DK Shivakumar: ಮಕ್ಕಳಿಗೆ ಏನು ನೀಡಬೇಕೆಂದು ತಾಯಿಗೆ ಗೊತ್ತು: ಡಿಕೆಶಿ ಭಾವುಕ ನುಡಿ

‘ಕಾಂಗ್ರೆಸ್‌ ನನ್ನ ಪಾಲಿನ ದೇವರು, ಪಕ್ಷದ ಕಚೇರಿ ನನ್ನ ಪಾಲಿನ ದೇವಾಲಯ. ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ದೇವರು ಹಾಗೂ ತಾಯಿಗೆ ತನ್ನ ಮಕ್ಕಳಿಗೆ ಏನು ನೀಡಬೇಕೆಂಬುದು ಗೊತ್ತಿರುತ್ತದೆ. ಒಟ್ಟಾರೆ ಕಾಂಗ್ರೆಸ್‌ ಕ್ಷೇಮವೇ ನಮ್ಮ ಆದ್ಯತೆ’ ಎಂದು ದೆಹಲಿಗೆ ತೆರಳುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.

Karnataka CM issue A mother knows what give her children says dk shivakumar at bengaluru rav

ಬೆಂಗಳೂರು (ಮೇ.17) : ‘ಕಾಂಗ್ರೆಸ್‌ ನನ್ನ ಪಾಲಿನ ದೇವರು, ಪಕ್ಷದ ಕಚೇರಿ ನನ್ನ ಪಾಲಿನ ದೇವಾಲಯ. ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ದೇವರು ಹಾಗೂ ತಾಯಿಗೆ ತನ್ನ ಮಕ್ಕಳಿಗೆ ಏನು ನೀಡಬೇಕೆಂಬುದು ಗೊತ್ತಿರುತ್ತದೆ. ಒಟ್ಟಾರೆ ಕಾಂಗ್ರೆಸ್‌ ಕ್ಷೇಮವೇ ನಮ್ಮ ಆದ್ಯತೆ’ ಎಂದು ದೆಹಲಿಗೆ ತೆರಳುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.

‘ಸಿದ್ದರಾಮಯ್ಯ (Siddaramaiah)ಅವರು ಸೋಮವಾರವೇ ದೆಹಲಿಗೆ ತೆರಳಿದ್ದಾರೆ. ನಾನೂ ಕೂಡ ಸೋಮವಾರವೇ ತೆರಳಬೇಕಿತ್ತು. ಆದರೆ, ಅನಾರೋಗ್ಯ ಸಮಸ್ಯೆಯಿಂದ ಹೋಗಲಾಗಲಿಲ್ಲ. ಇದೀಗ ಆರೋಗ್ಯವಾಗಿದ್ದೇನೆ ಹೀಗಾಗಿ ಹೋಗುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌(KC Venugopal) ಅವರು ಒಬ್ಬರೇ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ದೆಹಲಿಗೆ ಒಬ್ಬನೇ ಹೋಗುತ್ತಿದ್ದೇನೆ’ ಎದು ಹೇಳಿದರು.

Karnataka CM: ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಒಕ್ಕಲಿಗರ ಸಂಘ ಆಗ್ರಹ

ಆತಂಕ ಬೇಡ:

‘ಕಾಂಗ್ರೆಸ್‌ ಕ್ಷೇಮವೇ ನಮಗೆ ದೊಡ್ಡ ಶಕ್ತಿ ಹೀಗಾಗಿ ಅದೇ ನಮ್ಮ ಆದ್ಯತೆ. ಕಾಂಗ್ರೆಸ್‌ ಪಕ್ಷ ನಂಬಿ ಜನ ಆಶೀರ್ವಾದ ಮಾಡಿದ್ದಾರೆ. ಅ ನಂಬಿಕೆ ಉಳಿಸಿಕೊಂಡು ಬೆಳೆಸಿಕೊಂಡು ಬರಲು ನಾವೆಲ್ಲರು ಸೇರಿ ಶ್ರಮ ಪಡೆಬೇಕಾಗಿದೆ. ನಿಮ್ಮೆಲ್ಲರ ಆಶೀರ್ವಾದ ರಾಜ್ಯದ ಜನತೆಯ ಪರವಾಗಿ ಇರಲಿ. ಕನ್ನಡ ನಾಡಿನ ಜನತೆ, ತಾಯಿ ಭುವನೇಶ್ವರಿ, ತಾಯಿ ಚಾಮುಂಡೇಶ್ವರಿ ಎಲ್ಲರು ನಮಗೆ ಅನುಗ್ರಹಿಸಲಿ’ ಎಂದು ಮನವಿ ಮಾಡಿದರು.

‘ನಾವು ಕಾನೂನು ಬದ್ಧವಾಗಿ, ದೇಶದ ಸಂವಿಧಾನ ಉಳಿಸುವುದಕ್ಕೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣ ಮಾಡುವ ಕೆಲಸ ಆಗಲಿ. ಎಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ’ ಎಂದರು.

‘ಹೈಕಮಾಂಡ್‌ ಬಳಿ ಮುಖ್ಯಮಂತ್ರಿ ಸ್ಥಾನ ಕೇಳುತ್ತೀರಾ?’ ಎಂಬ ಪ್ರಶ್ನೆಗೆ, ‘ನನ್ನ ಕೆಲಸ ನಾನು ಮಾಡಿದ್ದೇನೆ. ಕಾಂಗ್ರೆಸ್‌ ಪಕ್ಷ ನನ್ನ ತಾಯಿ, ದೇವಸ್ಥಾನ ಎಲ್ಲವೂ ಆಗಿದೆ. ಪ್ರಧಾನ ಕಾರ್ಯದರ್ಶಿ ನೀವು ಒಬ್ಬರೇ ಬರಲಿ ಹೇಳಿದ್ದಾರೆ. ಹೀಗಾಗಿ ನಾನು ಒಬ್ಬನೇ ಹೋಗ್ತಿದ್ದೇನೆ’ ಎಂದಷ್ಟೇ ಹೇಳಿ ಮುಖ್ಯಮಂತ್ರಿ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಸಿಎಂ ಸ್ಥಾನ ಕೊಡಿ ಇಲ್ಲದಿದ್ದರೆ ಶಾಸಕನಾಗಿರುತ್ತೇನೆ, ಖರ್ಗೆ ಮುಂದೆ ಪಟ್ಟು ಹಿಡಿದ ಡಿಕೆ ಶಿವಕುಮಾರ್!

ದೆಹಲಿಯಲ್ಲಿ ನಿನ್ನೆ ಏನೇನಾಯ್ತು?

- ಬೆಳಗ್ಗೆ 9.50: ಬೆಂಗಳೂರು ಏರ್‌ಪೋರ್ಚ್‌ನಿಂದ ದೆಹಲಿಗೆ ಹೊರಟ ಡಿ.ಕೆ ಶಿವಕುಮಾರ್‌

- ಬೆಳಗ್ಗೆ 11: ದೆಹಲಿಯ ಐಟಿಸಿ ಮೌರ್ಯದಲ್ಲಿ ಆಪ್ತರೊಂದಿಗೆ ಸಿದ್ದರಾಮಯ್ಯ ಸಭೆ

- ಮಧ್ಯಾಹ್ನ 12: ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್‌ಗಾಂಧಿ ಜೊತೆ ಸಭೆ

- ಮಧ್ಯಾಹ್ನ 12.15: ದೆಹಲಿಗೆ ತಲುಪಿದ ಡಿ. ಕೆ. ಶಿವಕುಮಾರ್‌

- ಮಧ್ಯಾಹ್ನ 1: ಸಂಸದ ಡಿ.ಕೆ.ಸುರೇಶ್‌ ನಿವಾಸದಲ್ಲಿ ಕೆಲ ಆಪ್ತರ ಜತೆ ಶಿವಕುಮಾರ್‌ ಚರ್ಚೆ

- ಮಧ್ಯಾಹ್ನ 1.30: ಖರ್ಗೆ ನಿವಾಸದಿಂದ ಹೊರಟ ರಾಹುಲ್‌ಗಾಂಧಿ

- ಸಂಜೆ 4: ಆಪ್ತರ ಭೇಟಿಗೆ ಹೊರಟ ಡಿ.ಕೆ.ಶಿವಕುಮಾರ್‌

- ಸಂಜೆ 5: ಸೋನಿಯಾಗಾಂಧಿ ನಿವಾಸದಲ್ಲಿ ಅವರ ಅನುಪಸ್ಥಿತಿಯಲ್ಲಿ ಸುರ್ಜೇವಾಲಾ-ವೇಣುಗೋಪಾಲ್‌ ಸಭೆ

- ಸಂಜೆ 5.10: ಖರ್ಗೆ ನಿವಾಸಕ್ಕೆ ಡಿ.ಕೆ.ಶಿವಕುಮಾರ್‌ ಆಗಮನ

- ಸಂಜೆ 6.5: ಖರ್ಗೆ ನಿವಾಸದಿಂದ ಹೊರಟ ಡಿ.ಕೆ.ಶಿವಕುಮಾರ್‌

- ಸಂಜೆ 6.10: ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ಆಗಮನ

- ಸಂಜೆ 7.45: ಖರ್ಗೆ ನಿವಾಸದಿಂದ ಹೊರಟ ಸಿದ್ದರಾಮಯ್ಯ

- ರಾತ್ರಿ 8: ವೇಣುಗೋಪಾಲ್‌ ನಿವಾಸಕ್ಕೆ ತೆರಳಿದ ಸಿದ್ದು ಮಾತುಕತೆ

Latest Videos
Follow Us:
Download App:
  • android
  • ios