Asianet Suvarna News Asianet Suvarna News

Health Care ಪ್ರತಿ ವರ್ಷ ತಪಾಸಣೆ, ಮಕ್ಕಳ ಚಿಕಿತ್ಸೆಗೆ ಟೆಲಿಮೆಡಿಸಿನ್‌, ರಾಜ್ಯ ಆರೋಗ್ಯ ವ್ಯವಸ್ಥೆ ಸುಧಾರಿಸುವ ವರದಿ ಸಿದ್ಧ!

  • ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ವಿಜನ್‌ ಡಾಕ್ಯುಮೆಂಟ್‌ ಸಿಎಂಗೆ ಸಲ್ಲಿಕೆ
  • 35 ವರ್ಷ ಮೇಲ್ಪಟ್ಟಎಲ್ಲರಿಗೂ ಪ್ರತಿ ವರ್ಷ ಆರೋಗ್ಯ ತಪಾಸಣೆಗೆ ಶಿಫಾರಸು
  • ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ, ಮಕ್ಕಳ ಚಿಕಿತ್ಸೆಗೆ ಟೆಲಿಮೆಡಿಸಿನ್‌ ವ್ಯವಸ್ಥೆಗೆ ಸಲಹೆ
     
Karnataka Government set to Intruduce New helath care and infrastructure policy ckm
Author
Bengaluru, First Published Jan 25, 2022, 2:12 AM IST

ಬೆಂಗಳೂರು(ಜ.25):  ಆಯುಷ್ಮಾನ್‌ ಭಾರತ್‌(ayushman bharat)-ಆರೋಗ್ಯ ಕರ್ನಾಟಕ(Karnataka) ಯೋಜನೆ ಸಮರ್ಪಕ ಅನುಷ್ಠಾನ, ಆಸ್ಪತ್ರೆಗಳಿಗೆ(Hospital) ಪರಸ್ಪರ ಸಂಪರ್ಕ ಕಲ್ಪಿಸುವುದು, ತಂತ್ರಜ್ಞಾನದ ಮೂಲಕ ಚಿಕಿತ್ಸೆ ಗುಣಮಟ್ಟಹೆಚ್ಚಿಸುವುದು(Treatment) ಹಾಗೂ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳಿಗೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ದೊರೆಯುವಂತೆ ಮಾಡುವ ಯೋಜನೆಗಳನ್ನು ಒಳಗೊಂಡ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕುರಿತ ವಿಜನ್‌ ಡಾಕ್ಯುಮೆಂಟ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರಿಗೆ ಸಲ್ಲಿಕೆಯಾಗಿದೆ.

ನಿಮ್ಹಾನ್ಸ್‌ ಮಾಜಿ ನಿರ್ದೇಶಕ ಡಾ.ಜಿ.ಗುರುರಾಜ ನೇತೃತ್ವದಲ್ಲಿ ರಚಿಸಿದ್ದ ವಿಜನ್‌ ಗ್ರೂಪ್‌ ಸಮಿತಿಯು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸಮ್ಮುಖದಲ್ಲಿ ಸೋಮವಾರ ಮುಖ್ಯಮಂತ್ರಿಗಳಿಗೆ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿತು.

Himalayan Red Buransh:ಸಿಕ್ಕಿಯೇ ಬಿಟ್ಟಿತಾ ಕೊರೋನಾಗೆ ಲಸಿಕೆ?

ಮಕ್ಕಳ ಚಿಕಿತ್ಸೆಗಾಗಿ ಟೆಲಿಮೆಡಿಸಿನ್‌, ಟೆಲಿ-ಐಸಿಯು ವ್ಯವಸ್ಥೆ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ವ್ಯವಸ್ಥೆ ಬಳಸಿಕೊಳ್ಳುವುದು. ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವ ರೋಗಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ(Digitalization) ಶೇಖರಿಸುವುದು. ಆಧಾರ್‌ ಕಾರ್ಡ್‌ ಸಂಖ್ಯೆ ನಮೂದಿಸಿದರೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ(Govt Hospital) ಸಂಬಂಧಪಟ್ಟಡಿಜಿಟಲ್‌ ದಾಖಲೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಶಿಫಾರಸು ಮಾಡಲಾಗಿದೆ.

ಅನಾರೋಗ್ಯ ಉಂಟಾದ ಬಳಿಕ ಚಿಕಿತ್ಸೆ ನೀಡುವ ಬದಲು ರೋಗ ಬಾರದಂತೆ ತಡೆಯುವ ಮುನ್ನೆಚ್ಚರಿಕಾ ಚಿಕಿತ್ಸೆಗೆ ಆದ್ಯತೆ ನೀಡುವುದು. ಇದಕ್ಕಾಗಿ 35 ವರ್ಷ ಮೇಲ್ಟಟ್ಟವರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸುವುದು. ಈ ವೇಳೆ ರಕ್ತ ಪರೀಕ್ಷೆ, ಲಿಪಿಡ್‌ ಪ್ರೊಫೈಲ್‌, ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ನಡೆಸುವುದು. ಚಿಕಿತ್ಸೆ ಹಾಗೂ ಜೀವನ ಶೈಲಿ ಬಗ್ಗೆ ತಿಳುವಳಿಕೆ ಮೂಡಿಸುವುದು. ಅಗತ್ಯವಿರುವವರಿಗೆ ಪೋಷಕಾಂಶಗಳುಳ್ಳ ಆಹಾರ ಅಥವಾ ಔಷಧಿಗಳ ಸಲಹೆ ನೀಡುವ ಬಗ್ಗೆ ವರದಿಯಲ್ಲಿ ಪ್ರತಿಪಾದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Paracetamol Side Effects: ಜ್ವರ, ತಲೆನೋವು ಅಂತ ಟ್ಯಾಬ್ಲೆಟ್ ತಿನ್ನೋ ಮುನ್ನ ತಿಳ್ಕೊಳ್ಳಿ

ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ:
ಅಲೋಪತಿ, ಆಯುಷ್‌, ಯುನಾನಿ, ಸಿದ್ದ, ಹೋಮಿಯೋಪತಿ ತಜ್ಷರನ್ನು ಒಳಗೊಂಡ ವಿಜನ್‌ ಗ್ರೂಪ್‌ ಪ್ರತಿಯೊಂದು ಹಂತದಲ್ಲೂ ಆರೋಗ್ಯ ಗುಣಮಟ್ಟಉತ್ತಮ ಪಡಿಸಲು ಪ್ರತ್ಯೇಕ ಘಟಕ ರೂಪಿಸಬೇಕು. ಕ್ಯಾತ್‌ ಲ್ಯಾಬ್ಸ್‌, ಕ್ಯಾನ್ಸರ್‌ ಚಿಕಿತ್ಸೆ ಒಳಗೊಂಡ ಟ್ರಾಮಾ ಘಟಕಗಳು ಪ್ರತಿ 50 ಕಿ.ಮೀ.ಗೆ ಒಂದರಂತೆ ಸ್ಥಾಪಿಸಬೇಕು. ಈ ಮೂಲಕ ಅಪಘಾತ ಪ್ರಕರಣಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬೇಕು. 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಢಬೇಕು. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿ ಆರೋಗ್ಯ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.

ಮೂಲಸೌಕರ್ಯ ವ್ಯವಸ್ಥೆ ಹಾಗೂ ನುರಿತ ಸಿಬ್ಬಂದಿಯ ನೇಮಕ ಮಾಡಬೇಕು. ಪ್ರಾಥಮಿಕ ಹಂತದಲ್ಲೇ ತುರ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡುವಷ್ಟುಪ್ರಮಾಣದಲ್ಲಿ ವೈದ್ಯರು, ಶುಶ್ರೂಷಕರ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬ್ರಾಂಡಿಂಗ್‌ ಮಾಡಬೇಕು. ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರದಲ್ಲೂ ಆಯುಷ್‌ ವಿಭಾಗ ತೆರೆಯಬೇಕು ಎಂಬಿತ್ಯಾದಿ ಹಲವು ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗ್ರೂಪ್‌ನ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ಉಚಿತ ಶಿಕ್ಷಣ, ಚಿಕಿತ್ಸೆ ನೀಡಲು ಆಗ್ರಹ
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್‌ ಖಾನ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಸ್ವಾಮಿ, ಮುಖಂಡರಾದ ಉಮರ್‌ ಶರೀಫ್‌, ಅಲ್ತಾಫ್‌ ಅಹಮದ್‌, ಮೊಹಮ್ಮದ್‌ ಶಫೀವುಲ್ಲಾ ಇದ್ದರು.ಕೇಂದ್ರ ಸರ್ಕಾರವು ದೇಶದ ಎಲ್ಲಾ ಬಡ ಜನರಿಗೂ ಉಚಿತ ಶಿಕ್ಷಣ ಹಾಗೂ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್‌ ಖಾನ್‌ ಆಗ್ರಹಿಸಿದರು.ದೇಶವು ಅಭಿವೃದ್ಧಿ ಹೊಂದಬೇಕಾದರೇ ಪ್ರಜೆಗಳ ವಿದ್ಯಾವಂತರಾಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕು. ದುರದೃಷ್ಟವಶಾತ್‌ ನಮ್ಮ ದೇಶದಲ್ಲಿ ಪ್ರಜೆಗಳು ಶಿಕ್ಷಣ ಮತ್ತು ಆರೋಗ್ಯದಿಂದ ವಂಚಿತರಾಗಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

Follow Us:
Download App:
  • android
  • ios