ಶಿವಮೊಗ್ಗ (ಅ.18):  ಲಾಕ್‌ ಡೌನ್ ನಂತರ ಮೊದಲ ಬಾರಿಗೆ ಸಿಎಂ ಬಿ ಎಸ್ ಯಡಿಯೂರಪ್ಪ ಮೊದಲ ಬಾರಿಗೆ ತಮ್ಮ ಸ್ವ ಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ಒಟ್ಟು ಮೂರು ದಿನಗಳ ಕಾಲ ಇಲ್ಲಿ ಇರಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಲನೆ ನೀಡಲಿದ್ದಾರೆ. 

ಇನ್ನು ಶಿಕಾರಿಪುರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿ ಯೋಜನೆ ಗಳನ್ನು ಸಂಸದ ಬಿ ವೈ ರಾಘವೇಂದ್ರ ಕಾರ್ಯಗರ್ತಗೊಳಿಸುತ್ತಿದ್ದಾರೆ.  ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹಾನಿಗೆ ಸಂಭಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮಾತನಾಡಿದ್ದೇನೆ. ಅಗತ್ಯ ಪರಿಹಾರ ನೀಡಲಿದ್ದಾರೆ ಎಂದರು. 

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು, ಈ ವೇಳೆ ಸಿದ್ದುಗೆ ಟಾಂಗ್ ಕೊಟ್ಟ ಈಶ್ವರಪ್ಪ ...

ಸಿಗಂದೂರು ಗಲಾಟೆ ವಿಚಾರ ಪ್ರಸ್ತಾಪ 

ಸಿಗಂದೂರು ದೇವಾಲಯದಲ್ಲಿ ನಡೆಯುತ್ತಿರುವ ಗಲಾಟೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಿಎಂ ಯಡಿಯೂರಪ್ಪ ಈ ಗಲಾಟೆ ಪ್ರಕರಣ ಯಾರಿಗೂ ಶೋಭೆ ತರುವುದಿಲ್ಲ.  ಡಿಸಿ ಸೇರಿದಂತೆ ಅಲ್ಲಿನ ಮುಖಂಡರ ಜೊತೆಗೆ ಮಾತನಾಡಿದ್ದೇನೆ. ಮುಂದೇನು ಮಾಡಬೇಕು ಎಂದು ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಹಾಗೂ ದೇವಾಲಯದ ಮುಖಂಡರ ಜೊತೆಗೆ ಮಾತುಕತೆ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಬಿಜೆಪಿ ಗೆಲುವು  

ಶಿರಾ ಮತ್ತೆ ಆರ್ ಆರ್‌ ನಗರ ಉಪಚುನಾವಣೆ ಮುಂದಿನ ನವೆಂಬರ್ 3ಕ್ಕೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಎರಡೂ ಉಪಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲ್ಲುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದರು. 

'ಬಿಜೆಪಿ ಸರ್ಕಾರ ದಲಿ​ತರ ಮೇಲೆ ಹಿಡಿತ ಸಾಧಿ​ಸಲು ಯತ್ನಿ​ಸು​ತ್ತಿ​ದೆ' ...

ಇನ್ನು ಪುತ್ರ ವಿಜಯೇಂದ್ರ ಶಿರಾ ಕ್ಷೇತ್ರದಲ್ಲೇ ಉಳಿದುಕೊಂಡು ಬಿಜೆಪಿ ಗೆಲುವಿನ ಯತ್ನದಲ್ಲಿದ್ದಾರೆ.  ಮೂರು ದಿನದಿಂದ ವಿಜಯೇಂದ್ರ‌ ಶಿರಾದಲ್ಲೇ ಇದ್ದಾರೆ.  ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮುಂದಾಳತ್ವದಲ್ಲಿ ಶಿರಾದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ ಎಂದು ಹೇಳಿದರು.