Asianet Suvarna News Asianet Suvarna News

ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ದಿನಾಂಕ ವಿಸ್ತರಣೆ

* ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೊವಿಡ್ ಮಾರ್ಗಸೂಚಿ ವಿಸ್ತರಣೆ
* ಕೋವಿಡ್ ಮಾರ್ಗಸೂಚಿಯನ್ನ ಅಕ್ಟೋಬರ್ 25ರವರೆಗೆ ವಿಸ್ತರಿಸಿದ ಸರ್ಕಾರ
* ಲ್ಲಾಧಿಕಾರಿಗಳು  ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಖಡಕ್ ಸೂಚನೆ

Karnataka Govt extends covid guidelines to October 25 rbj
Author
Bengaluru, First Published Oct 8, 2021, 10:33 PM IST

ಬೆಂಗಳೂರು, (ಅ.08): ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು (Covid Guidelines) ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಆದೇಶಿದೆ.

ಕೋವಿಡ್ ಮಾರ್ಗಸೂಚಿಯನ್ನ ಅಕ್ಟೋಬರ್ 25ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಇಂದು (ಅ.08) ಆದೇಶ ಹೊರಡಿಸಿದೆ.

ಕೋವಿಡ್‌ ಬಗ್ಗೆ ಇನ್ನೂ 3 ತಿಂಗಳು ಎಚ್ಚರ

ಕಣ್ಗಾವಲು, ನಿಯಂತ್ರಣ ಮತ್ತು ಜಾಗರೂಕತೆ ಮಾರ್ಗಸೂಚಿಗಳಿಗೆ(Guidelines) ಸಂಬಂಧಿಸಿದಂತೆ ಹೊರಡಿಸಿರುವ ಆದೇಶವನ್ನು ಅ.25ರ ಬೆಳಗ್ಗೆ 6 ಗಂಟೆವರೆಗೆ ಮುಂದುವರೆಸಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.

ಇನ್ನು ಕೇರಳ (Kerala) ಹಾಗೂ ಮಹಾರಾಷ್ಟ್ರದ ಗಡಿದ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಕಣ್ಗಾವಲು ಇರಿಸುವುದನ್ನು ಮುಂದುವರೆಸಬೇಕೆಂದು ಬಿಬಿಎಂಪಿ ಆಯಾ ಜಿಲ್ಲಾಧಿಕಾರಿಗಳು  ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

 ಕರ್ನಾಟಕದಲ್ಲಿ (Karnataka) ಕೊರೋನಾ ಎರಡನೇ ಅಲೆ ಭಾರೀ ಇಳಿಕೆಯಾಗಿದೆ. ಆದ್ರೆ, ಸೋಂಕು ನಿಯಂತ್ರಣಕ್ಕೆ ಇನ್ನೂ ಮೂರು ತಿಂಗಳ ಕಾಲ ನಿರ್ಣಾಯಕವಾಗಿದೆ ಎಂದಿರುವ ಕೇಂದ್ರ ಸರ್ಕಾರ (Union Governament) ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಮುಂದಿನ ಹಬ್ಬ (Festivals) ಮತ್ತು ಮದುವೆ Marraige) ಸಮಾರಂಭಗಳ ಮುಖಾಂತರ ಕೊರೋನಾ ವೈರಸ್‌ (Coroanvrus) ಮತ್ತೆ ಉದಯವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರ ಇರುವಂತೆ ಮತ್ತು ಮನೆಯಲ್ಲೇ ಆಚರಿಸುವಂತೆ ತಿಳಿಸಿದೆ.

ಕೇಂದ್ರ ಸರ್ಕಾರದ ಈ ಒಂದು ಸೂಚನೆ ಮೇರೆಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು  ವಿಸ್ತರಿಸಿದೆ.

ಕೊರೋನಾ ವೈರಸ್‌ನ 2ನೇ ಅಲೆ ಇನ್ನೂ ಮುಕ್ತಾಯವಾಗಿಲ್ಲ. ಜನರು ಅನಗತ್ಯ ಪ್ರವಾಸ, ಪ್ರಯಾಣ ಮತ್ತು ಹೆಚ್ಚು ಜನ ಇರುವ ಪ್ರದೇಶಗಳಿಗೆ ಹೋಗದೇ ಮನೆಯಲ್ಲೇ ಇರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Follow Us:
Download App:
  • android
  • ios