Asianet Suvarna News Asianet Suvarna News

ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ: ಯಡಿಯೂರಪ್ಪ ಹೇಳಿದ್ದೇನು?

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಇನ್ನು ಈ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ.. 

Karnataka BJP chief BS yeddyurappa Reacts on 5 states Assembly elections Result
Author
Bengaluru, First Published Dec 11, 2018, 6:58 PM IST

ಬೆಳಗಾವಿ, [ಡಿ.11]: ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ರಿಸೆಲ್ಟ್ ಹೊರ ಬಿದ್ದಿದ್ದು, ಈ ಫಲಿತಾಂಶ ಎಲ್ಲರ ಊಹೆ ಉಲ್ಟಾ ಪಲ್ಟಾ ಮಾಡಿದೆ. 

ಕಳೆದ ಕೆಲ ವರ್ಷಗಳಿಂದ ದೇಶಾದ್ಯಂತ ಗೆಲುವಿನ ನಾಗಲೋಟ ಮುಂದುವರಿಸಿದ್ದ ಪ್ರಧಾನಿ ಮೋದಿಗೆ ಇವತ್ತು ಬ್ರೇಕ್ ಬಿದ್ದಿದೆ. ಸ್ವತಃ ಮೋದಿಯೇ ನಿಂತು ಸಾಲು ಸಾಲು ರ್ಯಾಲಿ, ಸಮಾವೇಶಗಳನ್ನು ಮಾಡಿದರೂ 5 ರಾಜ್ಯಗಳ ಪೈಕಿ ಒಂದರಲ್ಲೂ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ 

ಇನ್ನು ಈ ಫಲಿತಾಂಶವನ್ನ ರಾಜಕೀಯ ನಾಯಕರು ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದು, ಕೆಲವರು ಈ ರಿಸಲ್ಟ್ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುತ್ತಿದ್ದರೆ, ಬಿಜೆಪಿ ನಾಯಕರು ಮಾತ್ರ ಇದನ್ನು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ನರೇಂದ್ರ ಮೋದಿವರನ್ನ ಬಿಟ್ಟರೆ ಪ್ರಧಾನಿ ಆಗೋ ಅರ್ಹತೆ ಯಾರಿಗಿದೆ ಹೇಳಿ ಎಂದು ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ಹಿನ್ನೆಡೆ ಆಗಿರೋದು ನಿಜ. ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರ ಸಿಗುತ್ತೆ ಅಂದುಕೊಂಡಿದ್ದೇವು.  ಆದ್ರೆ ಆಡಳಿತ ವಿರೋಧಿ ಅಲೆ  ಕೆಲಸ ಮಾಡಿದ್ದು,  ಎಲ್ಲಿ ತಪ್ಪಾಗಿದೆಯೋ ಅಲ್ಲಿ ಅದನ್ನು ಪಕ್ಷ  ಕೂತು ಚರ್ಚೆ ಮಾಡುತ್ತೆ ಎಂದರು.

Follow Us:
Download App:
  • android
  • ios