ಬೆಂಗಳೂರು(ಮೇ. 04) ಮೊದಲ ದಿನದ ಕಲೆಕ್ಷನ್ ಎಷ್ಟು? 45 ಕೋಟಿ! ಇದು ಯಾವ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಅಲ್ಲ. ಇದು ಮೇ. 04 ರಂದು ಮಾರಾಟವಾದ ಮದ್ಯ ವಹಿವಾಟಿನ ಲೆಕ್ಕ. 

ಅಂದಾಜು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದದ್ದು ಈ ಮಾರಾಟದ ಅಂದಾಜು ಮೌಲ್ಯ ಸುಮಾರು 45 ಕೋಟಿ ರೂಪಾಯಿ ಎಂಬುದಾಗಿ ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

ಮದ್ಯದ ನಶೆ ಏನೆಲ್ಲಾ ಮಾಡಿಸುತ್ತದೆ, ಶಿವಮೊಗ್ಗದ ವ್ಯಕ್ತಿಯ ಪ್ರಾಣ ಹಾರಿಯೋಯ್ತು!

ಲಾಕ ಡೌನ್ ಘೊಷಣೆಯಾದಾಗಿನಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು, ಸಾಮಾಜಿಕ ಅಂತರ ಕಾಯ್ದುಕೊಂಡು  ಮದ್ಯ ಮಾರಾಟ ಮಾಡಬೇಕು ಎಂದು ಹೇಳಲಾಗಿದೆ. ಅದರಂತೆ ಮಂಗಳವಾರವೂ ಮುಂದುವರಿಯಲಿದೆ. 

ಮೇ 21 ರಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಇದಾದ ಮೇಲೆ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಸುಮಾರು 42 ದಿನಗಳ ನಂತರ ಮದ್ಯಂಗಡಿ ಓಪನ್ ಆಗಿದ್ದು ಜನರು ಮುಗಿಬಿದ್ದಿದ್ದರು. ಇಡೀ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶಕ್ಕೆ ನೀಡಿದ್ದು ಜನ ಸರತಿ ಸಾಲಿನಲ್ಲಿ ನಿಂತಿದ್ದರು.