ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ ಕಿಡಿ

ಸೆ, 19 ರಂದು ನಡೆದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಗಲಭೆ ಹಿನ್ನಲೆ ಬಂಧನವಾಗಿದ್ದ ಸತೀಶ್ ಪೂಜಾರಿಯನ್ನ ಅನಗತ್ಯವಾಗಿ ಬಂಧಿಸಿ ಪೊಲೀಸರು ಹಿಂಸೆ‌ ನೀಡಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

karnataka former minister mp renukacharya outraged against state police behavior rav

ದಾವಣಗೆರೆ (ಅ.21): ಸೆ, 19 ರಂದು ನಡೆದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಗಲಭೆ ಹಿನ್ನಲೆ ಬಂಧನವಾಗಿದ್ದ ಸತೀಶ್ ಪೂಜಾರಿಯನ್ನ ಅನಗತ್ಯವಾಗಿ ಬಂಧಿಸಿ ಪೊಲೀಸರು ಹಿಂಸೆ‌ ನೀಡಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಲಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸತೀಶ್ ಪೂಜಾರಿ ಒಂದು ವಾರದ ಹಿಂದೆ ಜಾಮೀನಿನ ಮೇಲೆ ಹೊರ ಬಂದಿರುವ ಹಿನ್ನೆಲೆ ಮನೆಗೆ ಭೇಟಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಎಂಪಿ ರೇಣುಕಾಚಾರ್ಯ ಅವರು ಕುಟುಂಬಕ್ಕೆ ಧೈರ್ಯ ತುಂಬಿದರು ಈ ವೇಳೆ ಬಿಜೆಪಿ ಮುಖಂಡರು ಸಾಥ್ ನೀಡಿದರು. 

ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ- ರೇಣುಕಾಚಾರ್ಯ 

ನೀವು ಸತೀಶ್ ಪೂಜಾರಿಯನ್ನು ಬಂಧಿಸಬಹುದು ಆದರೆ ಹಿಂದುತ್ವವನ್ನು ಬಂಧಿಸಲು ಸಾಧ್ಯವಿಲ್ಲ. ಸತೀಶ್ ಪೂಜಾರಿ ಪರವಾಗಿ ನಾವು ಇದ್ದೇವೆ. ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ. ನಾಳೆ ನಮ್ಮ ಸರ್ಕಾರ ಬರುತ್ತೆ ಆಗ ಇದೇ ಪೊಲೀಸರು ನಮ್ಮ ಗುಲಾಮರಾಗಿ ನಮ್ಮ ಮನೆ ಮುಂದೆ ನಿಲ್ಲಬೇಕಾಗುತ್ತೆ ಮರೆಯಬೇಡಿ ಎಂದು ಪೊಲೀಸ್ ಇಲಾಖೆ ವಿರುದ್ದ ಹರಿಹಾಯ್ದರು.

ಬೈರತಿ ಸುರೇಶ್ ವಿರುದ್ದ ಕಿಡಿ

ಸಿಎಂ ಸಿದ್ದರಾಮಯ್ಯರ ಹಿಂದೆ ಮುಂದೆ ಓಡಾಡಿ ರಾಜ್ಯವನ್ನೇ ಲೂಟಿ ಮಾಡಿದವನು ಬೈರತಿ ಸುರೇಶ್. ಮೂಡಾ ದಾಖಲೆಗಳನ್ನು ಹೆಲಿಕಾಪ್ಟರ್‌ನಲ್ಲಿ ತಂದು ಸುಟ್ಡುಹಾಕಿದವನು ಇವನು. ಮುಡಾ ಹಗರಣದಲ್ಲಿ ಅವನು ಭಾಗಿಯಾಗಿರುವುದರಿಂದ ಆ ಕೆಲಸ ಮಾಡಿರಬಹುದು. ಇಂತಹ ಭ್ರಷ್ಟನಾದವನು ಒಬ್ಬ ಮಹಿಳಾ ಕೇಂದ್ರ ಸಚಿವೆ ಬಗ್ಗೆ ಕೇವಲವಾಗಿ ಮಾತನಾಡಿದರೆ ನಾವು ಸುಮ್ಮನೆ ಇರೋದಿಲ್ಲ. ಅವರು ರಾಜಕಾರಣ ಕ್ಕೆ ಬಂದಾಗ ನೀನಿನ್ನೂ ರಾಜಕಾರಣದಲ್ಲೇ ಇರಲಿಲ್ಲ. ನೀನೊಬ್ಬ ಬಚ್ಚಾ ಆಗ. ನಾವು ಇಷ್ಟಕ್ಕೆ ಸುಮ್ಮನಾಗೋದಿಲ್ಲ.  ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಜೊತೆ ಎಲ್ಲಿ ಹೋದರೂ ಘೇರಾವ್ ಹಾಕುತ್ತೇವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

ಇನ್ನು ಚನ್ನಪಟ್ಟಣ ಉಪಚುನಾವಣೆ ಸಮೀಪಿಸಿದ ಹೊತ್ತಲ್ಲಿ ಸಿಪಿ ಯೋಗೇಶ್ವರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಗುರಿ ಇರೋದು ಮೂರಕ್ಕೆ ಮೂರು ಉಪಚುನಾವಣೆ ಗೆಲ್ಲುವುದು. ಚನ್ನಪಟ್ಟಣ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದು ರಾಜ್ಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಸಿಪಿ ಯೋಗೇಶ್ವರ್ ಬಿಜೆಪಿಯಲ್ಲೇ ಇರುತ್ತಾರೆ, ಟಿಕೆಟ್ ಫೈನಲ್ ಆಗಿಲ್ಲ. ಸಿಪಿ ಯೋಗೇಶ್ವರ ಚನ್ನಪಟ್ಟಣದಲ್ಲಿ ಒಳ್ಳೆ ಹೆಸರು ಇದೆ. ಟಿಕೆಟ್ ಬಗ್ಗೆ  ಮಾತನಾಡುವಷ್ಡು ದೊಡ್ಡವನು ನಾನಲ್ಲ. ನಾವು ಎಲ್ಲಾರೂ ಒಟ್ಟಾಗಿ ಕೆಲಸ ಮಾಡಿ ಮೂರು ಉಪಚುನಾವಣೆ ಗೆಲ್ಲಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios