ವಿಧಾನ ಸಭೆಯಲ್ಲಿ ಸರ್ಕಾರವು ಎರಡು ಮಹತ್ವದ ವಿಧೇಯಕಗಳನ್ನು ಮಂಡಿಸಿದೆ. ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕವು ನಗರ ಆಡಳಿತದಲ್ಲಿ ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದರೆ, ಸಾಮಾಜಿಕ ಬಹಿಷ್ಕಾರ ಪ್ರತಿಬಂಧಕ ಮಸೂದೆಯು ಸಮಾಜದಲ್ಲಿ ಬಹಿಷ್ಕಾರ ಹಾಕುವವರಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.

ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ ಮಂಗಳವಾರ ಎರಡು ಮಹತ್ವದ ವಿಧೇಯಕಗಳನ್ನು ಸರ್ಕಾರ ಮಂಡಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ನಗರಾಭಿವೃದ್ಧಿ ಸಚಿವ ಡಾ. ಹೆಚ್‌ ಸಿ. ಮಹಾದೇವಪ್ಪ ಅವರು ಗ್ರೇಟರ್ ಬೆಂಗಳೂರು ಎರಡನೇ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಅದಕ್ಕೂ ಜೊತೆಯಾಗಿ ತಮ್ಮ ಇಲಾಖೆಗೆ ಸಂಬಂಧಿಸಿದ ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆ ಯನ್ನೂ ಅವರು ಸಭೆಯ ಮುಂದಿಟ್ಟರು.

ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಕಾರಣವೇನು?

ಉದ್ದೇಶಗಳು ಮತ್ತು ಕಾರಣಗಳು

(i)ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸದಸ್ಯರಾಗಿ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನ ಸಭೆ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರುಗಳನ್ನು ಸೇರಿಸಲು.

(ii)ಮತ್ತು ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಮತ್ತು ಸರ್ಕಾರದ ಅಪರ ಕಾರ್ಯದರ್ಶಿ/ ಸರ್ಕಾರದ ಪೂನ (@) ಗೇಟರ್ ಬೆಂಗಳೂರು ಪ್ರಾಧಿಕಾರಕ್ಕೆ, ಪದನಿಮಿತ ಸದಸ್ಯರುಗಳನ್ನಾಗಿ ಸರ್ಕಾರದ ಅಂ ಕಾರ್ಯದರ್ಶಿ ಆರ್ಥಿಕ ಇಲಾಖೆ ಇವರನ್ನು ಸೇರಿಸಲು;

(iii) ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಸರ್ಕಾರದ ಅಪರ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರನ್ನು ಸೇರಿಸಲು,

(iv) ಹೊಸದಾಗಿ ನಿಗಮಿತಗೊಳಿಸಲಾದ ಸ್ಥಳೀಯ ಪ್ರದೇಶಗಳ ಸಂಬಂಧದಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆಯನ್ನು ನಿರ್ದಿಷ್ಟ ಅವಧಿಯೊಳಗೆ ಕೈಗೊಳ್ಳುವುದಕ್ಕಾಗಿ ಉಪಬಂಧಿಸಲು;

(v) ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಹೊಸದಾಗಿ ಸೇರಿಸಲಾದ ಸ್ಥಳೀಯ ಪ್ರದೇಶಗಳಿಗಾಗಿ ಚುನಾವಣೆಗಳನ್ನು ನಡೆಸುವುದಕ್ಕೆ ಸ್ಪಷ್ಟತೆಯನ್ನು ನೀಡಲು;

(vi) ಈ ಅಧಿನಿಯಮದ 30 (ಇ) ಪ್ರಕರಣದಡಿ ನಾಮನಿರ್ದೇಶಿಸಲಾದ ಸದಸ್ಯರನ್ನು ಸಮನ್ವಯ ಸಮಿತಿಯ ಸದಸ್ಯರನ್ನಾಗಿ ಪರಿಗಣಿಸಲು..

ಸಾಮಾಜಿಕ ಬಹಿಷ್ಕಾರ ಪ್ರತಿಬಂಧ ವಿಧೇಯಕ, ಮಸೂದೆಯ ಪ್ರಮುಖ ಅಂಶಗಳು

1. ಸಾಮಾಜಿಕ ಬಹಿಷ್ಕಾರಕ್ಕೆ ಕಠಿಣ ಶಿಕ್ಷೆ

  • ಗರಿಷ್ಠ ಮೂರು ವರ್ಷದ ಜೈಲು
  • ಒಂದು ಲಕ್ಷ ರೂಪಾಯಿ ದಂಡ
  • ಎಂಬ ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ.

2. ಬಹಿಷ್ಕಾರ ವಿಧಿಸುವ ಸಭೆಗಳು ನಿಷೇಧ

  • ಸಾಮಾಜಿಕ ಬಹಿಷ್ಕಾರ ಜಾರಿಗೆ ಬರಲು ಸಭೆ ಸೇರುವುದು ನಿಷೇದ
  • ಒತ್ತಡ ಅಥವಾ ಗುಂಪು ನಿರ್ಧಾರ ತಪ್ಪೆಂದು ಮಸೂದೆ ಹೇಳಿದೆ.

3. ಅಪರಾಧಕ್ಕೆ ಸಹಕರಿಸಿದವರಿಗೆ ಸಹ ಶಿಕ್ಷೆ

  • ಬಹಿಷ್ಕಾರಕ್ಕೆ ನೆರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದವರಿಗೂ
  • ಅದೇ ಮಟ್ಟದ ಮೂರು ವರ್ಷ ಜೈಲು ವಿಧಿಸಲಾಗುತ್ತದೆ.

4. ಹಿಂದಿನ ಬಹಿಷ್ಕಾರ ಕ್ರಮಗಳ ಅನೂರ್ಜಿತತೆ

  • ಹಿಂದಿನ ಯಾವುದೇ ಸಾಮಾಜಿಕ ಬಹಿಷ್ಕಾರ ಕ್ರಮಗಳು
  • ಮನವೊಲಿಸುವ ಶಕ್ತಿಯಿಲ್ಲದವು ಮತ್ತು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

5. ದಂಡನೆಗೆ ಮೊದಲು ಸಂತ್ರಸ್ತನ ಹೇಳಿಕೆ ಕಡ್ಡಾಯ

  • ಶಿಕ್ಷೆ ವಿಧಿಸುವ ಮೊದಲು ಸಂತ್ರಸ್ತನ ಹೇಳಿಕೆ, ಅವರ ಅನುಭವ, ಬಹಿಷ್ಕಾರದ ಪರಿಣಾಮಗಳ ವಿಚಾರಣೆ

ನಗರಾಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆ ಎರಡೂ ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಉದ್ದೇಶಿಸುವ ಈ ಎರಡು ಮಸೂದೆಗಳು ರಾಜ್ಯದ ಆಡಳಿತಾತ್ಮಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.

ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕವು ನಗರ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವ ಸಾಧ್ಯತೆ ಇದ್ದರೆ, ಸಾಮಾಜಿಕ ಬಹಿಷ್ಕಾರ ಮಸೂದೆ ಸಮಾಜದ ದುರುಪಯೋಗಕಾರಿ ಪರಂಪರೆಗಳಿಗೆ ಕಾನೂನುಬದ್ಧ ಕಡಿವಾಣ ಹಾಕುವ ಹೆಜ್ಜೆಯಾಗಿದೆ.