ಒಂದು ತಿಂಗಳಿಗೆ 840 ಕೋಟಿ ರು. ಮೊತ್ತದ ಅಕ್ಕಿಯ ಅಗತ್ಯವಿದೆ. ಅಷ್ಟು ಮೊತ್ತ ನೀಡಲು ನಾವು ಸಿದ್ಧವಿದ್ದೇವೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ. ಆದರೆ ರಾಜ್ಯ ಬಿಜೆಪಿಗರು ಅನ್ನಭಾಗ್ಯ ಯೋಜನೆಗೆ ಆಗ್ರಹಿಸಿ ಧರಣಿ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಧರಣಿ ನಡೆಸಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ಬೆಂಗಳೂರು(ಜೂ.25): ಕೇಂದ್ರ ಸರ್ಕಾರ ಲಕ್ಷಾಂತರ ಟನ್ ಅಕ್ಕಿ ಇಟ್ಟುಕೊಂಡು ಕುಳಿತಿದೆ. ಆದರೆ ಅನ್ನಭಾಗ್ಯಕ್ಕೆ ಮಾತ್ರ ಕೊಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಆದರೆ ಬಿಜೆಪಿಯವರು ಧರಣಿ ಮಾಡುತ್ತೇವೆ ಎಂದು ಅರ್ಥವಿಲ್ಲದ ಮಾತಾಡುತ್ತಿದ್ದಾರೆ. ಪ್ರತಿಭಟನೆ ನಡೆಸಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿಗೆ 840 ಕೋಟಿ ರು. ಮೊತ್ತದ ಅಕ್ಕಿಯ ಅಗತ್ಯವಿದೆ. ಅಷ್ಟು ಮೊತ್ತ ನೀಡಲು ನಾವು ಸಿದ್ಧವಿದ್ದೇವೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ. ಆದರೆ ರಾಜ್ಯ ಬಿಜೆಪಿಗರು ಅನ್ನಭಾಗ್ಯ ಯೋಜನೆಗೆ ಆಗ್ರಹಿಸಿ ಧರಣಿ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಧರಣಿ ನಡೆಸಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಡವರು ತಿನ್ನುವ ಅಕ್ಕಿಯಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ: ಸಚಿವ ಎಂ.ಬಿ.ಪಾಟೀಲ
ಬಡವರ ಕಾರ್ಯಕ್ರಮಕ್ಕೆ ತೊಂದರೆ ನೀಡಬೇಕೆಂದು ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಅವರ ಬಳಿ ಲಕ್ಷಗಟ್ಟಲೆ ಟನ್ ಅಕ್ಕಿ ಇದ್ದು ಖಾಸಗಿಯವರಿಗೆ ಹರಾಜು ಮಾಡುತ್ತಾರೆ. ಆದರೆ ರಾಜ್ಯಗಳಿಗೆ ನೀಡುವುದಿಲ್ಲ. ಹಣ ನೀಡಿದರೂ ಕೊಡುವುದಿಲ್ಲ. ಒಂದು ಕೆಜಿ ಅಕ್ಕಿಗೆ 36.70 ರು. ನೀಡಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
5 ಗ್ಯಾರಂಟಿ ಪೈಕಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಜು.1 ರಿಂದ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರಲಿದೆ. ಅಕ್ಕಿಯನ್ನೂ ನೀಡಬೇಕೆಂಬ ಉದ್ದೇಶವಿದ್ದರೂ ಅಕ್ಕಿ ದೊರೆಯುತ್ತಿಲ್ಲ. ದೊರೆತರೂ ಹೆಚ್ಚಿನ ದರ ಕೇಳುತ್ತಾರೆ. 2.29 ಲಕ್ಷ ಮೆಟ್ರಿಕ್ ಟನ್ ಎಲ್ಲಿಯೂ ದೊರೆಯುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಪಡೆಯಲು ಟೆಂಡರ್ ಕರೆಯಬೇಕು. 2 ಕೆಜಿಯಂತೆ 6 ತಿಂಗಳಿಗೆ ಆಗುವಷ್ಟು ಜೋಳ, ರಾಗಿ ದಾಸ್ತಾನಿದ್ದು ಜೊತೆಗೆ 3 ಕೆಜಿ ಅಕ್ಕಿ ನೀಡಬೇಕಾಗಿದೆ ಎಂದು ತಿಳಿಸಿದರು.
