Karnataka Anti Aonversion Bill ಇಂದಿನ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಮಸೂದೆಗೆ ನಿಶಾನೆ?

  • ಒಪ್ಪಿಗೆ ಸಿಕ್ಕಿದರೆ ಇಂದು/ನಾಳೆ ಮಂಡನೆ
  • ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ: ಪಾಸಾಗುತ್ತಾ?
  • ಸದನದಲ್ಲಿ ವಿಧೇಯಕ ವಿರೋಧಿಸಲು ಕಾಂಗ್ರೆಸ್‌ ಸಜ್ಜು
Karnataka government likely to Tabled anti-conversion Bill on dec 20th cabinet meeting ckm

ಬೆಂಗಳೂರು(ಡಿ.20);  ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕವನ್ನು(Karnataka Anti Conversion Bill) ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ(Cabinet Meeting) ಈ ಬಗ್ಗೆ ಚರ್ಚಿಸಲಿದೆ ಎಂದು ತಿಳಿದುಬಂದಿದೆ.

ವಿಧಾನ ಪರಿಷತ್ತಿನಲ್ಲಿ ಬಹುಮತ ಇಲ್ಲದ ಕಾರಣದಿಂದ ವಿಧೇಯಕಕ್ಕೆ ಅನುಮೋದನೆ ಪಡೆಯುವುದು ಹೇಗೆ ಎಂಬ ಬಗ್ಗೆ ಕಾರ್ಯತಂತ್ರ ರೂಪಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಚರ್ಚೆ ನಂತರ ವಿಧೇಯಕ ಮಂಡನೆಗೆ ಒಪ್ಪಿಗೆ ದೊರೆತರೆ ಸೋಮವಾರ ಅಥವಾ ಮಂಗಳವಾರ ಸದರಿ ಮಸೂದೆಯನ್ನು ಮಂಡನೆ ಮಾಡುವ ಉದ್ದೇಶ ಹೊಂದಿದೆ. ಈ ವಿಧೇಯಕಕ್ಕೆ ಕಾಂಗ್ರೆಸ್‌(Karnataka Congress) ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ವಿರೋಧ ವ್ಯಕ್ತಪಡಿಸುವುದಾಗಿ ಘೋಷಿಸಿದೆ. ಕೆಳಮನೆಯಲ್ಲಿ ಕಾಂಗ್ರೆಸ್‌ ವಿರೋಧಿಸಿದರೂ ಅನುಮೋದನೆ ಪಡೆಯುವ ನಿಲುವನ್ನು ಸರ್ಕಾರ ತಳೆಯಬಹುದು. ಆದರೆ, ಪರಿಷತ್ತಿನಲ್ಲಿ ಸದ್ಯಕ್ಕೆ ಬಹುಮತವಿಲ್ಲ. ಕಾಂಗ್ರೆಸ್‌ ತನ್ನ ಸದಸ್ಯರಿಗೆ ವಿಪ್‌ ಕೂಡ ನೀಡಿರುವುದರಿಂದ ಈ ವಿಧೇಯಕಕ್ಕೆ ಮೇಲ್ಮನೆಯ ಒಪ್ಪಿಗೆ ಪಡೆಯುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ.

Religious Conversion ಚರ್ಚ್‌ನಿಂದ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ಮತಾಂತರಿಗಳ ಪ್ರಶ್ನಿಸಿದ ಶಾಸಕ ಗೂಳಿಹಟ್ಟಿ!

ಇದರೊಂದಿಗೆ ಸಚಿವ ಸಂಪುಟದಲ್ಲಿ ಎಂಇಎಸ್‌(MES) ಪುಡಾಂಟಿಕೆ, ಸಚಿವ ಭೈರತಿ ಬಸವರಾಜ್‌ ವಿರುದ್ಧದ ಭೂ ಕಬಳಿಕೆ ವಿಚಾರ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ. ಒಂದು ವೇಳೆ ಪ್ರತಿಪಕ್ಷ ಕಾಂಗ್ರೆಸ್‌ 40 ಪರ್ಸೆಂಟ್‌ ಸರ್ಕಾರ ಮತ್ತು ಬಿಟ್‌ಕಾಯಿನ್‌ ಬಗ್ಗೆ ಪ್ರಸ್ತಾಪಿಸಿದರೆ ಕಾಂಗ್ರೆಸ್‌ ಮುಖಂಡರಾದ ವಿ.ಎಸ್‌.ಉಗ್ರಪ್ಪ, ಸಲೀಂ ಅವರ ನಡುವೆ ನಡೆದ ಭ್ರಷ್ಟಾಚಾರದ ಮಾತುಕತೆಯನ್ನೇ ಮುಂದೆ ಮಾಡಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬಿಎಸ್‌ವೈ ವಿಶ್ವಾಸ:
ಇನ್ನು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಪರಿಷತ್‌ನಲ್ಲೂ ನಮಗೆ ಬಹುಮತ ಸಿಗುತ್ತದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದು ಬಿಸ್ ಯಡಿಯೂರಪ್ಪ(BS Yediyurappa) ಹೇಳಿದ್ದಾರ.

Love Jihad: ಮತಾಂತರ ನಿಷೇಧ ಕಾಯ್ದೆ ಬೆನ್ನಲ್ಲೇ ಲವ್ ಜಿಹಾದ್‌ಗೂ ಕಡಿವಾಣ?ಸಚಿವರ ಸುಳಿವು

ಮತಾಂತರ ನಿಷೇಧ ಕಾಯ್ದೆ ಜಾರಿಯಾಗಲಿ
ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಭಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ದತ್ತಜಯಂತಿ ಅಂಗವಾಗಿ ದತ್ತಪೀಠದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಮತಾಂತರದಿಂದ ದೇಶಾಂತರ ಮತಾಂತರವೇ ದೊಡ್ಡ ಗಂಡಾಂತರ ಎಂದುರಾಗಲಿದೆ. ಹಿಂದೂಗಳ ಮಠ, ಮಂದಿರಗಳು ಉಳಿಯವುದಿಲ್ಲ. ರಾಜ್ಯದ ಹಲವೆಡೆ ಇಡೀ ಗ್ರಾಮಗಳೇ ಮತಾಂತರ ಆಗಿ ಹೋಗಿವೆ ಎಂದು ಹೇಳಿದರು.

ಮತಾಂತರದ ಕಾರಣದಿಂದ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು, ಮುಂದೆ ದೊಡ್ಡ ಸಮಸ್ಯೆ ಆಗಲಿದೆ. ದತ್ತಮಾಲಾಧಾರಿಗಳು ಕೇವಲ ದತ್ತಭಕ್ತರಾಗಿ ಇರಲು ಸೀಮಿತ ಆಗಬಾರದು. ಹಿಂದೂ ಧರ್ಮಕ್ಕೆ ಆಗುವಂತಹ ಅಕ್ರಮಣ, ಅಪಮಾನಗಳ ವಿರುದ್ಧ ಸಕ್ರಿಯರಾಗಬೇಕು. ಲವ್‌ ಜಿಹಾದ್‌, ಗೋ ಹತ್ಯೆ, ಮತಾಂತರ ವಿರುದ್ಧ ಭಜರಂಗದಳ ಕೆಲಸ ಮಾಡುತ್ತಿದೆ. ದೇಶಕ್ಕೆ ಅಪಮಾನ ವಿರುದ್ಧ ಹೋರಾಟ ಮಾಡುತ್ತಿದೆ ಎಂದರು.

ಮುಗ್ದ ಹಿಂದುಗಳಿಗೆ ಆಸೆ ಆಮಿಷವೊಡ್ಡಿ ಮತಾಂತರ ಮಾಡುವ ಷಡ್ಯಂತ್ರ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ನಡೆಯುತ್ತಿದೆ. ದೇಶದ 10 ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದೆ. ಗ್ರಾಮ ಗ್ರಾಮಗಳಲ್ಲಿ ಮತಾಂತರ ನಡೆಯುತ್ತಿದೆ. ಪ್ರಾರ್ಥನಾ ಮಂದಿರಗಳು ನಿರ್ಮಾಣ ಆಗುತ್ತಿವೆ. ಇದೇ ರೀತಿಯಲ್ಲಿ ಹಿಂದೂ ಸಮಾಜ ಸ್ವಾರ್ಥ ಲಾಲಸೆಯಲ್ಲಿ ಮುಳುಗಿದರೆ ಮುಂದಿನ ದಿನಗಳಲ್ಲಿ ಕ್ರೈಸ್ತೀಕರಣ ಆಗುವ ಹಂತಕ್ಕೆ ಹೋಗಲಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಡೂರು ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಜ ದೇಶಿಕೇಂದ್ರ ಸ್ವಾಮೀಜಿ, ನಂದಿಮಠದ ವೃಷಭಲಿಂಗ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾ ಮಹಾಂತ ಸ್ವಾಮೀಜಿ, ಹುಲಿಕೆರೆ ವಿರೂಪಾಕ್ಷಲಿಂಗ ಸ್ವಾಮೀಜಿ, ಅಮೃತಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಯಬಸವಾನಂದ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಭಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿ, ವಿಎಚ್‌ಪಿ ದಕ್ಷಿಣ ಪ್ರಾಂತ ಸಂಚಾಲಕ ಕೆ.ಆರ್‌.ಸುನೀಲ್‌, ಭಜರಂಗದಳ ಪ್ರಾಂತ ಸಂಚಾಲಕ ರಘು ಸಕಲೇಶಪುರ ಇದ್ದರು.

Latest Videos
Follow Us:
Download App:
  • android
  • ios