ಬೆಂಗಳೂರು, (ನ.04):  ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್​ ನೀಡಿದ್ದು, ವಿದ್ಯುತ್​ ದರ ಹೆಚ್ಚಳ ಮಾಡಿ ಇಂದು (ಬುಧವಾರ) ಬಿಎಸ್‌ವೈ ಸರ್ಕಾರ ಆದೇಶ ಹೊರಡಿಸಿದೆ.

"

 ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದ್ದು, ಪರಿಷ್ಕೃತ ದರ ನವೆಂಬರ್​ 1ರಿಂದಲೇ ಅನ್ವಯವಾಗುವಂತೆ ಆದೇಶಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 196 ಪೈಸೆ ಹೆಚ್ಚಳ ಮಾಡಲು ಪ್ರಸ್ತಾಪ ಮಾಡಲಾಗಿತ್ತು. ಆದರೆ 40 ಪೈಸೆ ಹೆಚ್ಚಳ ಮಾಡಲಾಗಿದೆ.

ಶಿಕ್ಷಣ ಇಲಾಖೆಯ ಸಭೆ ಅಂತ್ಯ: ಶಾಲೆ ಪ್ರಾರಂಭದ ಬಗ್ಗೆ ಮಹತ್ವದ ನಿರ್ಧಾರ ಪ್ರಕಟ

ಪ್ರತಿಬಾರಿ ಏಪ್ರಿಲ್​ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕೊರೋನಾನಾ ಕಾರಣದಿಂದ ಅದು ಸಾಧ್ಯವಾಗಿಲ್ಲ. ಇದೀಗ ಕರೊನಾ ಸೋಂಕು ಕಡಿಮೆಯಾಗುತ್ತಿದ್ದು, ವಿದ್ಯುತ್​ ಸರಬರಾಜು ನಿಗಮಗಳ ಆಥಿರ್ಕ ಹೊರೆ ಹೆಚ್ಚುತ್ತಿರುವ ಕಾರಣ ದರ ಪರಿಷ್ಕರಿಸಲಾಗಿದೆ. ನೂತನ ದರ ಪರಿಷ್ಕರಣೆ ಮುಂದಿನ 5 ತಿಂಗಳಿಗೆ ಅನ್ವಯವಾಗಲಿದೆ.