ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಅನ್ನು ಮೇ3ರ ವರಗೆ ವಿಸ್ತರಣೆ ಮಾಡಿದ ಬೆನ್ನಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಮೊದಲ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ, ಅಗತ್ಯ ವಸ್ತುಗಳ ಮಾರಾಟಗಾರರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ಕರ್ಪ್ಯೂ ಪಾಸ್ ಅನ್ನು ನೀಡಲಾಗಿತ್ತು.ಇದೀಗ ಅದೇ ಪಾಸ್‌ಗಳು ಏಪ್ರಿಲ್ 20 ರವರೆಗೂ ಮಾನ್ಯ ಮಾಡಿ ಅದೇಶ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ ನಡುವೆ ಪಾಸ್‌ಗಾಗಿ 44 ಲಕ್ಷ ಜನ ಅರ್ಜಿ!
ಮೇ.3ರ ವರೆಗೆ ಲಾಕ್ ಡೌನ್ ಅವಧಿಯನ್ನು ವಿಸ್ತರಣೆ ಮಾಡಿರುವ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್, ಕರ್ಪ್ಯೂ ಪಾಸ್ ಅವಧಿ ಏ.20ರವರೆಗೂ ಪಾಸ್ ಮುಂದವರಿಕೆ ಮಾಡಿ ಆದೇಶಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂದು (ಮಂಗಳವಾರ) ದೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೇ 2ನೇ ಹಂತದ ಲಾಕ್ ಡೌನ್ ಅನ್ನು ಮೇ.3ರ ವರೆಗೆ ವಿಸ್ತರಣೆ ಮಾಡಿದ್ದರು. ಇದರಿಂದ ಏ.14ಕ್ಕೆ ಕೊನೆಗೊಳ್ಳಬೇಕಿದ್ದ ಪಾಸ್‌ಗಳ ಅವಧಿ ಸಹ ವಿಸ್ತರಣೆಯಾಗಲಿದೆ.
