ಗಾರ್ಮೆಂಟ್ಸ್‌ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಕೊರೋನಾ ಜನತಾ ಕರ್ಫ್ಯೂ ಮಧ್ಯೆ ಗಾರ್ಮೆಂಟ್ಸ್‌ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

Karnataka govt green Signal to garments open for 50 percent operations rbj

ಬೆಂಗಳೂರು, (ಏ.28): ರಾಜ್ಯಾದ್ಯಂತ ಗಾರ್ಮೆಂಟ್ಸ್‌ ನಲ್ಲಿ ಶೇ.50ರಷ್ಟು ನೌಕರರು ಕೆಲಸ ಮಾಡುವುದಕ್ಕೆ ಗ್ರೀನ್‌ ಸಿಗ್ನಲ್ ನೀಡಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ಇದೇ ವೇಳೆ ಆದೇಶದಲ್ಲಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಎಲ್ಲಾ ರೀತಿ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರು ನಗರದಲ್ಲಿರುವ ಗಾರ್ಮೆಂಟ್ಸ್‌ ಶೇ.50ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಜನರಿಗೆ ಅನುಕೂಲ ಕಲ್ಪಿಸಲು ಕೋವಿಶೀಲ್ಡ್ ಲಸಿಕೆ ದರ ಇಳಿಸಿದ ಸೀರಂ ಸಂಸ್ಥೆ!

ಅಂದರೆ ಒಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಒಟ್ಟು ನೌಕರರ ಪೈಕಿ ಅರ್ಧಷ್ಟು ಜನರಿಗೆ ಮಾತ್ರ ಅನುಮಾತಿ ಕೊಡಲಾಗಿದೆ. ಇನ್ನು ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಕೂಡ ಹೊಂದಿರಬೇಕು. 

ಐಡಿ ಕಾರ್ಡ್ ಸೇರಿದಂತೆ ಕೆಲಸ ಮಾಡುತ್ತಿರುವ ಬಗ್ಗೆ ದಾಖಲೆ ಇರಬೇಕು. ಅದನ್ನು ಪೊಲೀಸರು ಕೇಳಿದ್ರೆ ತೋರಿಸಬೇಕೆಂದು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ. ಹೀಗಾಗಿ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಹೊಂದಿರ ತಕ್ಕದ್ದು. 

ಈ ಮೊದಲ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಮಾರ್ಗಸೂಚಿಯಲ್ಲಿ ಗಾರ್ಮೆಂಟ್ಸ್ ಓಪನ್‌ಗೆ ಅನುಮತಿ ಕೊಟ್ಟಿರಲಿಲ್ಲ. 

Latest Videos
Follow Us:
Download App:
  • android
  • ios