ಕಾವೇರಿ ನೀರು ತಮಿಳುನಾಡು ಹಕ್ಕಿನಂತಾಗಿದೆ; ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದ್ಯಾ? ಆರ್. ಅಶೋಕ್ ಕಿಡಿ

ಕರ್ನಾಟಕ ಕಾವೇರಿ ನೀಡು ತಮಿಳುನಾಡಿನ ಹಕ್ಕು ಎನ್ನುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆಯಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

Karnataka Congress govt is dead it is made Cauvery water right of Tamil Nadu Ashok scolding sat

ಬೆಂಗಳೂರು (ಮಾ.23): ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನೀರಿಲ್ಲ ಅಂತಾರೆ. ಆದರೆ, ಇವರು ಕರ್ನಾಟಕದ ಕಾವೇರಿ ನೀರು ತಮಿಳುನಾಡು ಹಕ್ಕು ಎನ್ನುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದ್ಯಾ? ಒಬ್ಬರು ಕಾಂಗ್ರೆಸ್ ನಾಯಕರು ಒಂದು ಪ್ರತಿಕ್ರಿಯೆ ಇಲ್ಲ ಎಂದು ಆರ್. ಅಶೋಕ್ ಕಿಡಿಕಾರಿದರು.

ರಾಜ್ಯ ಬಿಜೆಪಿ ಮೀಡಿಯಾ ಸೆಂಟರ್ ಉದ್ಘಾಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆಯಾ? ಕರ್ನಾಟಕ ಕಾವೇರಿ ನೀರು ತಮಿಳುನಾಡಿನ ಹಕ್ಕು ಎನ್ನುವಂತೆ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಜೋರು ಮಳೆ ಪ್ರವಾಹ ಉಂಟಾಗಿತ್ತು. ಮನೆ ಒಳಗೆ ನೀರು ಬರ್ತಾ ಇತ್ತು. ಈಗ ಸಿದ್ದರಾಮಯ್ಯ ಕಾಲಿಟ್ಟ ಮೇಲೆ ರಾಜ್ಯಾದ್ಯಂದ ಮಲೆಯಿಲ್ಲದೇ ಬರ ಆವರಿಸಿದೆ. ಮನೆ ಹೊರಗೂ ನೀರಿಲ್ಲ, ಮನೆ ಒಳಗೂ ನೀರಿ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ಕ್ಷೇತ್ರ ಅಧಿಕೃತವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಿಜೆಪಿ; ದೊಡ್ಡಗೌಡ್ರಿಗೆ ಗುನ್ನಾ ಇಟ್ಟ ಪ್ರೀತಂಗೌಡರ ಶಿಷ್ಯ!

ಕಳೆದ ಬಾರಿ ನಡೆದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾವು 3 ಗೆದ್ದು ಸೆಮಿಫೈನಲ್ಸ್ ಗೆದ್ದಿದ್ದೇವೆ. ನಾವು ಫೈನಲ್ ರೀಚ್ ಆಗಿದ್ದೇವೆ. ನಮಗೆ ಎದುರಾಳಿ ಯಾರು ಗೊತ್ತಿಲ್ಲ. ನಮ್ಮ ಕ್ಯಾಫ್ಟನ್ ಮೋದಿ ಆಗಿದ್ದಾರೆ. ಇಂಡಿಯಾ ಒಕ್ಕೂಟದ ಕ್ಯಾಫ್ಟನ್ ಯಾರು ಗೊತ್ತಿಲ್ಲ. ನಿತೀಶ್ ಕುಮಾರ್ ಕೂಡ ನಮ್ಮ ಜೊತೆ ಬಂದಿದ್ದಾರೆ. ಇನ್ನೂ ಯಾರೆಲ್ಲ ಬರ್ತಾರೆ ಗೊತ್ತಿಲ್ಲ. ಅವರ ಕ್ಯಾಫ್ಟನ್ ಯಾರು ಎಂದು ಗೊತ್ತಾಗೊ ಮೊದಲೇ ಮ್ಯಾಚ್ ಮುಗಿದು ಹೋಗತ್ತದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಹತ್ತು ವರ್ಷಗಳ ಬಳಿಕವೂ ಮೋದಿ ಹೆಸರು ಮತ್ತಷ್ಟು ಎತ್ತರಕ್ಕೆ ಹೋಗಿದೆ. ಮೋದಿ ಮತ್ತೊಮ್ಮೆ ಅಭಿಯಾನ ದೇಶಾದ್ಯಂತ ಶುರುವಾಗಿದೆ. ರಾಮ ಮಂದಿರ ಮೋದಿ ನೇತೃತ್ವದಲ್ಲಿ ಆಗಿದೆ. ಆರ್ಟಿಕಲ್ 370 ರದ್ದು ಮಾಡಿದೆ. ತ್ರಿಬಲ್ ತಲಾಕ್ ಬ್ಯಾನ್ ಮಾಡಿದ್ದಾರೆ. ದಕ್ಷಿಣ ಭಾರತಕ್ಕೆ ಕರ್ನಾಟಕ ಹೆಬ್ಬಾಗಿಲು ಆಗಿದೆ. ಆದರೆ, ಇಲ್ಲಿನ ಸರ್ಕಾರ ನಿಷ್ಕ್ರಿಯವಾಗಿದೆ. ಈಗ ಕುಡಿಯೋಕೆ ನೀರು ಇಲ್ಲ ಎಂದು ಸಿಎಂ ಹೇಳ್ತಾರೆ. ಆಗ ಯಾಕೆ ನೀರು ಬಿಟ್ಟಿದ್ದೀರಿ? ರಾಜ್ಯ ಕಾಂಗ್ರೆಸ್ ಸ್ಥಿತಿ ಎಲ್ಲಿಗೆ ಬಂದಿದೆ. ಸಚಿವರನ್ನು ಕಣಕ್ಕೆ ಇಳಿಸ್ತೇವೆ ಎಂದು ಹೇಳಿದ್ದರು. ಆದ್ರೆ ಹೈಕಮಾಂಡ್ ಹೇಳಿದರು ಒಬ್ಬ ಸಚಿವನು ಸ್ಪರ್ಧೆ ಮಾಡಿಲ್ಲ. ಕಾರಣ ಅವರಿಗೆ ಗೊತ್ತಿದೆ. ತಾವು ಗೆಲ್ಲೋದಿಲ್ಲ ಎಂದು. ಹೀಗಾಗಿ ನಾವು ಕೊಚ್ಚಿ ಹೋಗ್ತೇವೆ ಎಂದು ಸ್ಪರ್ಧೆ ಮಾಡುತ್ತಿಲ್ಲ ಎಂದರು.

ಕುಟುಂಬ ರಾಜಕಾರಣದ ಬಗ್ಗೆ ಸ್ಪಷ್ಟನೆ ನೀಡ್ತೀನಿ. ನಾನು ಕುಟುಂಬ ಬೆಳೆಸಲು ಬಂದವನಲ್ಲ. ಪಕ್ಷ ಬೆಳೆಸಲು ನೇಮಕ ಆದವನಾಗಿದ್ದೇನೆ. ನನಗೆ ಯಾವುದೇ ಮುಜುಗರ ಇಲ್ಲ. ನಾನು ಅನೇಕರ ಹೇಳಿಕೆ ನೋಡಿದ್ದೇನೆ. ಹಿಂದೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೆನು. ಆಗ ಹೈಕಮಾಂಡ್ ಸ್ಪರ್ಧೆ ಮಾಡಲು ಒಪ್ಪಲಿಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ವಿಧಾನಪರಿಷತ್ ಸದಸ್ಯ ಮಾಡಲು ಕೋರ್ ಕಮಿಟಿ ತೀರ್ಮಾನ ಮಾಡಿತ್ತು. ಆದರೆ, ಅದಕ್ಕೂ ಹೈಕಮಾಂಡ್ ಒಪ್ಪಲಿಲ್ಲ. ಪಕ್ಷದ ತೀರ್ಮಾನ ಅಂತ ನಾನೂ ಒಪ್ಪಿಕೊಂಡೆ. ನಮ್ಮ‌ ರಾಷ್ಟ್ರೀಯ ಅಧ್ಯಕ್ಷರು ವಿಜಯೇಂದ್ರ ಆಯ್ಕೆ ಯಾಕೆ ಅಂತ‌ ತಿಳಿಸಿದ್ದಾರೆ. ಬಹಳ ಸ್ಪಷ್ಟವಾಗಿ ಹೇಳ್ತೀನಿ ನಮ್ಮದು ಕುಟುಂಬ ರಾಜಕಾರಣ ಇಲ್ಲ. ನನಗೆ ಹೇಳಲು ಸಂಕೋಚವೂ ಇಲ್ಲ ಎಂದು ಹೇಳಿದರು.

Lok Sabha Election 2024: ರಾಜಕೀಯ ವಿರೋಧಿಗಳ ಬೇಟೆಯಾಡಲು ಡಿಕೆಶಿ ರಣತಂತ್ರ

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಉತ್ತರ ನೀಡಬೇಕು. ನಾವು ನಮ್ಮ ನಿಲುವು ಮುಖ್ಯ ಅಲ್ಲ‌. ಕಾಂಗ್ರೆಸ್ ಉತ್ತರ ಕೊಡಬೇಕು. ನಮ್ಮ ನಿಲುವು ಸ್ಪಷ್ಟ. ರಾಜ್ಯದ ಹಿತಾಸಕ್ತಿ ಬಲಿ ಕೊಡಲ್ಲ. ನಮ್ಮಲ್ಲಿ ಇರುವ ಗೊಂದಲ ಬಗೆ ಹರೆದಿದೆ. ಪಕ್ಷದ ಭವಿಷ್ಯ ನಿರ್ಮಾಣಕ್ಕೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿದೆ‌. ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಇದಕ್ಕೆ‌ ಮೋದಿ ಅವರ ಜನಪ್ರಿಯತೆ ಕಾರಣ ಎಂದು ವಿಜಯೇಂದ್ರ ಹೇಳಿದರು.

Latest Videos
Follow Us:
Download App:
  • android
  • ios