ಅನ್ಯಕೋಮಿನ ಬಗ್ಗೆ ಆ ರೀತಿ ಮಾತಾಡೋದು ತಪ್ಪು, ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಖಂಡಿಸಿದ ಡಿಸಿಎಂ
ಚಂದ್ರಶೇಖರ್ ಸ್ವಾಮೀಜಿ ಮುಸಲ್ಮಾನರ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ಜಾತಿ, ಧರ್ಮದ ವಿಚಾರದಲ್ಲಿ ಸ್ವಾಮೀಜಿ ಪ್ರವೇಶ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಬೆಂಗಳೂರು (ನ.30): ಚಂದ್ರಶೇಖರ್ ಸ್ವಾಮೀಜಿ ಮುಸಲ್ಮಾನರ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ಜಾತಿ, ಧರ್ಮದ ವಿಚಾರದಲ್ಲಿ ಸ್ವಾಮೀಜಿ ಪ್ರವೇಶ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಕೇಸ್ ದಾಖಲಾಗಿರುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ಕುರಿತಂತೆ ಈಗಾಗಲೇ ಕ್ಷಮಾಪಣೆ ಕೇಳಿದ್ದಾರೆ, ಸಂತೋಷ. ಆರ್ ಅಶೋಕ್ ಬೆಂಕಿ ಇಟ್ಟು ಬೀಡಿ ಸೇದಲು ಹೊರಟಿದ್ದಾರೆ. 'ಸ್ವಾಮೀಜಿಯನ್ನ ಮುಟ್ಟಿದ್ರೆ ಸುಮ್ನಿರಲ್ಲ' ಅಂದಿದ್ದಾರೆ. ಆದರೆ ಅಂದು ಬಾಲಬಂಗಾಧರನಾಥ ಸ್ವಾಮೀಜಿ ತಪ್ಪು ಮಾಡಿರಲಿಲ್ಲ. ಆದ್ರೆ ಇದೇ ಜನತಾ ದಳ ಸರ್ಕಾರ ಕೇಸ್ ಹಾಕಿಸಿದ್ರು. ಚಂದ್ರಪ್ಪನವರ ಕೈಯಲ್ಲಿ ಕೇಸ್ ಹಾಕಿಸಿದ್ರು.ಬೇಲ್ ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಹತ್ತಾರು ವರ್ಷ ಕೇಸ್ ನಡೀತು. ಆಗ ಅಶೋಕ್ ಎಲ್ಲಿ ಹೋಗಿದ್ದ? ಈಗ ಮಾತನಾಡ್ತಿರೋರು ಎಲ್ಲಿ ಹೋಗಿದ್ರು? ಕಾನೂನು ಎಲ್ಲರಿಗೂ ಒಂದೇ. ಇದು ದಾಖಲೆಯಲ್ಲಿದೆ ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.
ಚಂದ್ರಶೇಖರ ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ
ನಾನೇನು ಒಕ್ಕಲಿಗ ಸಮುದಾಯ ಬಳಸಿಕೊಳ್ಳಬೇಕಿಲ್ಲ. ನಾನು ಅದೇ ಸಮುದಾಯದಲ್ಲಿ ಹುಟ್ಟಿದ್ದೇನೆ. ಎಲ್ಲ ಜಾತಿ, ಧರ್ಮಕ್ಕೆ ಗೌರವ ಕೊಡಬೇಕು. ಸಂವಿಧಾನ ನಮ್ಮ ಮೂಲ ಗ್ರಂಥ. ಯಾರ ಹಕ್ಕು ಮತ್ತು ಸಮುದಾಯದ ಬಗ್ಗೆ ಮಾತನಾಡಬಾರದು ಎಂದರು.