Asianet Suvarna News Asianet Suvarna News

ರೈತರಿಗೆ ಮಹತ್ವದ ಆದೇಶ: ಗ್ರಾಮ ನಕಾಶೆ ಡೌನ್ಲೋಡ್ ಮಾಡಿ ಜಮೀನಿನ ಬಂಡಿದಾರಿ, ಕಾಲುದಾರಿಗಳ ಒತ್ತುವರಿ ತೆರವುಗೊಳಿಸಿ

ಕರ್ನಾಟಕ ಸರ್ಕಾರವು ರಾಜ್ಯದ ರೈತರ ಜಮೀನುಗಳಿಗೆ ಹೋಗಲು ಇರುವ ಬಂಡಿದಾರಿ, ಕಾಲುದಾರಿ ಕುರಿತು ಮಹತ್ವದ ಆದೇಶ ಹೊರಡಿಸಿದೆ.

Karnataka government has issued an important order to clear farmer field road leading sat
Author
First Published Oct 21, 2023, 1:20 PM IST

ಬೆಂಗಳೂರು (ಅ.21): ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ಸರ್ಕಾರದಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಕಾಲುದಾರಿ ತೆರವುಗೊಳಿಸಲು ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ.

ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ನ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು 'ದಾರಿ' ಸಮಸ್ಯೆ ಇದ್ದು, ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 'ದಾರಿ' ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದ ನಷ್ಟ ಹೊಂದುತ್ತಿರುವುದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿರುತ್ತವೆ.

ಪ್ರಾಚಾರ್ಯರ ಕಿರುಕುಳಕ್ಕೆ ತರಗತಿ ಕೋಣೆಯಲ್ಲಿಯೇ ಕುಸಿದು ಬಿದ್ದ ಕಾಲೇಜು ಪ್ರಾಧ್ಯಾಪಕಿ

ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ಯಾಗ್ಯೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಅಂತಹ ಜಾಗಗಳನ್ನು ಮುಚ್ಚಿರುವುದು ಕಂಡುಬಂದಿದೆ. ಜೊತಗೆ, ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು ರೈತರ ಮಧ್ಯದ ವೈಯಕ್ತಿಕ ದ್ವೇಷ/ಅಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಬಳಕೆದಾರ ರೈತರ ತೊಂದರೆಗಳಿಗೆ ಬಹುತೇಕ ಕಾರಣಗಳಾಗಿರುವುದು ಕಂಡುಬರುತ್ತದೆ.

ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ 'ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್‌ನಲ್ಲಿ ನಮೂದು ಮಾಡಲು ಅವಕಾಶವಿದೆ.The Indian Easement Act, 1882 ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (Easement)ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದಾಗಿ ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಲು ಅವಕಾಶವಿದೆ.

ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸೀಜರ್‌ (Code of Criminal Procedure) 1973ರ ಕಲಂ 147 ರನ್ವಯ 'ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗದ' ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ, ಅದನ್ನು ನಿವಾರಿಸಲು ಕಾನೂನು ರೀತ್ಯಾ ತಹಶೀಲ್ದಾರ್ ರವರು ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮವಹಿಸುವ ಅಧಿಕಾರ ಹೊಂದಿರುತ್ತಾರೆ. ಅದರಂತೆ, ತಾಲ್ಲೂಕಿನ ತಹಶೀಲಾರ್‌ಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ, ಅಂತಹ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸೂಚಿಸಿದೆ.

ಬಿಗ್‌ಬಾಸ್‌ ಸೀಸನ್‌ 10 ಮಹಾಭಾರತಕ್ಕೆ ಹೋಲಿಕೆ: ಶ್ರೀಕೃಷ್ಣ ಕಿಚ್ಚ ಸುದೀಪ್‌, ಶಕುನಿ ತುಕಾಲಿ ಸಂತು, ದ್ರೌಪದಿ ಯಾರು ಗೊತ್ತಾ?

ಗ್ರಾಮ ನಕಾಶೆಗೆ ಇಲ್ಲಿದೆ ಲಿಂಕ್‌:  ರೈತರು ತಮ್ಮ ಗ್ರಾಮಗಳು ಹಾಗೂ ಜಮೀನುಗಳ ಕಾಲುದಾರಿ, ಬಂಡಿದಾರಿಗಳ ಬಗ್ಗೆ ಮಾಹಿತಿ ತಿಳಿಯಲು ಗ್ರಾಮ ನಕಾಶೆಯನ್ನು ತೆಗೆದುಕೊಳ್ಳಬೇಕು. ನೀವು ನಿಮ್ಮ ಗ್ರಾಮದ ನಕಾಶೆಯನ್ನು ತೆಗೆದುಕೊಳ್ಳಲು ಸರ್ಕಾರದ ಅಧಿಕೃತ ಲಿಂಕ್‌ ಇಲ್ಲಿದೆ ನೋಡಿ. ಕೂಡಲೇ ಗ್ರಾಮದ ನಕಾಶೆಯನ್ನು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಜಮೀನುಗಳಿಗೆ ಕಲ್ಪಿಸುವ ಕಾಲುದಾರಿ, ಬಂಡಿ ದಾರಿಯನ್ನು ಒತ್ತುವರಿ ಮಾಡಿದ್ದಲ್ಲಿ ಅದನ್ನು ಬಿಡಿಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದು. ಗ್ರಾಮ ನಕಾಶೆ ಡೌನ್‌ಲೋಡ್‌ ಲಿಂಗ್‌ :-  https://landrecords.karnataka.gov.in/service3/

Follow Us:
Download App:
  • android
  • ios