ಬೆಂಗಳೂರು, [ಜ.19]: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ.

ರಾಜ್ಯ ಸರ್ಕಾರದಿಂದ 5 ಐಎಎಸ್‌ ಅಧಿಕಾರಿಗಳ ವರ್ಗ

ಇಂದು [ಶನಿವಾರ] ಬರೊಬ್ಬರಿ  12 ಐಎಎಸ್​ ಅಧಿಕಾರಿಗಳನ್ನ ರಾಜ್ಯ ಸರ್ಕಾರ ದಿಢೀರ್​​​ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಸರ್ಕಾರದ ಕಾರ್ಯದರ್ಶಿ ಕುಮಟಾ ಪ್ರಕಾಶ್ ​​ಆದೇಶ ಹೊರಡಿಸಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳು:

* ಎಂ.ಕೆ.ಅಯ್ಯಪ್ಪ- ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ
* ಜಿ.ಎನ್.ಶಿವಮೂರ್ತಿ -ಆಯುಕ್ತ, ಕರ್ನಾಟಕ ಹೌಸಿಂಗ್ ಬೋರ್ಡ್​, ಬೆಂಗಳೂರು
* ಕೆ.ಜಿ.ಶಾಂತರಾಮ್ -ಉಪ ಆಯುಕ್ತ, ಬಾಗಲಕೋಟೆ ಜಿಲ್ಲೆ
* ಆರ್.ರಾಮಚಂದ್ರನ್ -ಸಿಇಒ, ಬೆಳಗಾವಿ ಜಿಲ್ಲಾ ಪಂಚಾಯತ್
* ಕೆ.ವಿ.ರಾಜೇಂದ್ರ – ಸಿಇಒ, ಬಳ್ಳಾರಿ ಜಿಲ್ಲಾ ಪಂಚಾಯತ್
* ವೆಂಕಟ್ ರಾಜ್ -ಸಿಇಒ, ಕೊಪ್ಪಳ ಜಿಲ್ಲಾ ಪಂಚಾಯತ್
* ಫೌಜೀಯಾ ತರಣಂ -ಹಿರಿಯ ಸಹಾಯಕ ಆಯುಕ್ತ, ಕೊಳ್ಳೇಗಾಲ ಉಪವಿಭಾಗ, ಚಾಮರಾಜನಗರ
* ಲಕ್ಷ್ಮೀಕಾಂತ್ ರೆಡ್ಡಿ.ಜಿ -ಹಿರಿಯ ಸಹಾಯಕ ಆಯುಕ್ತ, ಸಕಲೇಶಪುರ ಉಪವಿಭಾಗ, ಹಾಸನ
 * ನಿತೀಶ್​​. ಕೆ -ಹಿರಿಯ ಸಹಾಯಕ ಆಯುಕ್ತ, ಹುಣಸೂರು ಉಪವಿಭಾಗ, ಮೈಸೂರು
 * ಕೆ.ಎಂ.ಜಾನಕಿ -ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ರಾಜ್ಯ ಬಯೋ-ಎನರ್ಜಿ ಅಭಿವೃದ್ಧಿ ಮಂಡಳಿ, ಬೆಂಗಳೂರು
* ಪೆದ್ದಪ್ಪಯ್ಯ. ಆರ್​.ಎಸ್ -ಆಯುಕ್ತ, ಕಲಬುರ್ಗಿ ನಗರ ಪಾಲಿಕೆ, ಕಲಬುರ್ಗಿ
* ಎನ್. ಜಯರಾಮ್ -ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.