ಬೆಂಗಳೂರು, [ಫೆ.02]: ಪಿಯುಸಿ ಪರೀಕ್ಷೆಗಳನ್ನು ನೋಡಿಕೊಳ್ಳಲು ಕರ್ನಾಟಕ ಸರ್ಕಾರ ನೂತನ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.

ಪಿಯು ಪರೀಕ್ಷೆಗಾಗಿ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ನೇಮಿಸಿ ಇಂದು [ಶನಿವಾರ] ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 ಮಾರ್ಚ್ 1 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆಗಳ ಕೆಲಸಗಳು ಹೆಚ್ಚಾಗಿರೊ ಹಿನ್ನಲೆ ಹಾಗೂ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ನೇಮಿಸಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ಪಿ.ಸಿ. ಜಾಫರ್ ಅಡಿಯಲ್ಲಿ ನೂತನ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಕಾರ್ಯನಿರ್ವಹಿಸಲಿದ್ದಾರೆ.

ಇದೇ ಮಾರ್ಚ್ 1ರಿಂದ ಮಾರ್ಚ್  18ರ ವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ.