ಲಾಕ್‌ಡೌನ್ ಬಗ್ಗೆ ಚರ್ಚೆ: ಸಭೆಯಲ್ಲಿ ಅಂತಿಮವಾಗಿ ಮಹತ್ವದ ತೀರ್ಮಾನಕ್ಕೆ ಬಂದ ಸಿಎಂ
ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಬಗ್ಗೆ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಒಂದು ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ನಿವಾಸದಲ್ಲಿ ನಡೆದ ಸಭೆಯ ಇನ್ ಸೈಡ್ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್.30): ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಇಂದು (ಮಂಗಳವಾರ) ಮಹತ್ವದ ಸಭೆ ನಡೆಯಿತು.
ಲಾಕ್‍ಡೌನ್ ಅನಿವಾರ್ಯ, ಈ ಬಗ್ಗೆ ನಿರಂತರವಾಗಿ ನಡೀತಿದೆ ಸಭೆ: ಸುಳಿವು ಕೊಟ್ಟ ಅಶೋಕ್
ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ಲಾಕ್ ಡೌನ್ ಬಗ್ಗೆ ಚರ್ಚೆ ನಡೆದಿದ್ದು, ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಭಾಗವಹಿಸಿದ್ದರು, ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಒಂದು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಭೆಯ ಇನ್ ಸೈಡ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಅದು ಈ ಕೆಳಗಿನಂತಿದೆ.
ಅಂತರ್ ಜಿಲ್ಲಾ ಸಂಚಾರ ಬಂದ್‌ಗೆ ಚಿಂತನೆ
ಸಂಪೂರ್ಣ ಲಾಕ್‌ಡೌನ್ ಬದಲಾಗಿ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿದ್ರೆ ಹೇಗೆ ಎಂದು ಸಿಎಂ ಅಧಿಕಾರಿಗಳ ಬಳಿ ಅಭಿಪ್ರಾಯ ಕೇಳಿದ್ದಾರೆ. ಆದ್ರೆ, ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಏಕಾಏಕಿ ಅಂತರ್ ಜಿಲ್ಲಾ ಓಡಾಟಕ್ಕ ಬ್ರೇಕ್ ಹಾಕಿದ್ರೆ ತೊಂದರೆ ಆಗತ್ತೆ . ಬೆಂಗಳೂರು ಗ್ರಾಮಾಂತರದಿಂದ ಬೆಂಗಳೂರು ನಗರಕ್ಕೆ ಬಂದು ಕೆಲಸ ಮಾಡೋರು ಇರ್ತಾರೆ. ಹೀಗಾಗಿ ಅಂಥವರಿಗೆ ಏನು ಮಾಡೋದು ಎಂದು ಅಧಿಕಾರಿಗಳು ಸಿಎಂ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.
ಲಾಕ್‌ಡೌನ್ ಬದಲ ಪರ್ಯಾಯ ಮಾರ್ಗ
ಹೌದು... ಒಂದು ವೇಳೆ ಕೊರೋನಾ ಮತ್ತಷ್ಟು ಹೆಚ್ಚಳವಾಗುತ್ತಿದ್ರೆ, ಲಾಕ್‌ಡೌನ್ ಬದಲಾಗಿ ಅಂತರ್ ಜಿಲ್ಲಾ ಸಂಚಾರವನ್ನು ಬಂದ್ ಮಾಡೋಣ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.
ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?: 6 ತಿಂಗಳು ಇದೇ ಸ್ಥಿತಿ
ಸ್ವಲ್ಪ ಸಮಯ ನೋಡೊಣ, ಕೊರೋನಾ ಹೀಗೆ ಹೆಚ್ಚಳ ಆಗುತ್ತಿದ್ರೆ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕೋಣ. ಅದಕ್ಕೊಂದು ರೂಪುರೇಷೆ ಸಿದ್ಧ ಮಾಡಬೇಕಾಗತ್ತೆ ಎಂದು ಅಧಿಕಾರಿಗಳು ಸಿಎಂಗೆ ಮನವರಿಕೆ ಮಾಡಿದ್ದಾರೆ.
ಸರಿ ಹಾಗೆ ಮಾಡೋಣ, ಕೊರೋನಾ ಕೈ ಮೀರುವ ಹಂತಕ್ಕೆ ಹೋಗುವ ಸೂಚನೆ ಸಿಕ್ಕರೆ ಮಾತ್ರ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕೋಣ ಎಂದು ಸಭೆಯಲ್ಲಿ ಸಿಎಂ ಒಂದು ಅಂತಿಮ ನಿರ್ಧಾರಕ್ಕೆ ಬಂದರು. ಈ ಮೂಲಕ ಮತ್ತೆ ಲಾಕ್ ಡೌನ್ ಬಗ್ಗೆ ಸಿಎಂ ಮತ್ತು ಅಧಿಕಾರಿಗಳು ಒಲವು ಹೊಂದಿಲ್ಲ ಎಂದು ಸ್ಪಷ್ಟವಾಗಿದೆ.