ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸುವ ಯತ್ನ ಇದೀಗ ಕಾಂಗ್ರೆಸ್ ಮುಖಂಡರಿಂದ ನಡೆದಿದೆ. ಸಚಿವ ಸಂಪುಟ ಸಭೆಗಳಿಗೆ ಹಾಜರಾಗದ ಅವರಿಗೆ ಸೋಮವಾರ ನಡೆಯುವ ಸಭೆಯಲ್ಲಾದರೂ ಪಾಲ್ಗೊಳ್ಳುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. 

ಬೆಂಗಳೂರು : ಸಚಿವ ರಮೇಶ್ ಜಾರಿಕಿಹೊಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೆಲವು ಸಲಹೆ ಸೂಚನೆಯನ್ನು ನೀಡಿದ್ದು, ಸೋಮವಾರದ ಕ್ಯಾಬಿನೆಟ್ ನಲ್ಲಿಯಾದರೂ ಹಾಜರಿರುವಂತೆ ತಿಳಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸಲು ಖಂಡ್ರೆ ಯತ್ನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದುವರೆಗೂ ಅನೇಕ ಸಂಪುಟ ಸಭೆಗಳಿಗೆ ಗೈರಾಗಿರುವ ಅವರಿಗೆ ಸೋಮವಾರದ ಸಭೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಉಸ್ತುವಾರಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಮಾಲಿಕರೂ ಆಗಿದ್ದು, ಸಮಸ್ಯೆ ಕೇಳದೇ ತಲೆ ಮರೆಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಸಚಿವರು ಬೆಂಗಳೂರಿನಲ್ಲಿಯೇ ಉಳಿಸಿದ್ದು, ಬಾಕಿ ಉಳಿಸಿಕೊಂಡ ಹಣ ಕೊಡಬೇಕಾಗುತ್ತದೆ ಎಂದು ಜಿಲ್ಲೆಯಿಂದ ದೂರ ಉಳಿದಿದ್ದಾರ ಎನ್ನುವ ಪ್ರಶ್ನೆಯೂ ಕೂಡ ಎದ್ದಿದೆ.

ಕಬ್ಬು ಬೆಳೆಗಾರರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ‌ಮಾಡಿದರೂ ಕೂಡ ಅವರು ಅತ್ತ ತೆರಳದೇ, ರೈತರ ಸಮಸ್ಯೆ ಕೇಳದೇ ಕುಳಿತಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ.