ಬೆಂಗಳೂರು (ಮಾ.17):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮತ್ತೊಮ್ಮೆ ಹೆಚ್ಚಾಗಿದ್ದು ಎರಡನೇ ಅಲೆ ನಿರ್ವಹಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. 
ಖಾಸಗಿ ಸಹಭಾಗಿತ್ವದಲ್ಲಿ ಕೊರೋನಾ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಸಭೆ ನಡೆಸಲು ಆರೋಗ್ಯ ಸಚಿವರು ಮುಂದಾಗಿದ್ದಾರೆ. 

FHAK ಮತ್ತು PHANA ಜೊತೆ ಆರೋಗ್ಯ ಸಚಿವ ಸುಧಾಕರ್ ವರ್ಚುವಲ್ ಸಭೆ ನಡೆಸಲಿದ್ದಾರೆ. (FHAK - FEDARETION OF HOSPITAL ASSOCIATION KARNATAKA)(PHANA - PRIVATE HOSPITAL AND NURSING ASSOCIATION)

ಸಭೆ ಬಳಿಕ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಯಲ್ಲಿ ಬೆಡ್ ನಿಗದಿ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ. 

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: 24 ಗಂಟೆಗಳಲ್ಲಿ ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ .

ಹಂತ ಹಂತವಾಗಿ ಬೆಡ್ ಗಳನ್ನ ಪಡೆದುಕೊಳ್ಳಿ ಎಂದು  ಖಾಸಗಿ ಆಸ್ಪತ್ರೆಗಳು ಮನವಿ ಮಾಡಿದ್ದು,  ಮೊದಲು ಮೆಡಿಕಲ್ ಕಾಲೇಜುಗಳಲ್ಲಿ ಬೆಡ್ ಗಳನ್ನ ಪಡೆದುಕೊಳ್ಳಿ ಎಂದಿವೆ.

 ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬೆಡ್ ಪಡೆದುಕೊಳ್ಳಿ. ಬಳಿಕ 100 ಬೆಡ್ ಆಸ್ಪತ್ರೆಗಳು, ನಂತರ 50 ಬೆಡ್ ಆಸ್ಪತ್ರೆಗಳಿಗೆ ಬನ್ನಿ.  ಒಂದೇ ಬಾರಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಪಡೆಯುವುದು ಬೇಡ ಎಂದು ಖಾಸಗಿ ಆಸ್ಪತ್ರೆಗಳು ಮನವಿ  ಮಾಡಿವೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ಸಭೆ ಬಳಿಕ ಕೋವಿಡ್ ರೋಗಿಗಳಿಗೆ ಆಸಪತ್ರೆಗಳಲ್ಲಿ ಬೆಡ್ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅಧಿಕೃತ ಘೋಷಣೆ ಮಾಡಲಿದ್ದಾರೆ.