ಚೇತರಿಕೆ ಹಾದಿಗೆ ಕರ್ನಾಟಕ, 44473 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿಕೆ
* ಕರ್ನಾಟಕದಲ್ಲಿ ಕೊರೋನಾ ಸಂಖ್ಯೆ ಗಣನೀಯ ಇಳಿಕೆ
* ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿಕೆ, ಬೆಂಗಳೂರಿನಲ್ಲಿ ಶೇ. 7.5ಕ್ಕೆ
* ಸೋಂಕಿಂಗಿಂತ ಎರಡೂವರೆ ಪಟ್ಟು ಜನ ಡಿಸ್ಚಾರ್ಜ್
ಬೆಂಗಳೂರು(ಮೇ 31) ಕೊರೋನಾ ರುದ್ರತಾಂಡವ, ರುದ್ರನರ್ತನ, ಮಹಾಮಾರಿ, ಬಲಿ ಪಡೆಯುತ್ತಿರುವ ಕೊರೋನಾ ಈ ಎಲ್ಲ ಶಬ್ದಗಳಿಂದ ಹೊರಬರುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ. ಪಾಸಿವಿಟಿವಿ ದರ ಇಳಿಕೆಯಾಗಿರುವುದರ ಜತೆಗೆ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.
ಕಳೆದ ಒಂದು ದಿನದ ಅವಧಿಯಲ್ಲಿ 44,473 ರಿಕವರಿಯಾಗಿದ್ದಾರೆ. ಬೆಂಗಳೂರಿನಲ್ಲಿ 20,332 ಜನರು ಸೋಂಕಿನಿಂದ ಬಿಡುಗಡೆ ಕಂಡಿದ್ದಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ರಿಕವರಿ ಮಾಹಿತಿ ನೀಡಿದ್ದಾರೆ.
ಲಸಿಕೆಗಾಗಿ ಗ್ಲೋಬಲ್ ಟೆಂಡರ್ ಕೈಬಿಟ್ಟ ಸರ್ಕಾರ
ಒಟ್ಟು 1,22,329 ಟೆಸ್ಟ್ ಮಾಡಲಾಗಿದ್ದು ಕಳೆದ ಒಂದು ದಿನದಲ್ಲಿ 16,604 ಹೊಸ ಪ್ರಕರಣ ಕಂಡುಬಂದಿದೆ. ಕರ್ನಾಟಕದ ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ 53,061 ಟೆಸ್ಟ್ ಮಾಡಲಾಗಿದ್ದು 3,992 ಹೊಸ ಪ್ರಕರಣಗಳು ಕಂಡುಬಂದಿವೆ. ಬೆಂಗಳೂರಿನ ಪಾಸಿಟಿವಿಟಿ ದರ ಶೇ. 7.5ಕ್ಕೆ ಇಳಿದಿದೆ. 411 ಜನ ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-194, ಬಳ್ಳಾರಿ-437, ಬೆಳಗಾವಿ-910, ಬೆಂಗಳೂರು ಗ್ರಾಮಾಂತರ-383, ಬೆಂಗಳೂರು ನಗರ-3992, ಬೀದರ್-17, ಚಾಮರಾಜನಗರ-317, ಚಿಕ್ಕಬಳ್ಳಾಪುರ-415, ಚಿಕ್ಕಮಗಳೂರು-340, ಚಿತ್ರದುರ್ಗ-731, ದಕ್ಷಿಣ ಕನ್ನಡ -651, ದಾವಣಗೆರೆ-360, ಧಾರವಾಡ-291, ಗದಗ-240, ಹಾಸನ-1162, ಹಾವೇರಿ-134, ಕಲಬುರಗಿ-93, ಕೊಡಗು-193, ಕೋಲಾರ-465, ಕೊಪ್ಪಳ-249, ಮಂಡ್ಯ-753, ಮೈಸೂರು-1171, ರಾಯಚೂರು-192, ರಾಮನಗರ-90, ಶಿವಮೊಗ್ಗ-589, ತುಮಕೂರು-806, ಉಡುಪಿ- 519, ಉತ್ತರ ಕನ್ನಡ-641, ವಿಜಯಪುರ-185, ಯಾದಗಿರಿ-84.
"