ಚನ್ನಪಟ್ಟಣ ಗೆಲ್ಲೋಕೆ ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್? 'ಮುಂದಿನದು ಹೊಸ ಅಧ್ಯಾಯ' ಎಂದ ಡಿಕೆ ಶಿವಕುಮಾರ್!
ಇಂದು ಅಧಿಕಾರಿಗಳ ಸಭೆ ಮಾಡಿದ್ದೇನೆ. ಚನ್ನಪಟ್ಟಣ ನೋಡಿದ್ರೆ ಒಂದು ದಿನ ಸಭೆ ಮಾಡಿದ್ರೆ ಸಾಲದು. ಯಾಕೆಂದರೆ ಇಷ್ಟು ದಿನ ಒಂದೂ ಕೆಡಿಪಿ ಸಭೆ ಆಗಿಲ್ಲ ಇನ್ಮುಂದೆ ಪ್ರತಿ ಪಂಚಾಯ್ತಿಗೂ ಭೇಟಿ ನೀಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.
ಚನ್ನಪಟ್ಟಣ (ಜೂ.19): ಇಂದು ಅಧಿಕಾರಿಗಳ ಸಭೆ ಮಾಡಿದ್ದೇನೆ. ಚನ್ನಪಟ್ಟಣ ನೋಡಿದ್ರೆ ಒಂದು ದಿನ ಸಭೆ ಮಾಡಿದ್ರೆ ಸಾಲದು. ಯಾಕೆಂದರೆ ಇಷ್ಟು ದಿನ ಒಂದೂ ಕೆಡಿಪಿ ಸಭೆ ಆಗಿಲ್ಲ ಇನ್ಮುಂದೆ ಪ್ರತಿ ಪಂಚಾಯ್ತಿಗೂ ಭೇಟಿ ನೀಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.
ಇಂದು ಚನ್ನಪಟ್ಟಣದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದದ ಡಿಸಿಎಂ, ಚನ್ನಪಟ್ಟಣದಲ್ಲಿ ಇಲ್ಲಿಯವರೆಗೆ ಕೆಡಿಪಿ ಸಭೆಯೇ ಆಗಿಲ್ಲ. ಆಶ್ರಯ ಯೋಜನೆಯಲ್ಲಿ ಬಡವರಿಗೇನೆ ಮನೆ ಹಂಚಿಕೆಯಾಗಿಲ್ಲ. ಇನ್ಮುಂದೆ ಒಂದು ದಿನಕ್ಕೆ ಮೂರು ಪಂಚಾಯ್ತಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆ. ಕ್ಷೇತ್ರದ ಪ್ರತಿ ಮನೆ ಬಾಗಿಲಿಗೂ ಸರ್ಕಾರದ ಯೋಜನೆ ತಲುಪಿಸಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಎಲ್ಲರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದರು.
ಸಿಎಂ ವಿರುದ್ಧ 'ನಾಲಾಯಕ್' ಪದ ಬಳಕೆ ಸಮರ್ಥಿಸಿಕೊಂಡ ಶಾಸಕ ಜನಾರ್ದನ ರೆಡ್ಡಿ
ಹಾಗಾದರೆ ಕ್ಷೇತ್ರದಲ್ಲಿ ಎಚ್ಡಿಕೆ ಅಭಿವೃದ್ಧಿ ಮಾಡಿರಲಿಲ್ಲ? ಎಂಬ ಪ್ರಶ್ನೆಗೆ ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡೊಲ್ಲ. ಹಿಂದಿನದ್ದು ಮುಗಿದ ಅಧ್ಯಾಯ. ಈಗ ಹೊಸ ಅಧ್ಯಾಯ ಎನ್ನುವ ಮೂಲಕ ಚನ್ನಪಟ್ಟಣದಿಂದ ಸ್ಪರ್ಧಿಸುವ ಕುರಿತು ಡಿಕೆ ಶಿವಕುಮಾರ ಸುಳಿವು ನೀಡಿದರು.
ಯಾರು ಸ್ಪರ್ಧಿಸಬೇಕು ಎಂಬುದು ಅದು ಜನರ ತೀರ್ಪು, ಪಕ್ಷದ ತೀರ್ಪು. ಮುಂದೆ ಪಕ್ಷ ಹಾಗೂ ಕ್ಷೇತ್ರದ ಜನ ಯಾವ ತೀರ್ಮಾನ ಮಾಡ್ತಾರೋ ಅದನ್ನ ಪಾಲಿಸುತ್ತೇನೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಆ ಬಗ್ಗೆ ಯಾರಿಗೂ ಅನುಮಾನ ಬೇಡ. ಈ ಕ್ಷೇತ್ರದ ಋಣ ನಮ್ಮ ಮೇಲಿದೆ ಅದನ್ನ ತೀರಿಸುವ ಕೆಲಸ ಮಾಡುತ್ತೇವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆಪ್ತ ಗೆಳೆಯ ದರ್ಶನ್‌ನಿಂದ ಅಂತರ ಕಾಯ್ದುಕೊಂಡ ನಟ ಲವ್ಲಿಸ್ಟಾರ್ ಪ್ರೇಮ್?
ಡಿಕೆ ಬ್ರದರ್ಸ್ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿದೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ದೃಷ್ಟಿ ಇಡೀ ಕರ್ನಾಟಕದ ಮೇಲೆ ಇದೆ. ರಾಜ್ಯದ ಜನರ ಮೇಲೆ, ಅಭಿವೃದ್ಧಿ ಮೇಲೆ ನನ್ನ ದೃಷ್ಟಿಯಿದೆ. ಪಾಪ ಹೆಚ್ಡಿಕೆ ಖುಷಿಗೆ ಒಂದಷ್ಟು ಒಳ್ಳೆ ಮಾತು ಹೇಳಿದ್ದಾರೆ, ಮಾತಾಡಲಿ ಎಂದ ಡಿಕೆ ಶಿವಕುಮಾರ್.