ಬೆಂಗಳೂರು(ಮೇ.05): ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಗಿಂತ ಮದ್ಯ ಮಾರಾಟದ ಆರ್ಭಟವೇ ಹೆಚ್ಚಾಗಿದೆ. ಕಿಲೋಮೀಟರ್ ಗಟ್ಟಲೇ ಕ್ಯೂ, ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿ, ದಾರಿಯಲ್ಲಿ ತೂರಾಟ, ಡ್ಯಾನ್ಸ್ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇದರಲ್ಲಿ ಒರ್ವ ಮದ್ಯಪ್ರೀಯ ಬಿಲ್ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇತ್ತ ಮದ್ಯಪ್ರಿಯ ತನ್ನ ಬಿಲ್ ದೇಶದಲ್ಲಿ ಸಂಚಲನ ಮೂಡಿಸಿರುವುದನ್ನು ನೋಡಿ ಸಂಭ್ರಮಿಸಿದ್ದ. ಆದರೆ ಈತನ ಸಂಭ್ರಮ ಒಂದೇ ದಿನಕ್ಕೆ ಅಂತ್ಯಗೊಂಡಿದೆ.

"

ಅಷ್ಟಕ್ಕೂ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಮದ್ಯಪ್ರಿಯರ ಕೊಡುಗೆ!.

ಮದ್ಯಪ್ರಿಯ ಬರೋಬ್ಬರಿ  52,800 ರೂಪಾಯಿ ಮೌಲ್ಯದ ಮದ್ಯ ಖರೀದಿಸಿ ಇದರ ಬಿಲ್ ಫೋಟೋವನ್ನು ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದ. ವೈರಲ್ ಬಿಲ್ ಕರ್ನಾಟಕ ಅಬಕಾರಿ ಇಲಾಖೆ ಪೊಲೀಸರ ಕೈಗೆ ಸಿಕ್ಕಿದೆ. ತಕ್ಷಣವೇ ಅಬಕಾರಿ ಇಲಾಖೆ ಮದ್ಯ ಮಾರಾಟ ಮಾಡಿದ ಹಾಗೂ ಖರೀದಿಸಿದ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಡಿಲಿಕೆ ನಿಯಮದಲ್ಲಿ ಮದ್ಯ ಖರೀದಿಗೂ ಕೆಲ ನಿಯಮಗಳನ್ನು ವಿಧಿಸಲಾಗಿದೆ. ನಿಯಮಗಳ ಉಲ್ಲಂಘನೆ ಕಾರಣ ಪ್ರಕರಣ ದಾಖಲಾಗಿದೆ.

ತಲಾ ಒಬ್ಬರಿಗೆ ಹಾಟ್ ಡ್ರಿಂಕ್ಸ್ ಗರಿಷ್ಠ 2.8 ಲೀಟರ್, ಬಿಯರ್ ಗರಿಷ್ಠ 18 ಲೀಟರ್ ಮಾರಾಟ ಮಾಡಬಹುದು. ಆದರೆ ಬೆಂಗಳೂರಿನ ತಾವರಕೆರೆಯ ವೆನಿಲಾ ಸ್ಪಿರಿಟ್ ಝೋನ್ 13 ಲೀಟರ್ ಹಾಟ್ ಡ್ರಿಂಕ್ಸ್ ಹಾಗೂ 35 ಲೀಟರ್ ಬಿಯರ್ ಒಬ್ಬನಿಗ ನೀಡಿದೆ. ಇದು ನಿಯಮಕ್ಕೆ ವಿರುದ್ಧಾಗಿದೆ. ಹೀಗಾಗಿ ವೈನ್ ಶಾಪ್ ಮಾಲೀಕ ಹಾಗೂ ಮದ್ಯ ಖರೀದಿಸಿದ ಇಬ್ಬರೂ ಮೇಲೂ ಕೇಸ್ ದಾಖಲಾಗಿದೆ. ಇಷ್ಟೇ ಅಲ್ಲ ವೈನ್ ಶಾಪ್ ಸೀಝ್ ಮಾಡಲಾಗಿದೆ. 

ಸಾಗರದ ಬಾರ್‌ನಲ್ಲಿ ಸುಮಾರು 5 ಲಕ್ಷ ರುಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ವೈನ್ ಶಾಪ್ ಮಾಲೀಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ 8 ಮಂದಿ ಮದ್ಯ ಖರೀದಿಸಿದ್ದಾರೆ. ಆದರೆ ಬಿಲ್ ಒಂದೇ ಕಾರ್ಡಿನಲ್ಲಿ ಮಾಡಲಾಗಿದೆ ಎಂದಿದ್ದಾರೆ. ಇದೀಗ ಮದ್ಯ ಖರೀದಿಸಿದಾತನ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಇನ್ನು ಇದೇ ರೀತಿಯ ಪ್ರಕರಣವೊಂದು ಮಂಗಳೂರಿನಲ್ಲಿ ವರದಿಯಾಗಿದೆ. 59,952 ರೂಪಾಯಿ ಮದ್ಯ ಖರೀದಿಸಿದ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಕುರಿತು ತನಿಖೆ ನಡೆಯುತ್ತಿದೆ.