ಸುವರ್ಣ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ವೇಳೆ, ಬಿಜೆಪಿ ಶಾಸಕ ಅಭಯ್ ಪಾಟೀಲ್ 'ಒಂದು-ಎರಡು ಬಾಳೆಲೆ ಹರಡು' ಹಾಡನ್ನು ಕಾಂಗ್ರೆಸ್ ಸರ್ಕಾರಕ್ಕೆ ಅನ್ವಯಿಸಿ ಹಾಡಿನ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯವನ್ನು ವ್ಯಂಗ್ಯವಾಡಿ ಸರ್ಕಾರದ ಕಾಲೆಳೆದರು.

ಸುವರ್ಣ ವಿಧಾನಸಭೆ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಮ್ಮ ಭಾಷಣದ ಕೊನೆಯಲ್ಲಿ ಒಂದು, ಎರಡು ಬಾಳೆಲೆ ಹರಡು... ಹಾಡನ್ನು ಕಾಂಗ್ರೆಸ್‌ ಸರ್ಕಾರಕ್ಕೆ ಅನ್ವಯಿಸಿಕೊಂಡು ಹಾಡಿ ಸರ್ಕಾರದ ಕಾಲೆಳೆದ ಪ್ರಸಂಗ ಜರುಗಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಒಂದು-ಎರಡು ಬಣಗಳು ಎರಡು, ಮೂರು-ನಾಲ್ಕು ಲೆಕ್ಕ ಹಾಕು, ಐದು-ಆರು ಡಿನ್ನರ್ ಜೋರು, ಏಳು-ಎಂಟು ಯಾರ ಕಡೆಗೆ ನಂಟು, ಒಂಬತ್ತು-ಹತ್ತು ದೆಹಲಿಗೆ ಹತ್ತು, ಒಂದರಿಂದ ಹತ್ತು ಭಿನ್ನಮತ ಹೀಗಿತ್ತು. ಹೈಕಮಾಂಡ್ ತಲೆ ಕೆಡಿಸಿತ್ತು. ಕರ್ನಾಟಕ ಕಾಂಗ್ರೆಸ್ ಹಾಳಗೆಡವಿತ್ತು...’ ಎಂದು ಹಾಡನ್ನು ಹಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಇತ್ತೀಚಿನ ಆಂತರಿಕ ಬೆಳವಣಿಗೆಗಳ ಕುರಿತು ವ್ಯಂಗ್ಯವಾಡಿದರು.

- ಒಂದು-ಎರಡು ಬಣಗಳೆರಡು । ಐದು-ಆರು ಡಿನ್ನರ್‌ ಜೋರು । ಹಾಡಿನ ಮೂಲಕ ಸರ್ಕಾರಕ್ಕೆ ವ್ಯಂಗ್ಯ

ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಶಾಸಕ ಅಭಯ್‌ ಪಾಟೀಲ್‌, ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ನಾವು ಚಿಕ್ಕವರಾಗಿದ್ದಾಗ ನಮ್ಮ ಶಾಲೆಯಲ್ಲಿ ಒಂದು ಹಾಡು ಹೇಳಿ ಕೊಡುತ್ತಿದ್ದರು ಎಂದು ಒಂದು-ಎರಡು ಬಾಳೆಲೆ ಹರಡು ಹಾಡನ್ನು ಹಾಡಿದರು.