ಸಬ್ ರಿಜಿಸ್ಟರ್ ಆಫೀಸ್ ಸಮಯ ಬದಲಾವಣೆ, ಬೆಳಗ್ಗೆ 9 ರಿಂದ ರಾತ್ರಿ 7ರ ವರೆಗೂ ಕಚೇರಿ ಓಪನ್
* ಸಬ್ ರಿಜಿಸ್ಟರ್ ಆಫೀಸ್ ಸಮಯದಲ್ಲಿ ಬದಲಾವಣೆ
* ಬೆಳಗ್ಗೆ 9 ರಿಂದ ರಾತ್ರಿ 7ರ ವರೆಗೂ ಸಬ್ ರಿಜಿಸ್ಟರ್ ಕಚೇರಿ ಓಪನ್
* ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು, (ಫೆ.15): ರಾಜ್ಯ ಸರ್ಕಾರವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಸಮಯವನ್ನು ವಿಸ್ತರಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಲ್ಲಿ(Sub Registrar Office) ಜನಸಂದಣೆ ಹೆಚ್ಚಿರುವ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿಯ ಸಮಯವನ್ನು ವಿಸ್ತರಿಸಲಾಗಿದೆ.
ಇನ್ನು ಮುಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳೂ ತೆರೆದಿರುತ್ತವೆ ಎಂದು ನೋಂದಣೆ ಉಪ ಮಹಾ ಪರಿವೀಕ್ಷಕರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಉಪ ನೋಂದಣಿ ಕಚೇರಿ ಕರ್ತವ್ಯದ ಸಮಯ ಪರಿಷ್ಕರಣೆ ಮಾಡಲಾಗಿದ್ದು, ಈ ಸಂಬಂಧ ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದುವರೆಗೂ ನೋಂದಣಿ ಮತ್ತು ಮುದ್ರಾಂಕ ಕಚೇರಿ ಸಮಯ ಬೆಳಗ್ಗೆ 10ರಿಂದ ಸಂಜೆ 5.50ರ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಆದ್ರೆ, ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿಯ ಸಮಯವನ್ನು ವಿಸ್ತರಿಸಲಾಗಿದೆ.