್ರಾಧ್ಯಾಪಕರಿಗೆ ನೀಡುವ ವೇತನವನ್ನು ಸ್ನಾತಕೋತ್ತರ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಲಾಗುವುದು, ಇವರ ವೇತನ ಪ್ರಾರಂಭಿಕ ವೇತನ 1,44,200 ರು. ಆಗಿರುತ್ತದೆ.