Asianet Suvarna News Asianet Suvarna News

ನಾಳೆ ನಾಡಿದ್ದು ಡಿಕೆ ಶಿವಕುಮಾರ ನಗರದಲ್ಲಿ ನೈಟ್ ರೌಂಡ್; ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಡವಡವ!

ನನ್ನ 40 ವರ್ಷದ ರಾಜಕೀಯ ಅನುಭವದಲ್ಲಿ ನಾನು ಕೊಟ್ಟ ಆದೇಶದಂತೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯದಲ್ಲಿ ಕಾರ್ಪೋರೇಷನ್ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

karnataka dcm dk shivakumar reacts about bjp mla muniratna case at bengaluru rav
Author
First Published Sep 21, 2024, 2:30 PM IST | Last Updated Sep 21, 2024, 2:55 PM IST

ಬೆಂಗಳೂರು (ಸೆ.21): ನನ್ನ 40 ವರ್ಷದ ರಾಜಕೀಯ ಅನುಭವದಲ್ಲಿ ನಾನು ಕೊಟ್ಟ ಆದೇಶದಂತೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯದಲ್ಲಿ ಕಾರ್ಪೋರೇಷನ್ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಎಲ್ಲ ಏರಿಯಾಗಳಲ್ಲಿರುವ ಗುಂಡಿಗಳ ಲೆಕ್ಕ ನನ್ನ ಬಳಿಯಿದೆ. ನಾನು ನಾಳೆ ನಾಡಿದ್ದು ನೈಟ್ ರೌಂಡ್ ಹೋಗಿ ಚೆಕ್ ಮಾಡುತ್ತೇನೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಯಾವ ರೀತಿ ನಡೆದಿದೆ. ಕೆಲಸದ ಗುಣಮಟ್ಟ ಹೇಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಒಂದು ವೇಳೆ ಸರಿಯಾಗಿ ಗುಂಡಿ ಮುಚ್ಚುವ ಕಾರ್ಯ ಆಗದಿದ್ದಲ್ಲಿ ಅಂತಹ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತೇನೆ. ಮಳೆ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿತ್ತು. ಅಷ್ಟೋ ಇಷ್ಟೋ ಮಾಡಿದ್ದಾರೆ ಅಂತ ನೀವು ವರದಿ ಮಾಡಿದ್ದೀರಾ. ನಮಗೆ ಬದ್ದತೆ ಇದೆ, ನಮ್ಮ ಕರ್ತವ್ಯ ಇದು. ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತೇವೆ ಎಂದರು.

ನಾನು ದೆಹಲಿ ಸೇರಿ ದೇಶದ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅವುಗಳ ಫೋಟೊ ಹಾಕಿದ್ರೆ ಅವಮಾನ ಆಗುತ್ತೆ. ಅದಕ್ಕಿಂತ ನಮ್ಮವರನ್ನ ಪರಿವರ್ತನೆ ಮಾಡಬೇಕು ಅಂತ ಪರಿವರ್ತನೆ ಮಾಡಿದ್ದೇನೆ. ಯಶಸ್ಸು ಆಗುತ್ತಿದ್ದೇವೆ ಎಂದರು.

ನಾಗಮಂಗಲ ಕೋಮುಗಲಭೆ ಪ್ರಕರಣ: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಬ್ರೈನ್‌ ಸ್ಟ್ರೋಕ್‌ನಿಂದ ಸಾವು

ಇನ್ನು ಮುನಿರತ್ನ ಕೇಸ್‌ನಲ್ಲಿ ಎಸ್‌ಐಟಿ ರಚನೆಗೆ ಕಾಂಗ್ರೆಸ್ ನಾಯಕರ ಒತ್ತಡ ಹೇರುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, ಮುನಿರತ್ನ ಕೇಸ್ ಬಗ್ಗೆ  ಬಗ್ಗೆ ನನಗೆ ಅಷ್ಟು ಮಾಹಿತಿ ಸಿಕ್ಕಿಲ್ಲ. ಆದರೆ ಅಶೋಕ್ ಪಾಪ ಅವರ ವಿರುದ್ದವೂ ನಡೆದ ಷಡ್ಯಂತ್ರದ ಬಗ್ಗೆ ದಿಗ್ಬ್ರಮೆ ಆಗಿದೆ. ಪ್ರಪಂಚದಲ್ಲಿ ಈ ರೀತಿ ಸಂಚು ನಾವು ಕೇಳಿರಲಿಲ್ಲ. ಅಶೋಕ್ ಪ್ರಾರಂಭದ ಮಾತು ನಾವು ಕೇಳಿದ್ದೇವೆ. ಎರಡನೇ ಮಾತು ನಾನು ಕೇಳಿಲ್ಲ. ಅಶೋಕಣ್ಣ, ಸಿಟಿ ರವಿ ಅಣ್ಣ, ವಿಜಯೇಂದ್ರಣ್ಣ ಕುಮಾರಸ್ವಾಮಿ, ಡಾ ಮಂಜುನಾಥ್ ಮೊದಲು ಇದರ ಬಗ್ಗೆ ಮಾತನಾಡಲಿ ಸತ್ಯಾಸತ್ಯತೆ ಏನಿದೆ ಅಂತಾ ಅವರು ಪರಿಶೀಲನೆ ಮಾಡಿಕೊಂಡು ಅಭಿಪ್ರಾಯ ತಿಳಿಸಲಿ ಈ ಕೇಸ್‌ನಲ್ಲಿ ನಮಗಿಂತ ಬಿಜೆಪಿಯವರೇ ಉತ್ತರ ಕೊಡಬೇಕು ಎಂದರು. 

ಬೆಂಗಳೂರಿನಲ್ಲಿ ಇನ್ನೂ 2 ಸಾವಿರ ರಸ್ತೆ ಗುಂಡಿ ದುರಸ್ತಿ ಬಾಕಿ: ತುಷಾರ್‌ ಗಿರಿನಾಥ್‌

ಮುನಿರತ್ನ ಕೇಸ್ ಸೇಡಿನ ರಾಜಕೀಯ ಎಂದು ವಿಜಯೇಂದ್ರ, ಅಶ್ವಥ್ ನಾರಾಯಣ ಹೇಳಿಕೆಯನ್ನು ಗಮನಿಸಿದ್ದೇನೆ ಅವರು ನನ್ನನ್ನು ನೆನಪಿಸಿಕೊಳ್ಳುತ್ತಿರಲಿ. ಇಷ್ಟು ಆದರು ಬಿಜೆಪಿ ಸಮರ್ಥನೆಗೆ ನಿಂತಿರೋದು ಜನರಿಗೆ ಅರ್ಥ ಆಗಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು. 

Latest Videos
Follow Us:
Download App:
  • android
  • ios