Asianet Suvarna News Asianet Suvarna News

ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಹೊಸ ಟೂವೇ ಪಾಸ್!

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ, ಜನರ ಓಡಾಟ ಆರಂಭವಾಗಿದೆ. ಆದರೆ ಸುಖಾಸುಮ್ಮನೆ ತಿರುಗಾಡಿದರೆ ಕೇಸ್ ಬೀಳಲಿದೆ. ಇನ್ನು ಅವಶ್ಯಕತೆ ಮೇಲೆ ಸಂಚರಿಸವವರಿಗೆ ಇದೀಗ ಹೊಸ ಪಾಸ್ ಜಾರಿಮಾಡಲಾಗಿದೆ. ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಇದೀಗ ನೂತನ ಪಾಸ್ ಅನ್ವಯವಾಗಲಿದೆ

Karnataka Government issued two way passes to inter district travelers
Author
Bengaluru, First Published May 5, 2020, 9:19 PM IST

ಬೆಂಗಳೂರು(ಮೇ.05):  ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೆ ಕೆಲ ನಿಯಮಗಳು ಬದಲಾವಣೆಯಾಗಿದೆ. ಆರಂಭದಲ್ಲಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಒನ್ ವೇ ಪಾಸ್ ನೀಡಲಾಗಿತ್ತು. ಇದೀಗ ಟೋವೇ ಪಾಸ್ ಜಾರಿ ಮಾಡಲಾಗಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಹೊಸ ಆದೇಶ ಹೊರಡಡಿಸಿದ್ದಾರೆ.

ದಾವಣಗೆರೆಯಿಂದ ಓಡಾಡುವ ಅಧಿಕಾರಿಗಳಿಗೆ ನಿರ್ಬಂಧ.

ಈ ಹಿಂದೆ ಒನ್ ಟೈಮ್ ಒನ್ ವೇ ಪಾಸ್ ಜಾರಿ ಮಾಡಲಾಗಿತ್ತು. ಈ ಪಾಸ್ ಬಳಸಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಒನ್ ವೇ ಬದಲಿಗೆ ಒನ್ ಟೈಮ್ ಟೂವೇ ಪಾಸ್ ನೀಡುವಂತೆ ಆದೇಶ ಜಾರಿ ಮಾಡಲಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ತುರ್ತು ಕೆಲಸದ ಮೇಲೆ ಹೋಗುವ ನಾಗರಿಕರಿಗೆ ಇದೀಗ ಟೂವೇ ಪಾಸ್ ವಿತರಿಸಲು ಸೂಚಿಸಲಾಗಿದೆ.

ಲಾಕ್‌ಡೌನ್ ನಿಯಮ ಸಡಿಲಿಕೆಯಿಂದ ಕಾರ್ಖಾನೆಗಳು, ಕೈಗಾರಿಕೆಗಳು ನಿಯಮಿತ ನೌಕರರ ಮೂಲಕ ಆರಂಭಗೊಂಡಿದೆ. ಹೀಗಾಗಿ ಕಾರ್ಮಿಕರು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕೆಲಸಕ್ಕಾಗಿ ತೆರಳುವುದು ಅನಿವಾರ್ಯವಾಗಿದೆ.  ಇನ್ನು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೂ ಅನೂಕೂಲವಾಗುವಂತೆ ಇದೀಗ ಟೂವೇ ಪಾಸ್ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ ಅಂತರ್ ಜಿಲ್ಲಾ ಪಾಸ್‌ಗಳನ್ನು ನೀಡಲಿದೆ. 

Karnataka Government issued two way passes to inter district travelers
 

Follow Us:
Download App:
  • android
  • ios