ಬೆಂಗಳೂರು(ಜು.03): ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಲೆಹ್ಗೆ ಭೇಟಿ ನೀಡಿದ ಬಗ್ಗೆ ಸಿಎಂ ಬಿ. ಎಸ್. ಯಡಿಯೂರಪ್ಪ,  ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ಮುಖಂಡರು ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭ ಕೆ. ಎಸ್ ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಲಡಾಖ್ ಭೇಟಿಯ ಫೋಟೋಸ್ ಪೋಸ್ಟ್ ಮಾಡಿದ ಸಚಿವ ಕೆ. ಎಸ್. ಈಶ್ವರಪ್ಪ, ಮೋದಿ ಪ್ರಧಾನಿ ಆಗಲು ಲಾಯಕ್ಕಿಲ್ಲ, ಮನೆ ಬಿಟ್ಟು ಹೊರಬಂದಿಲ್ಲ ಎಂದು ನಿನ್ನೆ ಪುಂಗಿ ಉದ್ದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ: ಇಂದು ಪ್ರಧಾನಿ ನರೇಂದ್ರ ಮೋದಿಜಿ ಲಡಾಕ್ ರಾಜಧಾನಿ ಲೆಹ್‌ಗೆ ಭೇಟಿ ನೀಡಿ ಅಲ್ಲಿನ ಪ್ರಸ್ತುತ ಸಂಗತಿಗಳ ಬಗ್ಗೆ ಸೇನಾಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ.ಒಬ್ಬ ದೇಶಪ್ರೇಮಿ ಪ್ರಧಾನಿ ಏನೆಂದು ತೋರಿಸಿದ್ದಾರೆ ಎಂದು ಬರೆದಿದ್ದಾರೆ.

ಚೀನಾ ಗಡಿ ಖ್ಯಾತೆ: ಬೆಳ್ಳಂಬೆಳಗ್ಗೆ ಲಡಾಖ್‌ಗೆ ಬಂದಿಳಿದ ಪ್ರಧಾನಿ ಮೋದಿ..!

ಈ ಮೂಲಕ ಡಿಕೆಶಿ ಪದಗ್ರಹಣ ಸಮಾರಂಭದಲ್ಲಿ ಮೋದಿ ಪ್ರಧಾನಿಯಾಗಲು ಲಾಯಕ್ಕಿಲ್ಲ. ಮನೆಯಿಂದ ಹೊರ ಬರುವುದೇ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ಅವರು ಟಾಂಗ್ ಕೊಟ್ಟಿದ್ದಾರೆ.

ಮೋದಿ ಫೋಟೋ ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ಮುಂದೆ ನಿಂತು ಮುನ್ನಡೆಸುವವನೇ ನಾಯಕ (Leader who leads from the front!) ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಲಡಾಖ್‌ನಲ್ಲಿದ್ದಾರೆ. ಅವರು ಇಂದು ಬೆಳಗ್ಗೆ ಲೆಹ್‌ಗೆ ತಲುಪಿದ್ದಾರೆ. ಅವರು ಯೋಧರೊಂದಿಗೆ ಹಾಗೂ ಸೇನಾ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಸಾರ್ವಭೌಮತೆ ವಿಷಯದಲ್ಲಿ ಕಿಂಚಿತ್ತೂ ರಾಜಿ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶವನ್ನು ಚೀನಾ ಸೇರಿದಂತೆ ಜಗತ್ತಿಗೆ ಸಾರಲು ಮತ್ತು ಗಡಿಯಲ್ಲಿ ನಮ್ಮ ಸೇನಾಪಡೆಗಳನ್ನು ಹುರಿದುಂಬಿಸಲು ಇಂದು ಸ್ವತಃ ಪ್ರಧಾನಿ ಶ್ರೀ  ಲೇಹ್ ಬಳಿ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿ, ಗಾಲ್ವಾನ್ ಕಣಿವೆಯ ಧೈರ್ಯಶಾಲಿಗಳನ್ನು ಭೇಟಿಯಾಗಿದ್ದಾರೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಲಡಾಖ್‌ನಲ್ಲಿದ್ದಾರೆ. ಅವರು ಇಂದು ಬೆಳಗ್ಗೆ ಲೆಹ್‌ಗೆ ತಲುಪಿದ್ದಾರೆ. ಅವರು ಯೋಧರೊಂದಿಗೆ ಹಾಗೂ ಸೇನಾ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.