ಗುಂಡ್ಲುಪೇಟೆ(ಜೂ.22): ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಮಾತ್ರ ಬಾವಿಯೊಳಗೆ ಅಡಗಿ ಕುಳಿತು ಚಳ್ಳೆಹಣ್ಣು ತಿನ್ನಿಸಿತ್ತು. ಬಾವಿಯೊಳಗೆ ನಾಯಿ ಕಟ್ಟಿದ ಬೋನು ಇಡಲಾಗಿತ್ತು. 

ಬಾವಿಯ ಪೊಟರೆ ಬಳಿ ಕಲ್ಲನ್ನು ಕೊರೆಯಲಾಗಿತ್ತು. ಅಗ್ನಿ ಶಾಮಕ ದಳದ ವಾಹನದ ಮೂಲಕ ನೀರು ಹಾಕಲಾಗಿತ್ತು. ಆದರೂ ಚಿರತೆ ಹೊರ ಬಂದಿರಲಿಲ್ಲ. ಕೊನೆಗೆ ಶುಕ್ರವಾರ ರಾತ್ರಿ ಬಾವಿಯೊಳಗೆ ಏಣಿಯನ್ನು ಇಡಲಾಗಿತ್ತು. ಶನಿವಾರ ರಾತ್ರಿ ಚಿರತೆ ಏಣಿಯ ಮೂಲಕ ಮೇಲೆ ಬಂದು ಕಾಡಿನತ್ತ ಹೋಗಿದೆ. 

ಚಾಮರಾಜನಗರದಲ್ಲಿ 5 ದಿನದ ಶಿಶು ಜೊತೆ ಯುವತಿ ಪರಾರಿ

ಈ ಸಂಬಂಧ ಎಸಿಎಫ್‌ ಕೆ.ಪರಮೇಶ್‌ ಮಾತನಾಡಿ, ಬಾವಿಯೊಳಗೆ ಅವಿತು ಕುಳಿತಿದ್ದ ಚಿರತೆ ಏಣಿಯ ಮೇಲೆ ಏರಿ ಬಂದಿದೆ ಎಂದು ಸ್ಪಷ್ಟಪಡಿಸಿದರು. ಕಾಡಂಚಿನ ಗ್ರಾಮಗಳ ರೈತರು ತೆರೆದ ಬಾವಿಗಳನ್ನು ಮುಚ್ಚುವ ಮೂಲಕ ಇಂಥ ಪ್ರಕರಣ ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದರು.