ಬೆಂಗಳೂರು(ಮಾ.22): ಮಹಾಮಾರಿ ಕೊರೋನಾ ಸೋಂಕು ವಿರುದ್ಧ ದೇಶವ್ಯಾಪಿ ಬೃಹತ್‌ ಜನ ಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಜನತಾ ಕಫä್ರ್ಯ’ ಆಂದೋಲನಕ್ಕೆ ಈಗಾಗಲೇ ರಾಜ್ಯಾದ್ಯಂತ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿರುವುದರಿಂದ ಭಾನುವಾರದ ‘ಜನತಾ ಕಕರ್ಫ್ಯೂ’ ಯಶಸ್ವಿಯಾಗುವುದು ಬಹುತೇಕ ಖಚಿತವಾದಂತಿದೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಭಾನುವಾರ ಲಭ್ಯವಿರಲಿವೆ. ಜೊತೆಗೆ ಪೆಟ್ರೋಲ್‌ ಬಂಕ್‌ಗಳು ಕಾರ್ಯ ನಿರ್ವಹಿಸಲಿದ್ದು, ರೈಲುಗಾಡಿಗಳು ಸಂಚರಿಸಲಿವೆ. ಇಷ್ಟನ್ನು ಬಿಟ್ಟರೆ ಬೇರಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಎಲ್ಲಾ ರೀತಿಯ ಸಂಸ್ಥೆಗಳು ಹಾಗೂ ಸಂಘಟನೆಗಳು ಈ ಆಂದೋಲನಕ್ಕೆ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿರುವುದರಿಂದ ಇಡೀ ರಾಜ್ಯ ಸ್ತಬ್ಧವಾಗುವ ನಿರೀಕ್ಷೆಯಿದೆ.

 

ಜನತಾ ಕರ್ಫ್ಯೂ: ದೇಶವಿಂದು ಸ್ತಬ್ಧ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾನುವಾರವಾದ್ದರಿಂದ ಯಾವುದೇ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ. ಬಹುತೇಕ ಖಾಸಗಿ ಕೈಗಾರಿಕೆಗಳು, ಗಾರ್ಮೆಂಟ್ಸ್‌ ಸೇರಿದಂತೆ ಎಲ್ಲ ಕಾರ್ಖಾನೆಗಳೂ ಬಂದ್‌ ಆಗಿರಲಿವೆ. ಖಾಸಗಿ ಆಸ್ಪತ್ರೆಗಳೂ ಆಂದೋಲನ ಬೆಂಬಲಿಸಿ ಒಪಿಡಿ ಬಂದ್‌ ಮಾಡುವುದಾಗಿ ಘೋಷಿಸಿವೆ. ಆದರೆ, ತುರ್ತು ಸೇವೆಗಳು ಲಭ್ಯವಿರುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ಹೇಳಿದೆ. ಇನ್ನು ಸರ್ಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸಾರಿಗೆ ಸೌಲಭ್ಯ ಲಭ್ಯವಿರುವುದಿಲ್ಲ.

ಖಾಸಗಿ ಬಸ್ಸು, ಆಟೋ, ಟ್ಯಾಕ್ಸಿ, ಕ್ಯಾಬ್‌ ಮಾಲೀಕರು ಕಫä್ರ್ಯಗೆ ಬೆಂಬಲ ಘೋಷಿಸಿದ್ದಾರೆ. ಹೋಟೆಲ್‌ ಮಾಲೀಕರ ಸಂಘಗಳು, ಮಾರುಕಟ್ಟೆಗಳ ವ್ಯಾಪಾರಿಗಳ ಸಂಘಟನೆಗಳು, ಜ್ಯುವೆಲ್ಲರಿ ಮಳಿಗೆಗಳ ಮಾಲೀಕರ ಸಂಘಟನೆ, ಬೀದಿ ವ್ಯಾಪಾರಿಗಳ ಸಂಘಟನೆಗಳು ಕೂಡ ಜನತಾ ಕಫä್ರ್ಯ ಬೆಂಬಲಿಸಿ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆ ವರೆಗೂ ತಮ್ಮ ಸೇವೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿವೆ. ಹಾಗಾಗಿ ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲಾ ರೀತಿಯ ಸೇವೆಗಳೂ ಸಂಪೂರ್ಣ ಬಂದ್‌ ಆಗುವುದು ಬಹುತೇಕ ಖಚಿತ.

ಶಾಲಾ, ಕಾಲೇಜುಗಳಿಗೆ ಸರ್ಕಾರವೇ ತಾತ್ಕಾಲಿಕ ಬಂದ್‌ ಮಾಡಿದೆ. ಪಬ್‌, ಬಾರು ಅಂಡ್‌ ರೆಸ್ಟೋರೆಂಟ್‌, ಚಿತ್ರಮಂದಿರಗಳ ಮೇಲೆ ಈಗಾಗಲೇ ಸರ್ಕಾರ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರಿಂದ ಅವುಗಳು ಬಂದ್‌ ಆಗಿರಲಿವೆ. ಅಲ್ಲದೆ, ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಸೇರಿದಂತೆ ಬಹುತೇಕ ಮಾರುಕಟ್ಟೆಗಳೂ ಕಾರ್ಯ ಸ್ಥಗಿತಗೊಳಿಸಲಿವೆ ಎಂದು ಅಲ್ಲಿನ ವ್ಯಾಪಾರಿಗಳ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ. ಇನ್ನು, ಬೀದಿ ಬದಿ ವ್ಯಾಪಾರಿಗಳು ಕೂಡ ಕಫä್ರ್ಯಗೆ ಬೆಂಬಲಿಸಿ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ.

ಗುರುವಾರ ರಾತ್ರಿ ಪ್ರಧಾನಿ ಮೋದಿ ಅವರು ಜನರಿಂದ ಜನರಿಗಾಗಿ ಜನರಿಗೋಸ್ಕರ ಘೋಷಿಸಿದ ‘ಜನತಾ ಕಫä್ರ್ಯ’ ಕುರಿತ ಪ್ರಕಟಿಸುತ್ತಿದ್ದಂತೆ, ವ್ಯಾಪಕ ಪ್ರಚಾರದ ಮೂಲಕ ರಾಜ್ಯದ ಉದ್ದಗಲಕ್ಕೂ ಹರಡಿ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ. ಇದರ ಪರಿಣಾಮ ರಾಜಧಾನಿ ಬೆಂಗಳೂರಿನಿಂದ ಗ್ರಾಮೀಣ ಭಾಗದ ಸಣ್ಣ ಪುಟ್ಟಹಳ್ಳಿಗಳವರೆಗೂ ಎಲ್ಲ ಜನರೂ ಜನತಾ ಕಫä್ರ್ಯ ಬೆಂಬಲಿಸಿ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆ ವರೆಗೂ ಮನೆಯಿಂದ ಹೊರಗೆ ಬರದಿರಲು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿರುವ ಲಕ್ಷಣಗಳು ಶನಿವಾರವೇ ಎಲ್ಲೆಡೆ ಗೋಚರವಾಗಿವೆ. ಹೀಗಾಗಿ ರಾಜ್ಯದಲ್ಲಿ ಜನತಾ ಕಫä್ರ್ಯ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆ ದೊಡ್ಡದಾಗಿದೆ.

ಏನೇನು ಇರುತ್ತೆ?

ಹಾಲು, ಪತ್ರಿಕೆ, ಔಷಧಿ ಮತ್ತಿತರ ಅಗತ್ಯ ವಸ್ತುಗಳು. ಸರ್ಕಾರಿ ಆಸ್ಪತ್ರೆಗಳು, ಔಷಧಿ ಮಳಿಗೆಗಳು, ಪೆಟ್ರೋಲ್‌ ಬಂಕ್‌. ವಿಮಾನ.

ಏನೇನು ಇರಲ್ಲ?

ರೈಲು, ಮೆಟ್ರೋ, ಆಟೋ, ಓಲಾ, ಉಬರ್‌ ಟ್ಯಾಕ್ಸಿ, ಕ್ಯಾಬ್‌, ಖಾಸಗಿ ಬಸ್‌. ಮಾರುಕಟ್ಟೆ, ಎಪಿಎಂಸಿ, ಮಾಲ್‌, ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಜ್ಯುವೆಲ್ಲರಿ ಶಾಪ್‌.

ಇವು ಸಿಕ್ಕರೂ ಸಿಗಬಹುದು

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳನ್ನು ರಸ್ತೆಗಿಳಿಸದಿರಲು ಸರ್ಕಾರ ತೀರ್ಮಾನಿಸಿದ್ದರೂ, ಪ್ರಯಾಣಿಕರು ಹೆಚ್ಚಾಗಿ ಕಂಡುಬಂದು ಅಗತ್ಯವೆನಿಸಿದರೆ ಸೀಮಿತ ಸಂಖ್ಯೆಯ ಬಸ್ಸುಗಳ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.