SC-ST ಮೀಸಲಾತಿ ಏರಿಕೆಗೆ ಸುಗ್ರೀವಾಜ್ಞೆ ತರಲು ನಿರ್ಧರಿಸಿದ ಸಂಪುಟ
Karnataka cabinet meeting: ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗಾಗಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಆದರೆ ಮೀಸಲಾತಿ ಏರಿಕೆಯನ್ನು ಯಾವ ರೀತಿ ಮಾಡುತ್ತಾರೆ, ಬೇರೆ ಸಮುದಾಯ ಮೀಸಲಾತಿಯನ್ನು ಕಡಿಮೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಸ್ಪಷ್ಟತೆ ಸಿಕ್ಕಿಲ್ಲ.
ಬೆಂಗಳೂರು: ಇಂದು ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಸ್ ಸಿ ಎಸ್ ಟಿ ಮೀಸಲಾತಿ ಪ್ರಮಾಣ ಏರಿಕೆ ಮಾಡುವ ವಿಚಾರಕ್ಕೆ ಸುಗ್ರೀವಾಜ್ಞೆ ಜಾರಿ ಮಾಡಲು ಒಕ್ಕೊರಲಿನಿಂದ ನಿರ್ಧರಿಸಲಾಗಿದೆ. ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆಯಾಗಿದ್ದು ಎಸ್‌ಸಿ-ಎಸ್‌ಟಿ ಮೀಸಲಾತಿ ಕುರಿತಂತೆ ಸುಘ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಕಾನೂನು ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಇಲಾಖೆಯ ಸಲಹೆಯಂತೆ ಸುಘ್ರೀವಾಜ್ಞೆಗೆ ತೀರ್ಮಾನ ಮಾಡಲಾಗಿದೆ. ಕಾನೂನು ಇಲಾಖೆ ಸಲಹೆ ಪ್ರಕಾರ ಸುಗ್ರೀವಾಜ್ಞೆ ತರಲು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸಹ ಸಹಮತ ವ್ಯಕ್ತಪಡಿಸಿದರು. ಸಂಪುಟ ಸಭೆಯಲ್ಲಿ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು ಸುಗ್ರೀವಾಜ್ಞೆಗೆ ನಿರ್ಧರಿಸಲಾಗಿದೆ, ಎಂದು ಮೂಲಗಳು ತಿಳಿಸಿವೆ.
ಮೀಸಲಾತಿ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲ:
ಮೀಸಲಾತಿಯನ್ನು ಯಾವ ಮೂಲದಿಂದ ಕೊಡ್ತೇವೆ ಅನ್ನೋ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯೇ ಇಲ್ಲ. ಮೀಸಲಾತಿಗೆ ಅರ್ಹವಾಗಿರುವ ಜಾತಿಗಳ ಸಂಖ್ಯೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿಯಲ್ಲಿ 103 ಜಾತಿ ಇದೆ. ಪರಿಶಿಷ್ಟ ಪಂಗಡದಲ್ಲಿ 56 ಜಾತಿ ಇದೆ. Need Based (ಅಗತ್ಯಕ್ಕನುಗುಣವಾಗಿ) ಮೀಸಲಾತಿ ನೀಡಲು ಸರ್ಕಾರ ಚಿಂತನೆ ಮಾಡಿದೆ. ಮೀಸಲಾತಿ ಹೆಚ್ಚಳದ ಫಲ EWS (Economically weaker Section) ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ಆದರೆ ಯಾವುದಕ್ಕೂ ಸರಿಯಾದ ಸ್ಪಷ್ಟತೆಯಿಲ್ಲ.
ಈ ಭಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧು ಸ್ವಾಮಿ, "ನಾವು ಸುಗ್ರೀವಾಜ್ಞೆ ತರುವಾಗ ಸಂವಿಧಾನದ ಪ್ರಕಾರವೇ ಕ್ರಮ ಜರುಗಿಸುತ್ತೇವೆ. ಕೋರ್ಟ್ ನಲ್ಲೂ ನಮಗೆ ರಕ್ಷಣೆ ಸಿಗುವ ವಿಶ್ವಾಸವಿದೆ. ಸಮುದಾಯಗಳ ಹೆಚ್ಚಳ ನಮ್ಮ ಪ್ರಯತ್ನಕ್ಕೆ ಪೂರಕ ಆಗಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಯಾವ ಮೂಲದಿಂದ ಮೀಸಲಾತಿ ಕಿತ್ತು ಕೊಡ್ತಿರಿ..? ಅಂತ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡದ ಸಚಿವ ಮಾಧುಸ್ವಾಮಿ.
ಸಂಪುಟ ಸಭೆಯಲ್ಲಿ ಚರ್ಚೆಯಾದ ಇತರ ವಿಷಯಗಳು:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ: "ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ ವಿಶೇಶ ನಿಯಮಗಳು,ಅನುಮೋದನೆ ನೀಡುವ ಬಗ್ಗೆ.
ಸಮಾಜ ಕಲ್ಯಾಣ ಇಲಾಖೆ
ಜಗಜೀವನ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಡಚ್ ಅಸಿಸ್ಟೆಡ್ ಪ್ರಾಜೆಕ್ಟ್ ಮತ್ತು ಇತರೆ ಯೋಜನೆಗಳಡಿ ನಿರ್ಮಿಸಿ - ಪರಿಶಿಷ್ಟ ಜಾತಿಯ ಕುಶಲಕರ್ಮಿಗಳಿಗೆ ಹಂಚಿಕೆ ಮಾಡಿರುವ ಕಾರ್ಯಾಗಾರಗಳನ್ನು ವಸತಿ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಕೊಡುವ ಬಗ್ಗೆ.
ಸಾರಿಗೆ ಇಲಾಖೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವನ್ನು ರೂ. 12.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ
ನಗರಾಭಿವೃದ್ಧಿ ಇಲಾಖೆ
ಬೆಂಗಳೂರಿನ 23.3. ನಗರ ಹಂತದಲ್ಲಿರುವ 2022 | ತಿರುಮಲೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಸಂಸ್ಥೆಗೆ ನೀಡಿರುವ 31,215 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಾಗದ ಗುತ್ತಿಗೆ ಅವಧಿಯನ್ನು ದಿನಾಂಕ: 01.04.2001 ರಿಂದ ಅನ್ವಯವಾಗುವಂತ 30 ವರ್ಷಗಳ ಅವಧಿಗೆ ನವೀಕರಿಸುವ ಬಗ್ಗೆ.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೊಟ್ಟೇ ಸರ್ಕಾರ ಚುನಾವಣೆಗೆ ಹೋಗುತ್ತೆ; ವಚನಾನಂದ ಶ್ರೀ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು (SWD) ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ರೂ. 1500.00 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರ್ಕಾರದ ಅನುಮತಿ ನೀಡಿ ದಿನಾಂಕ: 30.05.2022 ರಂದು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನ ನೀಡುವ ಬಗ್ಗೆ.
ಜಲಸಂಪನ್ಮೂಲ ಇಲಾಖೆ
ಜಲಸಂಪನ್ಮೂಲ ಅಡಿಯ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತು ನಿರ್ವಹಣೆಯ “ಕರಡು ನೀತಿ ಹಾಗೂ ಮಾರ್ಗಸೂಚಿಗಳಿಗೆ ಅನುಮೋದನ ನೀಡುವ ಬಗ್ಗೆ.
ಕಾಗವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನ | ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ 23 ಕರೆಗಳನ್ನು ತುಂಬಿಸುವ ಯೋಜನೆಯ229.40 ಕೋಟಿ ರೂ.ಅಂದಾಜು ಮೊತ್ತದ ಯೋಜನೆಗೆ ನೀಡುವ ಬಗ್ಗೆ.
ಇದನ್ನೂ ಓದಿ: SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?
2022-23ನೇ ಸಾಲಿಗೆ ಐ.ಈ.ಬಿ.ಆ ಅಡಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಅವಧಿ ಸಾಲಗಳ (Terry Loan) - ಮೂಲಕ 250.00 ಕೋಟಿಗಳ ಹಣ ಸಂಗ್ರಹಿಸಲು ಹಾಗೂ ಸರ್ಕಾರಿ ಖಾತರಿಗೆ ಅನುಮೋದನೆ ನೀಡುವ ಬಗ್ಗೆ.2022-23ನೇ ಸಾಲಿಗೆ ಐ.ಈ.ಬಿ.ಆರ್ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ (Term Loan ಮೂಲಕ ರೂ. 850.00 ಕೋಟಿಗಳ ಹಣ ಸಂಗ್ರಹಿಸಲು ಹಾಗೂ ಸರ್ಕಾರಿ ಖಾತರಿಗೆ ಅನುಮೋದನೆ ನೀಡುವ ಬಗ್ಗೆ