ಕೊರೋನಾ ದೃಢಪಟ್ಟ ಮೂರು ದಿನದ ಹಿಂದೆ ಅಷ್ಟೇ ಸಿಎಂ  ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜುಬಾಯ್ ವಾಲಾ ಅವರನ್ನ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಸಹ ಬಂದಿದೆ.

ಬೆಂಗಳೂರು, (ಆ.03): ಬಿಎಸ್ ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬಂದಿದ್ದ ರಾಜ್ಯಪಾಲ ವಜುಬಾಯ್ ವಾಲಾ ಕೋವಿಡ್ ಟೆಸ್ಟ್‌ ಮಾಡಿಸಿಕೊಂಡಿದ್ದು, ಇದೀಗ ಅವರ ವರದಿ ನೆಗೆಟಿವ್ ಅಂತ ಬಂದಿದೆ. 

ಇದರಿಂದ ರಾಜ್ಯಪಾಲ ವಜುಬಾಯ್ ವಾಲಾ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯ ರಾಜಕೀಯ ವಿದ್ಯಾಮಾನ ಕುರಿತಂತೆ ಜುಲೈ 31ರಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾಗಿದ್ದರು. 

ಸಿಎಂಗೆ ಕೊರೋನಾ: ಯಾರನ್ನೆಲ್ಲಾ ಭೇಟಿಯಾಗಿದ್ರು, ಯಾರೆಲ್ಲಾ ಕ್ವಾರಂಟೈನ್ ಆದ್ರು...?

ಆದ್ರೆ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಕಾರಣ, ವಜುಬಾಯ್ ವಾಲಾ ಅವರೂ ಸಹ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದರು. ಅದೃಷ್ಟವಶಾತ್ ಅವರಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. 

ಫೋಟೋಗಳಲ್ಲಿ ನೋಡಿದ್ರೆ ಸಿಎಂ ಭೇಟಿ ವೇಳೆ ರಾಜ್ಯಪಾಲರು ಮಾಸ್ಕ್ ಧರಿಸಿದ್ದರು. ಅಷ್ಟೇ ಅಲ್ಲದೇ ಅಂತರ ಕಾಯ್ದುಕೊಂಡೇ ಚರ್ಚೆ ಮಾಡಿದ್ದಾರೆ. ಈ ಹಿನ್ನೆಲೆ ವಜುಬಾಯ್ ವಾಲಾ ಅವರಿಗೆ ಸೋಂಕು ತಾಗಿಲ್ಲ ಎನ್ನಬಹುದು.

ಇನ್ನು ಬಿಎಸ್‌ವೈ ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಥಮಿಕ ಸಂಪರ್ಕಿತರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಸಂಪರ್ಕದಲ್ಲಿದ್ದವರಲ್ಲಿ ಕೆಲವರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ.