ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲಿನ ಮುಂದೆ ಮಾತಾಡ್ತಿದ್ದೇನೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ‌ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಹೇಳಿದರು.

ಬೆಂಗಳೂರು (ಮಾ.11): ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲಿನ ಮುಂದೆ ಮಾತಾಡ್ತಿದ್ದೇನೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ‌. ನಾನು ಎಲ್ಲೋ ಶೂಟಿಂಗ್‌ನಲ್ಲಿ, ಬ್ಯುಸಿ ಇದ್ದರು ಪಕ್ಷಕ್ಕೆ ದುಡಿದಿದ್ದರಿಂದ ಈ ಅವಕಾಶ ಸಿಕ್ಕಿದೆ. ಅಕಾಡೆಮಿಯಲ್ಲಿ ತುಂಬಾ ಕೆಲಸಗಳಿವೆ. ಎಲ್ಲಾ ಕೆಲಸವನ್ನು ಮಾಡ್ತೀನಿ‌ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಹೇಳಿದರು.

ವಿಧಾನಸೌಧದ ಮೆಟ್ಟಿಲುಗಳ ಬಳಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲಿನ ಮುಂದೆ ಮಾತಾಡ್ತಿದ್ದೇನೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ‌. ಎಲ್ಲೋ ಶೂಟಿಂಗ್, ಬ್ಯುಸಿ ಇದ್ದರು ಪಕ್ಷಕ್ಕೆ ದುಡಿದಿದ್ದೇನೆ. ನಮ್ಮ ತಾಯಿ ತಂದೆ ಕಾಲದಿಂದ ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಎಲ್ಲಾ ಸಮಯದಲ್ಲಿ ಪಕ್ಷಕ್ಕೆ ಕೆಲಸ ಮಾಡ್ತಿದ್ದೇನೆ. ಪಕ್ಷ ನನ್ನ ಸೇವೆ ಮನಸಿನಲ್ಲಿ ಇಟ್ಟುಕೊಂಡು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷ ಸ್ಥಾನ ನೀಡಿದೆ ಎಂದು ಹೇಳಿದರು.

ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿ ಬ್ಯಾನ್, ಗೋಬಿ ಮಂಚೂರಿಗೆ ಬಣ್ಣ ನಿಷೇಧ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ

ರಾಜ್ಯದ ರಾಜಕಾರಣದಲ್ಲಿ ಒಂದೊಂದೆ ಮೆಟ್ಟಲು ಹತ್ತಿಕೊಂಡು ಹೋಗಿ ಅಂತ ಡಿಸಿಎಂ ಡಿ..ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ‌. ನಿಮ್ಮ ಆಶೀರ್ವಾದ ಪ್ರೋತ್ಸಾಹ ಹೀಗೆ ಇರಬೇಕು. ಚಲನಚಿತ್ರ ಅಕಾಡೆಮಿಯಲ್ಲಿ ತುಂಬಾ ಕೆಲಸಗಳಿವೆ. ಎಲ್ಲಾ ಕೆಲಸವನ್ನು ಮಾಡ್ತೀನಿ‌ ಎಂದು ತಿಳಿಸಿದರು.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿ ಆಗೋ ವಿಚಾರದ ಬಗ್ಗೆ ಮಾತನಾಡುತ್ತಾ, ನಾನು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ನಾನು ಜನರಲ್ ಕಂಪಾರ್ಟಮೆಂಟ್ ಆಗಿದ್ದೇನೆ. ನನ್ನನ್ನ ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರಿನಲ್ಲಿ 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ ಎಂದು ತಿಳಿಸಿದರು.

ನಮಗೇ ನೀರಿಲ್ಲ, ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋಣ: ಡಿ.ಕೆ.ಶಿವಕುಮಾರ್‌

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ ಗೊತ್ತಿಲ್ಲ ಪಕ್ಷ ಏನ್ ಮಾಡುತ್ತೋ. ಯಾರಿಗೆ ಟಿಕೆಟ್ ಕೊಡ್ತಾರೆ ಗೊತ್ತಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ದವಾಗಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ. ಟಿಕೆಟ್ ಕೊಟ್ಟರೆ ಶೇ.100 ಪರ್ಸೆಂಟ್ ಕಾಂಗ್ರೆಸ್‌ನಿಂದಲೇ ನಿಲ್ತೀನಿ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಹೇಳಿದರು.