ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್: ಈ ಒಂದು ದಾಖಲೆಯಿದ್ದರೆ ಸಾಕು!
ಕರ್ನಾಟಕ ರಾಜ್ಯದ ಎಲ್ಲ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಕೂಡಲೇ ಅರ್ಜಿ ಹಾಕಿ ಲ್ಯಾಪ್‌ಟಾಪ್ ಪಡೆಯಬಹುದು.

ಬೆಂಗಳೂರು (ಸೆ.13): ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಪೈಕಿ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ದ್ವಿತೀಯ ಪಿಯುಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ವಿತರಿಸಲು ಅರ್ಜಿ ಅಹ್ವಾನಿಸಲಾಗಿದೆ.
ಕಾರ್ಮಿಕ ಅಧಿಕಾರಿ -1, ಉಪ ವಿಭಾಗ ಬೆಂಗಳೂರು, ಇವರ ಕಾರ್ಯವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಜಿ ನಮೂನೆಯನ್ನು ಆಯಾ ವೃತ್ತ ಕಛೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸ್ವೀಕರಿಸಿದ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಛೇರಿ, ಉಪ ವಿಭಾಗ-1, ಬೆಂಗಳೂರು. ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡ, ಮೊದಲನೇ ಮಹಡಿ, ಮಂಜುನಾಥ ನಗರ ಬಾಗಲಗುಂಟೆ ಬೆಂಗಳೂರು -73 ಅಥವಾ ದೂರವಾಣಿ ಸಂಖ್ಯೆ 9845587605, 8105084941 ಮೂಲಕ ಸಂಪರ್ಕಿಸಬಹುದು ಎಂದು ಉಪ ವಿಭಾಗ -1 ಬೆಂಗಳೂರು, ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
- ಕಟ್ಟಕ ಕಾರ್ಮಿಕರ ನೋಂದಣಿ ಕಾರ್ಡ್ (ಪ್ರಮಾಣಪತ್ರ)
- ಪಿಯುಸಿ ಅಧ್ಯಯನ ಮಾಡುತ್ತಿರುವ ಕಾಲೇಜಿನ ವ್ಯಾಸಂಕ ಪ್ರಮಾಣಪತ್ರ
- ಕಾಲೇಜಿಗೆ ದಾಖಲಾತಿ ಮಾಡಿದ ರಶೀದಿ