Asianet Suvarna News Asianet Suvarna News

ಬಿಟ್‌ ಕಾಯಿನ್‌ ಹಗರಣದ ತನಿಖೆ ಮತ್ತಷ್ಟು ಚುರುಕು, ಪೊಲೀಸರ ವಿರುದ್ಧವೇ ಎಸ್‌ಐಟಿ ಎಫ್‌ಐಆರ್ ದಾಖಲು!

ಎಸ್ ಐಟಿ ಯಿಂದ ಬಿಟ್ ಕಾಯಿನ್ ತನಿಖೆ ಚುರುಕುಗೊಂಡಿದ್ದು, ಈ ಹಿಂದೆ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

Karnataka Bitcoin Scam case SIT officer filed FIR against accuses  CCB  sleuths gow
Author
First Published Aug 11, 2023, 11:14 AM IST

ಬೆಂಗಳೂರು (ಆ.11):  ಬಿಟ್ ಕಾಯಿನ್ ತನಿಖೆ ಚುರುಕುಗೊಂಡಿದ್ದು ಹಿಂದಿನ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ವಿಶೇಷ ತನಿಖಾ ದಳ (SIT)  ಡಿವೈಎಸ್ಪಿ ಕೆ ರವಿಶಂಕರ್ ಅವರು  ಎಫ್ಐಆರ್ ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ , ಹಾಗು ಆ್ಯಪ್ ಮ್ಯಾಕ್ ಬುಕ್ ನಲ್ಲಿ ಮೂಲ ಫೈಲ್ ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್ ಗಳನ್ನ ಸೃಷ್ಟಿಸಲಾಗಿದೆ. ಪ್ರಕರಣದ ತನಿಖೆಯನ್ನ ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನ ತಿರುಚಲಾಗಿದೆ.

ಬಿಟ್‌ ಕಾಯಿನ್‌ ಹೂಡಿಕೆ ಹೆಸರಲ್ಲಿ 87 ಲಕ್ಷ ರೂ. ದೋಖಾ: ಮೈಸೂರಲ್ಲಿ ಮಹಾನ್‌ ವಂಚಕರು

ಸೆಪ್ಬಂಬರ್ 9 -  2020 ರಿಂದ ಡಿಸೆಂಬರ್ 16 - 2020 ರ ಅವಧಿಯಲ್ಲಿ ಸಿಸಿಬಿ (Central Crime Branch) ಕಚೇರಿ ಹಾಗೂ ಇತರೆಡೆ ಅಕ್ರಮ ನಡೆದಿದೆ. ಸಿಸಿಬಿ ತನಿಖಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಒಳಸಂಚು ರೂಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಡಿಜಿಟಲ್ ಉಪಕರಣಗಳಲ್ಲಿ ಹೆಚ್ಚುವರಿಯಾಗಿ ಫೈಲ್ ಸೃಷ್ಟಿಸಿದ್ದಾರೆ ಅಂತಾ ಎಸ್ ಐಟಿ ಡಿವೈ ಎಸ್ ಪಿ ಯಿಂದ ದೂರು ದಾಖಲಾಗಿದ್ದು, ಹಿಂದಿನ ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.

ಬಿಟ್‌ ಕಾಯಿನ್‌ ಹಗರಣ ಮರುತನಿಖೆ: ಅನುಮಾನಕ್ಕೆ ಕಾರಣವಾಯ್ತು ಸರ್ಕಾರದ ಆದೇಶ!

ಬಿಟ್‌ ಕಾಯಿನ್‌ ಹಗರಣ ತನಿಖೆ ಎಸ್‌ಐಟಿಗೆ, ಕೋಟ್‌ಗೆ ಮಾಹಿತಿ: ಬಿಟ್‌ ಕಾಯಿನ್‌ ಹಗರಣದ (Bitcoin scam) ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ - Special Investigation Team) ವಹಿಸಲಾಗಿದ್ದು, ಆ ಕುರಿತು ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು. ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಕಾನೂನು ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಪೀಠ ವಾದ, ಪ್ರತಿವಾದ ಆಲಿಸಿ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿತಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾದದ ಸಾರಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪಕ್ಷಗಾರರಿಗೆ ಸೂಚಿಸಿತು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ಅರ್ಜಿದಾರರ ವಿರುದ್ಧ ವಿವಿಧೆಡೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಆದರೂ ಮತ್ತೆ ಕಾಮನ್‌ ಎಫ್‌ಐಆರ್‌ ದಾಖಲಿಸಲಾಗಿದೆ. ಆ ಎಫ್‌ಐಆರ್‌ ರದ್ದುಪಡಿಸಿದರೆ ಹೆಚ್ಚಿನ ತನಿಖೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಆಗ ಅಡ್ವೊಕೇಟ್‌ ಜನರಲ್‌ ಅವರು, ಬಿಟ್‌ ಕಾಯಿನ್‌ ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ಬಗ್ಗೆ ದಾಖಲೆ ಸಲ್ಲಿಸಲಾಗುವುದು ಎಂದರು.

Follow Us:
Download App:
  • android
  • ios