ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಫೋಟೋ ಕಡ್ಡಾಯ: ಸಿಎಂ ಸಿದ್ದರಾಮಯ್ಯ ಮಾಹಿತಿ
ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಅಳವಡಿಸುವ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು.
ಬೆಂಗಳೂರು (ಆ.15): ರಾಜ್ಯದ ಮಧ್ಯಭಾದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಜೊತೆಗೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಅಳವಡಿಕೆ ಮಾಡಲು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಅವರು, ಆಗಸ್ಟ್ 15 ರಂದೇ ಸಂಗೊಳ್ಳಿ ರಾಯಣ್ಣ ಜನಿಸಿದ್ದರು. ಸಂಗೊಳ್ಳಿ ರಾಯಣ್ಣಾವರನ್ನ ನೇಣುಗಂಬಕ್ಕೆ ಬ್ರಿಟಿಷರು ಏರಿಸಿದ್ದರು. ನೇಣುಗಂಬಕ್ಕೆ ಏರಿಸಿದ್ದ ದಿನ ಜನವರಿ 26 ರಂದು ಸಂಗೊಳ್ಳಿಯಲ್ಲಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಮಾಡಿದ್ದೇವೆ. 270 ಕೋಟಿ ರೂ. ವೆಚ್ಚದಲ್ಲಿ ಸೈನಿಕ ಶಾಲೆ ಸೇರಿದಂತೆ ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದೆನು. ಮುಂದಿನ ತಿಂಗಳು ಅದು ಉದ್ಘಾಟನೆ ಆಗುತ್ತಿದೆ. ದೇಶಭಕ್ತಿ ಇರೋ ಯುವಕರು ಸೈನ್ಯ ಸೇರಬೇಕು, ನಮ್ಮನ್ನೆಲ್ಲ ರಕ್ಷಿಸಬೇಕು ಎಂದರು.
ಲೋಡ್ ಶೆಡ್ಡಿಂಗ್ ಆರಂಭ, ಕತ್ತಲೆಯಲ್ಲಿ ಮುಳುಗಲಿದೆ ಕರ್ನಾಟಕ: ಗೃಹ ಸಚಿವ ಪರಮೇಶ್ವರ್
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ಶಿಫಾರಸು: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವ ವಿಚಾರವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಕೆಲಸ ಮಾಡುತ್ತೇನೆ. ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ಕೃಷ್ಣಮೂರ್ತಿ ಕಾರಣವಾಗಿದ್ದಾರೆ. ಜೊತೆಗೆ, ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೂ ಕೃಷ್ಣಮೂರ್ತಿ ಕಾರಣವಾಗಿದ್ದಾರೆ. ಇನ್ನು ಮುಖ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಫೋಟೋವನ್ನು ಕಡ್ಡಾಯವಾಗಿ ಅಳವಡಿಸುವ ಕುರಿತು ಆದೇಶ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
270 ಕೋಟಿ ರೂ. ವೆಚ್ಚದಲ್ಲಿ ಸಂಗೊಳ್ಳಿ ಗ್ರಾಮ ಅಭಿವೃದ್ಧಿ: ಇನ್ನು ಸಂಗೋಳ್ಳಿ ರಾಯಣ್ಣದ ಸವಿನೆನಪಿಗಾಗಿ 110 ಎಕರೆಯಲ್ಲಿ ಸಂಗೊಳ್ಳಿ ಗ್ರಾಮವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಒಟ್ಟು 270 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸಂಗೊಳ್ಳಿ ಊರು, ಮ್ಯುಸಿಯಂ, ಶಾಲೆ ಎಲ್ಲವೂ ಅಭಿವೃದ್ಧಿ ಮಾಡುತ್ತಿದ್ದೇವೆ. ಇನ್ನು ಅಭಿವೃದ್ಧಿ ಕಾರ್ಯಗಳು ಮುಕ್ತಾಯಗೊಂಡ ನಂತರ ನಾನೇ ಉದ್ಘಾಟನೆ ಮಾಡಬೇಕು ಎಂಬ ಆಶಯವಿದೆ. ಸಂಗೊಳ್ಳಿ ಮತ್ತು ರಾಯಗಡ ಎರಡಲ್ಲೂ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯ ದಿನಾಚರಣೆ ಭಾಷಣದ ಹೈಲೆಟ್ಸ್..! ಮೆಟ್ರೋ ವಿಸ್ತರಣೆ, ನೈತಿಕ ಪೊಲೀಸ್‌ಗಿರಿ ಕಡಿವಾಣ
ಸ್ವಾತಂತ್ರ್ಯ ಸಿಕ್ಕು 76 ವರ್ಷದಲ್ಲಿ ಸಾಧನೆ ಬಗ್ಗೆ ಆತ್ಮಾವಲೋಕನ ಅಗತ್ಯ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷದಲ್ಲಿ ಏನು ಸಾಧಿಸುದ್ದೇವೆ ಅನ್ನೋದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾವ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನೋದು ತಿಳಿದಿಕೊಳ್ಳಬೇಕಿದೆ. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸಿಕೊಳ್ಳಬೇಕು. ಯಾವುದೇ ಅಪೇಕ್ಷೆ ಇಲ್ಲದೆ ನಮ್ಮನ್ನ ದಾಸ್ಯದಿಂದ ಬಿಡಿಸಿದ್ದಾರೆ. ಎಲ್ಲರಿಗೂ ಆರ್ಥಿಕ, ರಾಜಕೀಯ, ಸಾಮಾಜಿಕ ನ್ಯಾಯ ಸಿಗಬೇಕು. ಎಲ್ಲಾ ಜನರಿಗೂ ನ್ಯಾಯ ಸಿಗಬೇಕು. ಇವತ್ತು ಸ್ವಾತಂತ್ರ್ಯ ಲಭಿಸಿದ ದಿನವಾಗಿದ್ದು, ಹಬ್ಬದ ರೀತಿ ಆಚರಣೆ ಮಾಡಬೇಕು ಎಂದರು.