ಚಿಕ್ಕಮಗಳೂರು ಅಲ್ಲ, ಇಡೀ ಇಂಡಿಯಾನೇ ಬಂದ್ ಮಾಡಲಿ: ಸಿಟಿ ರವಿ ಬಂಧನ ಸಮರ್ಥಿಸಿದ ಡಿಸಿಎಂ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ಬಂಧಿತರಾಗಿರುವ ಸಿಟಿ ರವಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಬಂದ್ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಇಡೀ ಇಂಡಿಯಾನೇ ಬಂದ್ ಮಾಡಲಿ ಎಂದು ತಿರುಗೇಟು ನೀಡಿದರು. ಜೀವ ಬೆದರಿಕೆ ಆರೋಪವನ್ನು ತಳ್ಳಿಹಾಕಿದ ಡಿಕೆಶಿ, ತನಿಖೆಗೆ ಸವಾಲು ಹಾಕಿದರು.

Karnataka DCM DK Shivakumar reacts about CT Ravi arrested remark on laksmi hebbalkar rav

ಮಂಡ್ಯ (ಡಿ.20): ಒಬ್ಬ ಮಹಿಳಾ ಸಚಿವೆ ಬಗ್ಗೆ ಸಿಟಿ ರವಿ ಆ ಪದ ಬಳಕೆ ಮಾಡಿದ್ದು ಸರೀನಾ ತಪ್ಪಾ? ರವಿ ನಡತೆ ಬಗ್ಗೆ ಅವರ ಪಕ್ಷದವರೇ ಹೇಳಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಕಿಡಿಕಾರಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ, ಸಿಟಿ ರವಿ ಬಂಧಿಸಿದ್ದಕ್ಕೆ ಚಿಕ್ಕಮಗಳೂರು ಬಂದ್ ಮಾಡ್ತೇವೆ ಅಂತಾ ಹೇಳ್ತಿದ್ದಾರೆ. ಸಿಟಿ ರವಿ ಏನು ಘನ ಕಾರ್ಯ ಮಾಡಿದ್ದಾನೆ ಅಂತಾ ಬಂದ್ ಮಾಡ್ತಾರೆ? ಬಂದ್ ಮಾಡಲಿ, ಚಿಕ್ಕಮಗಳೂರಷ್ಟೇ ಅಲ್ಲ, ಇಡೀ ಇಂಡಿಯಾನೇ ಬಂದ್ ಮಾಡಲಿ ಎಂದು ತಿರುಗೇಟು ನೀಡಿದರು.

'ಪಾಕಿಸ್ತಾನಕ್ಕೆ ಜೈ' ಎಂದವನ ತಕ್ಷಣ ಬಂಧಿಸದ ಸರ್ಕಾರ ಸಿಟಿ ರವಿಯನ್ನ ತರಾತುರಿಯಲ್ಲಿ ಬಂಧಿಸಿದೆ: ಸಂಸದ ಕೋಟ ಕಿಡಿ

ಇನ್ನು ಸಿಟಿ ರವಿಗೆ ಡಿಕೆ ಶಿವಕುಮಾರ್‌ರಿಂದ ಜೀವ ಬೆದರಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಜೀವ ಬೆದರಿಕೆ ಹಾಕೋಕೆ ನಾನು ಅಲ್ಲಿ ಇರಲೇ ಇಲ್ಲ. ಅಸೆಂಬ್ಲಿಯಲ್ಲಿ ಸಿಎಂ ಕರೆಸಿದ್ರು ಅಂತಾ ನಾನು ಇಲ್ಲಿಗೆ ಬಂದೆ. ಬೇಕಿದ್ದರೆ ಜೀವ ಬೆದರಿಕೆ ಹಾಕಿದ್ರೆ ತನಿಖೆ ಮಾಡಲಿ. ನಾನೇನು ಕಾನೂನಿನ ಮುಂದೆ ದೊಡ್ಡವನಲ್ಲ. ಸಿಟಿ ರವಿ ನಾನು ಜೀವ ಬೆದರಿಕೆ ಹಾಕಿದ್ರೆ ತನಿಖೆ ಮಾಡಿಸಲಿ. ರಾಹುಲ್ ಗಾಂಧಿ ಅವರಿಗೆ ಡ್ರಗ್ಗಿಸ್ಟ್ ಅಂತಾ ಹೇಳಿದ್ದನ್ನ ರಾಷ್ಟ್ರೀಯ ಚಾನೆಲ್‌ನಲ್ಲಿ ನೋಡಿದ್ದೀನಿ. ನಾನು ಆ ರೀತಿ ಹೇಳಿ ತಪ್ಪು ಮಾಡಿದ್ದೇನೆ ಎಂದು ಸಿಟಿ ರವಿ ಒಪ್ಪಿಕೊಳ್ಳಲಿ. ಒಂದು ಸುಳ್ಳು ಮುಚ್ಚಿಕೊಳ್ಳೋಕೆ ಪದೇಪದೆ ಯಾಕೆ ಸಿಕ್ಕಿಸಿಕೊಳ್ತೀರಿ ಎಂದು ಸಿಟಿ ರವಿ ವಿರುದ್ಧ ಹರಿಹಾಯ್ದರು.

ಸಿಟಿ ರವಿಗೆ 'ಕೊಲೆಗಡುಕ' ಎಂದಿದ್ದು ಸಂವಿಧಾನಿಕ ಪದವೇ? ಪೊಲೀಸರು ಸಚಿವೆಯನ್ನ ಬಂಧಿಸುವ ಧೈರ್ಯ ತೋರಲಿ; ರೆಡ್ಡಿ ಗರಂ

ಇನ್ನು ಸಭಾಪತಿ ಬಸವರಾಜ್ ಹೊರಟ್ಟಿ, 'ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದ್ಕೆ ಸಾಕ್ಷ್ಯಗಳಿಲ್ಲ' ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಹಾಗಿದ್ರೆ ಮಾಧ್ಯಮಗಳಲ್ಲಿ ಬರುತ್ತಿರೋದು ಸುಳ್ಳಾ? ನಾನು, ಜನ ಹೇಳೋದು, ರಾಜಕಾರಣಿಗಳು ಹೇಳೋದು ಅಲ್ಲ ಮಾಧ್ಯಮಗಳಲ್ಲೇ ಆ ಕುರಿತು ಸುದ್ದಿ ಬರ್ತಿರೋದು ಏನು? ಹಾಗಿದ್ರೆ ಮಾಧ್ಯಮಗಳ ಮೇಲೆ ಅವರು ಕೇಸ್ ಹಾಕಲಿ ಎಂದು ಸಭಾಪತಿಗೆ ಸವಾಲು ಹಾಕಿದರು.

Latest Videos
Follow Us:
Download App:
  • android
  • ios