Asianet Suvarna News Asianet Suvarna News

ರಾಜ್ಯದಲ್ಲಿ ನೈಟ್ ಕರ್ಫ್ಯೂ, ಯಾವುದಕ್ಕೆಲ್ಲ ಅವಕಾಶ? ಇಲ್ಲಿದೆ ವಿವರ

ರಾಜ್ಯದಲ್ಲಿ 9 ದಿನ ನೈಟ್‌ ಕರ್ಫ್ಯೂ| ಇಂದಿನಿಂದ ಪ್ರತಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ| ಆಸ್ಪತ್ರೆ, ಮೆಡಿಕಲ್‌ ಶಾಪ್‌, ಹಾಲು, ದಿನಪತ್ರಿಕೆ ಸೇರಿ ಅಗತ್ಯ ಸೇವೆ ಲಭ್ಯ| ಇನ್ನುಳಿದಂತೆ ಏನಿರುತ್ತೆ? ಇಲ್ಲಿದೆ ಮಾಹಿತಿ

Karnataka government imposes night curfew details of availabilities pod
Author
Bangalore, First Published Dec 24, 2020, 7:27 AM IST

ಬೆಂಗಳೂರು(ಡಿ.24): ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ಕೊರೋನಾ ವೈರಸ್‌ ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರ ರಾತ್ರಿ 11 ಗಂಟೆಯಿಂದ (ಡಿ.24) ಜನವರಿ 1ರವರೆಗೆ ಪ್ರತಿನಿತ್ಯ ರಾತ್ರಿ 11ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕಫä್ರ್ಯ ಜಾರಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

"

ಯಾವುದಕ್ಕೆ ಅವಕಾಶ?

1. ಆಸ್ಪತ್ರೆ, ಮೆಡಿಕಲ್‌ ಶಾಪ್‌, ಹಾಲು, ಹಣ್ಣು-ತರಕಾರಿ, ದಿನಪತ್ರಿಕೆ ಸೇರಿ ತುರ್ತು ಮತ್ತು ಅಗತ್ಯ ಸೇವೆ

2. ಕೃಷಿ ಉತ್ಪನ್ನ, ಸರಕು ಸಾಗಣೆ ವಾಹನಗಳು, ದೂರ ಪ್ರಯಾಣದ ಬಸ್‌, ರೈಲು, ವಿಮಾನ ಸಂಚಾರ

3. ರಾತ್ರಿ ಪಾಳಿ ಇರುವ ಸಂಸ್ಥೆಗಳಲ್ಲಿ ಶೇ.50 ಸಿಬ್ಬಂದಿ ಕೆಲಸ. ಅಲ್ಲಿನ ನೌಕರರಿಗೆ ಗುರುತಿನ ಚೀಟಿ ಕಡ್ಡಾಯ

4. ದಿನದ 24 ತಾಸೂ ಕೆಲಸ ಮಾಡುವ ಕಾರ್ಖಾನೆಗಳು ಯಾವುದೇ ನಿರ್ಬಂಧ ಇಲ್ಲದೆ ಕಾರ‍್ಯನಿರ್ವಹಣೆ

5. ಬಸ್‌, ರೈಲ್ವೆ, ವಿಮಾನ ಪ್ರಯಾಣಿಕರು ಟಿಕೆಟ್‌ ತೋರಿಸಿ ಆಟೋ, ಕ್ಯಾಬ್‌ಗಳಲ್ಲಿ ಸಂಚರಿಸಲು ಅವಕಾಶ

6. ಇಂದು ರಾತ್ರಿ ಕ್ರಿಸ್‌ಮಸ್‌ ಮಿಡ್‌ನೈಟ್‌ ಮಾಸ್‌ ನಡೆಸಬಹುದು. ಆದರೆ, ಕೋವಿಡ್‌ ನಿಯಮ ಪಾಲನೆ

7. ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಆಚರಣೆಗೂ ಅವಕಾಶ

ಮದ್ಯ ಮಾರಿದರೆ ಲೈಸೆನ್ಸ್‌ ರದ್ದು

ಕೊರೋನಾ ಹರಡುವುದನ್ನು ತಡೆಯಲು ರಾಜ್ಯದಲ್ಲಿ ಗುರುವಾರದಿಂದ ಜಾರಿಗೆ ಬರಲಿರುವ ರಾತ್ರಿ ಕಫ್ರ್ಯೂ ಸಂದರ್ಭದಲ್ಲಿ ಮದ್ಯದಂಗಡಿ ತೆರೆದರೆ ಅಂಥ ಅಂಗಡಿಗಳ ಪರವಾನಗಿಯನ್ನೇ ರದ್ದುಮಾಡಲಾಗುವುದು.

- ಎಚ್‌.ನಾಗೇಶ್‌, ಅಬಕಾರಿ ಸಚಿವ

Follow Us:
Download App:
  • android
  • ios