ಬೆಂಗಳೂರು, (ಡಿ.07): ಭಾರತ್ ಬಂದ್.. ಡಿಸೆಂಬರ್ 8, ಮಂಗಳವಾರ ಇಡೀ ಭಾರತ್ ಬಂದ್‌...  ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬಂದ್ ಕರೆ ನೀಡಿವೆ.

ಈ ಬಂದ್ ಕರೆಗೆ ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಟಿಆರ್‌ಎಸ್, ಎಎಪಿ ಹಾಗೂ ಎಡಪಕ್ಷಗಳು ಬೆಂಬಲ ನೀಡಿವೆ.  ದೇಶದ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ರೈತ ಕ್ರಾಂತಿ ಹೆಸರಲ್ಲಿ ಭಾರತ್ ಬಂದ್.... Left, Right and Centre

ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಅಸಂಖ್ಯಾತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ಆ ಮೂಲಕ ರಾಜ್ಯ ಬಹುತೇಕ ಸ್ತಬ್ದವಾಗಲಿದೆ. ಹಾಗಾದ್ರೆ ನಾಳೆ (ಮಂಗಳವಾರ) ಏನಿರುತ್ತೆ? ಏನಿರಲ್ಲ? ಎನ್ನುವ ಸಂಪಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

* ಓಲಾ,ಉಬರ್ ಟ್ಯಾಕ್ಸಿ ಚಾಲಕರ ಸಂಘದಿಂದ ಬೆಂಬಲ,(ಅಂತಿಮ ನಿರ್ಣಯ ಚಾಲಕರಿಗೆ ಬಿಟ್ಟಿದ್ದು)
* ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ(ಹೋಟೆಲ್ ಓಪನ್ ಇರುತ್ತೆ)
* ಬಾರ್ ಓಪನ್ ಇರುತ್ತೆ ,ಆದ್ರೆ ನೈತಿಕ ಬೆಂಬಲವಿದೆ
* ಬೀದಿ ಬದಿ ವ್ಯಾಪಾರ ಸಂಘಗಳಿಂದ ಬಂದ್ಗೆ ಸಂಪೂರ್ಣ ಬೆಂಬಲ.
* ಖಾಸಗಿ ಶಾಲೆಗಳ ಒಕ್ಕೂಟದಿಂದ ಆನ್ಲೈನ್ ಕ್ಲಾಸ್ ಸ್ಥಗಿತ ಮಾಡಿ ಬೆಂಬಲ
*SBIಬ್ಯಾಂಕ್ ಹೊರತು ಪಡಿಸಿ ಉಳಿದೆಲ್ಲಾ ಬ್ಯಾಂಕ್‌ಗಳಿಂದ ಬಂದ್‌ಗೆ ಬೆಂಬಲ
* ಮಹಿಳಾ ಸಂಘಟನೆಗಳು,ಹಾಗೂ ವಿವಿಧ ಪ್ರಗತಿಪರ ಸಂಘನೆಗಳಿಂದ ಬೆಂಬಲ
* ಆಟೋ ಚಾಲಕರಿಂದ ಬಂದ್ಗೆ ಬೆಂಬಲ(ನಿರ್ಧಾರ ಚಾಲಕರಿಗೆ ಬಿಟ್ಟಿದ್ದು)

ಏನಿರುತ್ತೆ?
ಭಾರತ್ ಬಂದ್‌ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ ಮತ್ತು ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇರುತ್ತದೆ.

ಏನಿರಲ್ಲ?
ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಭಾರತ್ ಬಂದ್‌ ಬೆಂಬಲಿಸಿರುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ ಬ್ಯಾಂಕ್ ಒಕ್ಕೂಟಗಳು ರೈತರಿಗೆ ಬೆಂಬಲ ನೀಡಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು.

ಎಂಪಿಎಂಸಿಯ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಂದ್‌ಗೆ ಬೆಂಬಲ ಕೊಟ್ಟಿದ್ದು ವ್ಯಾಪಾರ ವಹಿವಾಟು ಸ್ಥಗಿತವಾಗುವ ನಿರೀಕ್ಷೆ ಇದೆ.