ಸಚಿವ ಸತೀಶ್ ಜಾರಕಿಹೊಳಿ ಅವರು, ಬಿಜೆಪಿ ಪಾಕಿಸ್ತಾನ ಮತ್ತು ಮುಸ್ಲಿಂ ಪದಗಳನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಬಜೆಟ್ ಹಂಚಿಕೆ ಮಾಡಿದರೆ, ಬಿಜೆಪಿಯವರು ಟೀಕಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿ (ಮಾ.8) ಪಾಕಿಸ್ತಾನ ಹಾಗೂ ಮುಸ್ಲಿಂ ಈ ಎರಡು ಪದಗಳು ಬಿಜೆಪಿಗರಿಗೆ ಸಂಜೀವಿನಿ ಇದ್ದಂತೆ. ಹೀಗಾಗಿ ಪಾಕಿಸ್ತಾನ ಎಂತ ಹೇಳಿದರೆ ಎಲ್ಲರೂ ಅವರ ಕಡೆ ನೋಡುತ್ತಾರೆ ಎಂಬ ಉದ್ದೇಶದಿಂದ ಪಾಕಿಸ್ತಾನ ಬಜೆಟ್ ಎಂದು ಟೀಕಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ಎಂದರೆ ಬರೀ ಮುಸ್ಲಿಂರು ಬರಲ್ಲ. ಐದಾರು ಸಮುದಾಯದ ಜನ ಬರುತ್ತಾರೆ. ಅವರಿಗೆ ಸ್ವಲ್ಪ ಬಜೆಟ್ ಕೊಟ್ಟಿದ್ದಾರೆ. ಆದರೆ ಬಿಜೆಪಿಗರಿಗೆ ಅಲ್ಪಸಂಖ್ಯಾತರೆಂದರೆ ಬರೀ ಮುಸ್ಲಿಂ ಮಾತ್ರ ಕಾಣಿಸುತ್ತಾರೆ. ಹೀಗಾಗಿ ಏನೇನೋ ಟೀಕಿಸುತ್ತಾರೆ. ಅವರಿಗೆ ಪಾಕಿಸ್ತಾನ ಹಾಗೂ ಮುಸ್ಲಿಂ ಎಂದರೆ ಸಂಜೀವಿನಿ ಇದ್ದಂತೆ. ಹೀಗಾಗಿ ಅದನ್ನೇ ಹೇಳುತ್ತಾರಷ್ಟೇ ಎಂದರು.
ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ನಮಗೆ ಸಂತೋಷವಾಗಿದೆ ಎಂದ ಅವರು, ಜನಪರ ಬಜೆಟ್ ಇದಾಗಿದೆ. ಇದು ಇಂಪ್ಲಿಮೆಂಟ್ ಆಗಬೇಕು ಎಂದರು.
ಇದನ್ನೂ ಓದಿ:Karnataka Budget 2025 | ಹೊಸ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲವೇ? ಇಲ್ಲಿದೆ ಸಂಪೂರ್ಣ ವಿವರ, ಸೇವ್ ಮಾಡಿಟ್ಕೊಳ್ಳಿ!
