ಕೃಷಿಕರಿಗೆ ಸಿಗಲಿದೆ 1 ಕೋಟಿ ರೂ. ಸಹಾಯಧನ: ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಹಾಕಿ

ರಾಜ್ಯ ಸರ್ಕಾರದಿಂದ ಕೃಷಿಕರಿಗೆ ಹಾಗೂ ಕೃಷಿಕ ಸಂಘಟನೆಗಳಿಗೆ ಹೈಟೆಕ್ ಹಾರ್ವೆಸ್ಟರ್ ಸ್ಥಾಪನೆಗೆ 1 ಕೋಟಿ ರೂ. ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಿದೆ.

Karnataka Farmers to get Rs 1 crore subsidy Apply for setting up hi tech harvester hub sat

ಬೆಂಗಳೂರು ನಗರ (ಜ.22): ಹೈಟೆಕ್  ಹಾರ್ವೆಸ್ಟರ್  ಹಬ್  ಯೋಜನೆಯಡಿ  ರೈತರು ಕೃಷಿ ಯಂತ್ರಧಾರೆ ಕೇಂದ್ರಗಳು / ಸೇವಾದಾರ ಸಂಸ್ಥೆಗಳು/ವೈಯಕ್ತಿಕ ಫಲಾನುಭವಿಗಳು ಹಾಗೂ ನೊಂದಾಯಿತ  ಸಂಘ-ಸಂಸ್ಥೆ (Farm Machinery Bank –FMB ಗಳನ್ನೊಳಗೊಂಡಂತೆ) ಗಳಿಂದ ಹೈಟೆಕ್  ಹಾರ್ವೆಸ್ಟರ್  ಹಬ್ ಸ್ಥಾಪನೆಗೆ  ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗದ ರೈತರಿಗೆ  ಗರಿಷ್ಠ ಶೇ.50ರಂತೆ ಪ.ಜಾ/ಪ.ಪಂ ವರ್ಗದ ರೈತರಿಗೆ  ಗರಿಷ್ಠ ಶೇ.70 ರಂತೆ  ಹಾಗೂ ಸಂಘ-ಸಂಸ್ಥೆಗಳಿಗೆ (ಚಾಲ್ತಿಯಲ್ಲಿರುವ  ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾದಾರ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ  ಬ್ಯಾಂಕ್  Farm Machinery Bank –FMB ಗಳನ್ನೊಳಗೊಂಡಂತೆ) ಗರಿಷ್ಠ ಶೇ.70ರಂತೆ  ಸಹಾಯಧನ ನೀಡಲಾಗುವುದು. ವಿವಿಧ  ಹಾರ್ವೆಸ್ಟರ್  ಹಬ್ ಗಳಿಗೆ ನಿಗಧಿಪಡಿಸಿದ  ಗರಿಷ್ಠ ಸಹಾಯಧನದ ಮೊತ್ತಕ್ಕೆ ಸೀಮಿತಗೊಳಿಸಿ ಸ್ಥಳೀಯವಾಗಿ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳನ್ನು  ದಾಸ್ತಾನೀಕರಿಸಲು ಪ್ರತಿ ಒಂದು ಹೈಟೆಕ್  ಹಾರ್ವೆಸ್ಟರ್  ಹಬ್ ಘಟಕಕ್ಕೆ ಗರಿಷ್ಠ ಮೊತ್ತ 1 ಕೋಟಿ ರೂ. ಮೀರದಂತೆ (ರೂ.5 ಲಕ್ಷ ಆಡಳಿತಾತ್ಮಕ ವೆಚ್ಚ ಒಳಗೊಂಡಂತೆ) ಸಹಾಯಧನವನ್ನು ನೀಡಲಾಗುವುದು. ಆಡಳಿತಾತ್ಮಕ ವೆಚ್ಚವನ್ನು ಒಂದು ಬಾರಿ ಮಾತ್ರ ನೀಡಲಾಗುವುದು.

ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ತುಕಾಲಿ ಸಂತೋಷ್!

ಕೃಷಿ  ಯಂತ್ರೋಪಕರಣಗಳ ನೈಜ ಬೆಲೆ ಆಧರಿಸಿ ಫಲಾನುಭವಿ ವರ್ಗವಾರು / ಸಂಘ-ಸಂಸ್ಥೆವಾರು (Farm Machinery Bank –FMB ಗಳನ್ನೊಳಗೊಂಡಂತೆ) ನಿಗಧಿಪಡಿಸಿದ  ಗರಿಷ್ಠ ಸಹಾಯಧನವನ್ನು ಒದಗಿಸಲಾಗುವುದು. ಸಹಾಯಧನವನ್ನು credit linked back ended subsidy ಮುಖಾಂತರವೇ ನೀಡಲಾಗುವುದು. ಕಂಬೈನ್ಡ್ ಹಾರ್ವೆಸ್ಟರ್ ಹಬ್ ನಲ್ಲಿ ಕಂಬೈನ್ಡ್  ಹಾರ್ವೆಸ್ಟರ್ ರೊಂದಿಗೆ BALER  ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ.

ರಾಮಮಂದಿರ ಉದ್ಘಾಟನೆ ವೇಳೆ 'ಜೈ ಶ್ರೀರಾಮ್' ಘೋಷಣೆ ಕೂಗಿದ ಸಿಎಂ ಸಿದ್ದರಾಮಯ್ಯ!

ಆಯ್ಕೆಯಾದ ಫಲಾನುಭವಿಗಳ / ಸಂಘ-ಸಂಸ್ಥೆಗಳು ಕೃಷಿ ಮೂಲಭೂತ ಸೌಕರ್ಯ ನಿಧಿ  (AIF-AGRICULTURAL INFRASTRUCTURE FUND) ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ. ಹೈಟೆಕ್  ಹಾರ್ವೆಸ್ಟರ್  ಹಬ್  ಗಳಲ್ಲಿ  ದಾಸ್ತಾನೀಕರಿಸುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ  CORRIDOR  ನಲ್ಲಿ ಬರುವ ರೈತರಿಗೆ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ, ಬೆಂಗಳೂರು ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿ ಬೆಂಗಳೂರು ನಗರ ಜಿಲ್ಲೆ ಇಲ್ಲಿ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 080-26711594 ಗೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios