Asianet Suvarna News Asianet Suvarna News

ಸಂಪುಟ ಸಭೆಯಲ್ಲಿ ಫುಲ್ ಕ್ಲಾಸ್: ರಾಜೀನಾಮೆಗೆ ಮುಂದಾದ ಸಚಿವ ರಮೇಶ್..!

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇಂದು [ಸೋಮವಾರ] ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿದ್ದು, ಸಭೆಯಲ್ಲಿ ಕುಮಾರಸ್ವಾಮಿ ಅವರು  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಿಚಿವ ರಮೇಶ್ ಜಾರಕಿಹೊಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ..

Karnataka Farmers Protest Clear The Dues Kumaraswamy To Ramesh Jarakiholi
Author
Bengaluru, First Published Nov 19, 2018, 4:18 PM IST

ಬೆಂಗಳೂರು,[ನ.19]: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇಂದು [ಸೋಮವಾರ] ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿತು. 

ಆದರೆ ಸಭೆಯ ಮಧ್ಯೆಯೇ ಪೌರಾಡಳಿತ ಸಚಿವ ಹಾಗೂ ಬೆಳಗಾವಿ ರಮೇಶ್ ಜಾರಕಿಹೊಳಿ ಎದ್ದು ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.  ಈ ಹಿಂದೆ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಳೆದ 10 ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ.

"

ಕಾಂಗ್ರೆಸ್ ಮುಖಂಡರಿಂದ ಸಚಿವ ರಮೇಶ್ ಜಾರಕಿಹೊಳಿ ಮನವೊಲಿಸುವ ಯತ್ನ

ಆದರೆ ಇವತ್ತು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದು, ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯ ಆರಂಭದಲ್ಲಿಯೇ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಸಿಎಂ ಕುಮಾರಸ್ವಾಮಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡಿದರು. 

ಕೆಲವು ಸಚಿವರೇ ಒಡೆತನ ಹೊಂದಿರೋ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಹಣವನ್ನ ಉಳಿಸಿಕೊಂಡಿವೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಚಿವ ಸ್ಥಾನದಲ್ಲಿದ್ದುಕೊಂಡು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಯಾಕೆ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಉಳಿಸಿಕೊಂಡಿದ್ದೀರಿ? ಆ ಭಾಗದ ಸಚಿವರಾಗಿ ನೀವು ಬಾಕಿ ಹಣ ಉಳಿಸಿಕೊಂಡಿದ್ದೀರಿ. 

ಬಿಜೆಪಿಯತ್ತ ವಾಲಿದರಾ ಸಚಿವ ರಮೇಶ್ ಜಾರಕಿಹೊಳಿ..?

ಹೀಗಾದರೆ ಅಲ್ಲಿನ ರೈತರ ಸಮಸ್ಯೆ ಕೇಳೋರು ಯಾರು..? ಅಂತಾ ರಮೇಶ್ ಜಾರಕಿಹೊಳಿಗೆ ಸಿಎಂ ಕುಮಾಸ್ವಾಮಿ ಪ್ರಶ್ನೆ ಮಾಡಿದರು ಎನ್ನಲಾಗಿದೆ. 

ಇದರಿಂದ ಆಕ್ರೋಶಗೊಂಡ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸಂಪುಟ ಸಭೆಯಿಂದ ಎದ್ದು ಹೊರ ನಡೆದಿದಿದ್ದು, ಸಚಿವ ಸ್ಥಾನಕ್ಕೆ ನೀಡಲು ಮುಂದಾಗಿದ್ದಾರೆ ಎನ್ನುವ ವದಂತಿ ವಿಧಾನ ಸೌಧದ ಮೊಗಸಾಲೆಯಲ್ಲಿ ಹರಿದಾಡುತ್ತಿದೆ.

Follow Us:
Download App:
  • android
  • ios