ಬೆಂಗಳೂರು(ಮೇ.11): ಕೊರೋನಾ ವೈರಸ್ ವಕ್ಕರಿಸಿದ ಮೇಲೆ  ಚೀನಾಗಿಂತ ಇತರ ದೇಶಗಳು ಹೆಚ್ಚು ನಲುಗಿದೆ. ಚೀನಾದಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದೆ. ಆದರೆ ಇತರ ದೇಶಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಚೀನಾ ಒಂದೇ ಉಸಿರಿನಲ್ಲಿ ಎಲ್ಲರನ್ನೂ ಹಿಂದಿಕ್ಕ ಮೇಲೆರುವ ಸೂಚನೆ ನೀಡಿತ್ತು. ಆದರೆ ಇದೀಗ ಚೀನಾದಿಂದ ಹಲವು ಬಹುರಾಷ್ಟ್ರೀಯ ಕಂಪನಿಗಳ ಸ್ಥಳಾಂತರಕ್ಕೆ ಮುಂದಾಗಿದೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಉದ್ಯೋಗಿಗಳ ಕೊರತೆ, ಲಾಕ್‌ಡೌನ್ ಸೇರಿದಂತೆ ಹಲವು ನಿಯಮಗಳಿಂದ ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಇದೀಗ ಭಾರತ ಸೇರಿದಂತೆ ಏಷ್ಯಾದತ್ತ ಮುಖಮಾಡಿದೆ. ಈ ರೀತಿ ಚೀನಾದಿಂದ ಹೊರಬರಲು ನಿರ್ಧರಿಸಿರುವ ಕಂಪನಿಗಳನ್ನು ಸೆಳೆಯಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ವಿಶೇಷ ಇನ್ವೆಸ್ಟ್‌ಮೆಂಟ್ ಟಾಸ್ಕ್ ಫೋರ್ಸ್ ತಂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೇ 17ಕ್ಕೆ ಲಾಕ್‌ಡೌನ್ ಮುಗಿದ ಬಳಿಕ ಮೋದಿ ಮಾಸ್ಟರ್ ಪ್ಲಾನ್ ಏನು..?

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ ಸ್ಪೆಷಲ್ ಇನ್ವೆಸ್ಟ್ ಮೆಂಟ್ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ತಂಡ, ಚೀನಾದಿಂದ ಹೊರಬರಲು ನಿರ್ಧರಿಸುವ ಕಂಪನಿಗಳ ಜೊತೆ ಮಾತುಕತೆ ನಡೆಸಲಿದೆ. ಇಷ್ಟೇ ಅಲ್ಲ ಕಂಪನಿಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಿದೆ. 

ರಾಜ್ಯದ ವಿವಿಧೆಡೆ ಹೂಡಿಕೆ ಮಾಡಲು ಚೀನಾ ಕಂಪನಿಗಳಿಗೆ ಅವಕಾಶ ನೀಡುವ  ಟಾಸ್ಕ್ ಪೋರ್ಸ್ ತಂಡ ತೀರ್ಮಾನ ಮಾಡಲಿದೆ. ವಿಶೇಷ ಟಾಸ್ಕ್ ಫೋರ್ಸ್ ತಂಡ ಗರಿಷ್ಠ ಕಂಪನಿಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಈ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಬಹುದೊಡ್ಡ ಪ್ಲಾನ್ ಮಾಡಿದೆ.